Karawar: ಗೋ ರಕ್ಷಣೆಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಕಾರವಾರದ ಯುವಕ

ಕಾಮಧೇನು ಆಗಿರುವ  ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ರೋಶನ್ ಒತ್ತಾಯಿಸಿದ್ದಾರೆ.  ಉತ್ತರಪ್ರದೇಶದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಕೂಡ ರಕ್ತದಲ್ಲಿ ಪತ್ರ ಬರೆದು ಕಳಿಸಿದ್ದಾರೆ.

ರಕ್ತದಲ್ಲಿ ಪತ್ರ ಬರೆಯುತ್ತಿರುವ ಯುವಕ

ರಕ್ತದಲ್ಲಿ ಪತ್ರ ಬರೆಯುತ್ತಿರುವ ಯುವಕ

  • Share this:
ಕಾರವಾರ(ಜು.22): ರಾಜ್ಯದಲ್ಲಿ ಗೋ ರಕ್ಷಣೆಯ ಕಾನೂನು ಜಾರಿಗೆ ತಂದಿದ್ದರೂ ಕೂಡ  ಗೋ ಹತ್ಯಾ ಘಟನೆಗಳು ನಡೆಯುತ್ತಲೇ ಇದೆ. ಕದ್ದು ಮುಚ್ಚಿ ಜಾನುವಾರುಗಳ ಸಾಗಾಟ ಪ್ರಕರಣಗಳು ಕಂಡುಬರುತ್ತಿದೆ. ಗೋ ಸಂತತಿಗಳನ್ನ ರಕ್ಷಿಸಬೇಕು. ಗೋವನ್ನ ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೋಷನ್ ಸೆಟಿಯಾ ಎಂಬ  ಯುವಕ ತನ್ನ ರಕ್ತದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ. 

ಗೋವುಗಳನ್ನ ಇಂದು ನಾವು ಪೂಜನೀಯ ಭಾವನೆಯಿಂದ ಗೌರವಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಾಮಧೇನು ಭಾವನಾತ್ಮಕವಾಗಿವೆ. ಆದ್ರೆ ದೇಶದ ವಿವಿಧೆಡೆ ಗೋ ಹತ್ಯೆ ಮತ್ತು ಅಕ್ರಮವಾಗಿ ಗೋವುಗಳ ಸಾಗಾಟ ಪ್ರಕರಣ ನಡೆದೆ ಇದೆ. ಕಳೆದ ಹಲವು ಗೋ ಸಂರಕ್ಷಣೆಗಾಗಿ ಗೋ ಪ್ರೇಮಿಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾದ ರೋಶನ್ ಸೆಟಿಯಾ ಎಂಬ ಯುವಕ  ಗೋಹತ್ಯೆ ನಿಷೇಧಕ್ಕಾಗಿ ಕಳೆದ ಐದಾರು ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದಾರೆ. ಆದ್ರೆ ಗೋ ಹತ್ಯೆ ಮುಂದುವರಿದಿರೋದ್ರಿಂದ ಈಗ ತನ್ನ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾನೆ.

ಇದನ್ನೂ ಓದಿ:D K Shivakumar: ಕಾಂಗ್ರೆಸ್​ನಲ್ಲೂ ಮೇಜರ್ ಸರ್ಜರಿ, ಡಿಕೆಶಿ ಅಧ್ಯಕ್ಷ ಗಾದಿಗೇ ಕಂಟಕ? ಮುಂದಿನ ಅಧ್ಯಕ್ಷ ಯಾರು ?

ಗೋ ರಕ್ಷಣಾ ಹೋರಾಟದಲ್ಲಿ ನಿರಂತರ

ರೋಶನ ಸೆಟಿಯಾ ಗೋರಕ್ಷಣಾ ಹೋರಾಟದಲ್ಲಿ  ನಿರಂತರವಾಗಿ ಸಕ್ರೀಯರಾಗಿದ್ದಾರೆ. ಕಾರವಾರ ನಗರದಲ್ಲಿ ಎಲ್ಲಿಯಾದರೂ ಅಪಘಾತವಾಗಿ ಆಕಳುಗಳು ಗಾಯಗೊಂಡು ಬಿದ್ದಿದ್ದರೆ, ತಮ್ಮ ಗೋ ಸಮಿತಿ ಸದಸ್ಯರೊಂದಿಗೆ ಧಾವಿಸಿ ಅವುಗಳ ರಕ್ಷಣೆ ಮಾಡ್ತಾರೆ. ಆದ್ರೆ ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಗೋ ಹತ್ಯಾ ನಿಷೇಧ ಕಾನೂನನ್ನ ಜಾರಿಗೆ ತರಲಾಗಿದೆ. ಆದ್ರೂ ಕೂಡ ಗೋಹತ್ಯಾ ಘಟನೆಗಳು ನಡೆಯುತ್ತಿರೋದು ರೋಶನ್ ಅವರಿಗೆ ಬೇಸರ ತರಿಸಿದೆ. ಹೀಗಾಗಿ ತಮ್ಮ ರಕ್ತದ ಮೂಲಕ ಪತ್ರ ಬರೆದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ವಿನಂತಿಸಿದ್ದಾರೆ.

ಕಾಮಧೇನು ಆಗಿರುವ  ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ರೋಶನ್ ಒತ್ತಾಯಿಸಿದ್ದಾರೆ.  ಉತ್ತರಪ್ರದೇಶದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಕೂಡ ರಕ್ತದಲ್ಲಿ ಪತ್ರ ಬರೆದು ಕಳಿಸಿದ್ದಾರೆ.  ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೆ ತಂದಿದ್ದರೂ ಕೂಡ ಕಾರುಗಳ ಮೂಲಕ ಗೋವುಗಳನ್ನ ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ಅಕ್ರಮವಾಗಿ ದಂದೆ ಮಾಡುವವರಿಗೆ ಸಲೀಸಾಗಿ  ಪರಿಣಮಿಸಿದೆ. ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚು ಮಾಡಿ ವಾಹನಗಳನ್ನ ತಪಾಸಣೆ ಮಾಡಬೇಕು. ಅಲ್ಲದೇ   ಕಠಿಣ ಕಾನೂನು ಜಾರಿಗೊಳಿಸಿ ಸಂಪೂರ್ಣವಾಗಿ ಗೋವುಗಳನ್ನ ರಕ್ಷಿಸಬೇಕೆಂಬುದು ಗೋ ಪ್ರೇಮಿಗಳ ಒತ್ತಾಯವಾಗಿದೆ.

ಇದನ್ನೂ ಓದಿ:Karnataka Weather Today: ಇಂದು ನಾಳೆ ರಾಜ್ಯದಲ್ಲಿ ಮಳೆಯ ಆರ್ಭಟ; ಈ ಜಿಲ್ಲೆಗಳಲ್ಲಿ ಆರೆಂಜ್​-ಯೆಲ್ಲೋ ಅಲರ್ಟ್​ ಘೋಷಣೆ

ಗೋವು  ಮಾತೆಯ ಸಮಾನವಾಗಿದ್ದು  ಕೊಲ್ಲುವುದು ಮಹಾಪರಾಧ. ಆದ್ರೂ ದೇಶದ ವಿವಿಧೆಡೆ ಪ್ರತಿದಿನ  ಗೋವುಗಳ ಹತ್ಯೆ ನಡೆಯುತ್ತಿದೆ. ಅದನ್ನು ತಡೆಯಲು ಪ್ರಬಲ ಕಾನೂನು ತರಬೇಕು. ಗೋವನ್ನ ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕೆಂದು ಪ್ರೇಮಿ ಒತ್ತಾಯಿಸಿದ್ದಾರೆ.  ಇನ್ನಾದರೂ ಗೋ ಸಂರಕ್ಷಣೆಯಾಗಲಿ ಎಂಬುದು ಗೋ ಪ್ರೇಮಿಗಳ ಬಯಕೆಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: