HOME » NEWS » District » KARAWAR PEOPLE PROTEST AGAINST GOA GOVERNMENT FOR CORONA TESTING FEES LG

ಕೊರೋನಾ ಟೆಸ್ಟ್ ನೆಪದಲ್ಲಿ ಜನರಿಂದ 2 ಸಾವಿರ ವಸೂಲಿ; ಗೋವಾ ಸರ್ಕಾರದ ವಿರುದ್ಧ ಸಿಡಿದೆದ್ದ ಕಾರವಾರಿಗರು

ಗೋವಾ ಸರಕಾರದ ಮಾರ್ಗಸೂಚಿ ಪ್ರಕಾರ, ಯಾವುದೇ ವ್ಯಕ್ತಿ ಗೋವಾ ಪ್ರವೇಶ ಮಾಡಬೇಕಿದ್ರೆ ಕೋವಿಡ್ ಟೆಸ್ಟ್ ನೆಪದಲ್ಲಿ ಗಡಿಯಲ್ಲೇ 2000ರೂ ನೀಡಿ ಗೋವಾ ರಾಜ್ಯದ ಮಡಗಾಂವನಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.  ಗೋವಾಗೆ ಹೋಗುವ ವ್ಯಕ್ತಿ ತಾನು ಗೋವಾ ಪ್ರವೇಶ ಮಾಡುವ 48 ಗಂಟೆ ಮುಂಚಿತವಾಗಿ ಕೋವಿಡ್-19 ನೆಗೆಟಿವ್ ವರದಿ ಪಡೆದುಕೊಂಡು ಗೋವಾ ಪ್ರವೇಶ ಮಾಡತಕ್ಕದ್ದು,  ಗೋವಾ ಪ್ರವೇಶ ಮಾಡುವ ವ್ಯಕ್ತಿ ಗೋವಾಗೆ ಹೋದ ಮೇಲೆ 14ದಿನಗಳ ಕಾಲ ಹೋಂ‌ಕ್ವಾರಂಟೈನ್ ಆಗಬೇಕು.

news18-kannada
Updated:August 29, 2020, 2:47 PM IST
ಕೊರೋನಾ ಟೆಸ್ಟ್ ನೆಪದಲ್ಲಿ ಜನರಿಂದ 2 ಸಾವಿರ ವಸೂಲಿ; ಗೋವಾ ಸರ್ಕಾರದ ವಿರುದ್ಧ ಸಿಡಿದೆದ್ದ ಕಾರವಾರಿಗರು
ಕಾರವಾರ ಜನರ ಪ್ರತಿಭಟನೆ
  • Share this:
ಕಾರವಾರ (ಆ.29): ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಹೇರಿದ್ದ ಅಂತರ ರಾಜ್ಯ ಗಡಿ ನಿರ್ಬಂಧಕ್ಕೆ ಕೇಂದ್ರ ಸರಕಾರವೇ ಈಗ ನಿರ್ಬಂಧ ವಾಪಾಸ್ ಪಡೆದು ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದೆ. ಆದ್ರೆ ಗೋವಾ ರಾಜ್ಯ ಸರಕಾರ ಗಡಿ ತೆರವು ಮಾಡದೆ ಕೇಂದ್ರದ ಮಾರ್ಗಸೂಚಿಯನ್ನ ಮುಕ್ತವಾಗಿ ಪಾಲಿಸುತ್ತಿಲ್ಲ. ಇದನ್ನು ವಿರೋಧಿಸಿ ಇವತ್ತು ಕಾರವಾರದ ವಿವಿಧ ಕನ್ನಡ ಪರ ಸಂಘಟನೆಯವರು ಒಂದಾಗಿ ಗೋವಾ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿದರು.

ಕಾರವಾರ-ಗೋವಾ ಗಡಿಭಾಗ ಮಾಜಾಳಿ ಪೋಳೆಂ ಬಳಿ ಒಂದಾದ ವಿವಿಧ ಸಂಘಟನೆಯ ಕಾರ್ಯಕರ್ತರು ಗೋವಾ ಸರಕಾರದ ವಿರುದ್ದ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಗೋವಾ ಪ್ರವೇಶ ಮಾಡಬೇಕಿದ್ರೆ ಗೋವಾ ಸರಕಾರ ಈಗ ಪ್ರತಿಯೊಬ್ಬನಿಗೆ ಕೋವಿಡ್ ಟೆಸ್ಟ್ ಹೆಸರಲ್ಲಿ 2000 ವಸೂಲಿ ಮಾಡುತ್ತಿದ್ದು ಈ ನಿಯಮ ಗೋವಾ ಸರಕಾರದ ಹಗಲು ದರೋಡೆ ಎಂದು ಆರೋಪಿಸಿ ಪ್ರತಿಭಟನಾಕಾರರು ಕಿಡಿಕಾರಿದರು.

ಆಂಟಿಜೆನಿಕ್ ಟೆಸ್ಟ್ ಮಾಡಿಸಿಕೊಳ್ಳಲು 800ರೂ ಇದೆ ಆದ್ರೆ ಗೋವಾ ಸರಕಾರ 2000ರೂ ವಸೂಲಿ ಮಾಡುತ್ತಿದ್ದು ಬಡವರ ಕಿಸೆಗೆ ಕತ್ತರಿ ಹಾಕುತ್ತಿದೆ ಎಂದು ಇದನ್ನ ಖಂಡಿಸಿ ಕಾರವಾರದ ಜನ ಗಡಿಯಲ್ಲಿ ಗೋವಾ ಸರಕಾರದ ವಿರುದ್ದ ಸಿಡಿದೆದ್ದರು. ಕೊನೆಯಲ್ಲಿ ಸ್ಥಳಕ್ಕೆ ಆಗಮಿಸಿದ ಗೋವಾ ರಾಜ್ಯದ  ಜಿಲ್ಲಾಧಿಕಾರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪ್ರತಿಕ್ರೀಯಿಸಿದ ಗೋವಾ ರಾಜ್ಯದ ಅಧಿಕಾರಿ ಸರಕಾರ ಹೇಗೆ ಕ್ರಮ ಕೈಗೊಳ್ಳತ್ತೊ ಅದನ್ನ ನಾವು ಪಾಲಿಸುತ್ತಿದ್ದೆವೆ ಎಂದು ಹಾರಿಕೆ ಉತ್ತರ ನೀಡಿ ಹೋದರು. ಆಗ ಮತ್ತೆ ಆಕ್ರೋಷಿತರಾದ ಪ್ರತಿಭಟನಾಕಾರರು ಸೆಪ್ಟಂಬರ್ 1ನೇ ತಾರೀಖಿನಿಂದ ಗೋವಾ ರಾಜ್ಯಕ್ಕೆ ಮುಕ್ತ ಅವಕಾಶ ನೀಡದೆ ಇದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.

ವಾತಾವರಣದಲ್ಲಿ ಅಧಿಕಗೊಳ್ಳುತ್ತಿರುವ ಕಾರ್ಬನ್ ಡೈಆಕ್ಸೈಡ್​; ಅಪಾಯಕಾರಿ ಕಾಯಿಲೆಗಳಿಗೆ ಆಹ್ವಾನ

ಗೋವಾ ಸರಕಾರದ ನಿಯಮಗಳೇನು?

ಗೋವಾ ಸರಕಾರದ ಮಾರ್ಗಸೂಚಿ ಪ್ರಕಾರ, ಯಾವುದೇ ವ್ಯಕ್ತಿ ಗೋವಾ ಪ್ರವೇಶ ಮಾಡಬೇಕಿದ್ರೆ ಕೋವಿಡ್ ಟೆಸ್ಟ್ ನೆಪದಲ್ಲಿ ಗಡಿಯಲ್ಲೇ 2000ರೂ ನೀಡಿ ಗೋವಾ ರಾಜ್ಯದ ಮಡಗಾಂವನಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.  ಗೋವಾಗೆ ಹೋಗುವ ವ್ಯಕ್ತಿ ತಾನು ಗೋವಾ ಪ್ರವೇಶ ಮಾಡುವ 48 ಗಂಟೆ ಮುಂಚಿತವಾಗಿ ಕೋವಿಡ್-19 ನೆಗೆಟಿವ್ ವರದಿ ಪಡೆದುಕೊಂಡು ಗೋವಾ ಪ್ರವೇಶ ಮಾಡತಕ್ಕದ್ದು,  ಗೋವಾ ಪ್ರವೇಶ ಮಾಡುವ ವ್ಯಕ್ತಿ ಗೋವಾಗೆ ಹೋದ ಮೇಲೆ 14ದಿನಗಳ ಕಾಲ ಹೋಂ‌ಕ್ವಾರಂಟೈನ್ ಆಗಬೇಕು. ಹೀಗೆ ಗೋವಾ ಸರಕಾರ ಗೋವಾ ಬರುವವರಿಗೆ ಮಾರ್ಗಸೂಚಿ ನೀಡಿದೆ. ಆದರೆ ಕೇಂದ್ರ ಸರಕಾರ ಈಗಾಗಲೇ ಅಂತರ ರಾಜ್ಯ ಗಡಿ ತೆರವು ಮಾಡಲು ಸೂಚನೆ ನೀಡಿದ್ದು, ಎಲ್ಲಾ ಗಡಿ ತೆರವು ಆಗಿದೆ. ಆದ್ರೆ ಗೋವಾ ಸರಕಾರ ಮಾತ್ರ ಇದನ್ನ ಪಾಲಿಸದೆ ಇರೋದು ಜನರಿಗೆ ತೀರಾ ಕಿರಿ ಕಿರಿ ಆಗುವುದರ ಜೊತೆ ಕಿಸೆಗೆ ಕತ್ತರಿ ಬೀಳುತ್ತಿದೆ.
ಗೋವಾ ಸರಕಾರದಿಂದ ಬೇಸತ್ತ ಕಾರವಾರದ ಜನ

ಗೋವಾ ಸರಕಾರ ಇಂತಹ ನಿಯಮ ಜಾರಿ ಮಾಡಿರುವುದರಿಂದ ಗೋವಾ ರಾಜ್ಯದಲ್ಲಿ ಉದ್ಯೋಗಕ್ಕೆ ತೆರಳುವ ಕಾರವಾರದ ಜನ ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಗೋವಾ ರಾಜ್ಯದಲ್ಲಿನ ವಿವಿಧ ಕಂಪನಿಗಳಲ್ಲಿ ಕಾರವಾರದ ಸಾವಿರಾರು ಯುವಕರು ಉದ್ಯೋಗ ಕಂಡುಕೊಂಡಿದ್ದಾರೆ. ಇವರು ಕೆಲಸ ಕಾರ್ಯದ ನಿಮಿತ್ತ ಕಾರವಾರಕ್ಕೆ ಬಂದು ಮತ್ತೆ ವಾಪಸ್ ಆದ್ರೆ 2000ರೂ ಕೊಡೋದು ಸಾಕಷ್ಟು ಸಮಸ್ಯೆ ಆಗುತ್ತದೆ. ಇದರ ಜೊತೆಗೆ ಗೋವಾ ಸರಕಾರದ ನಿಯಮದಂತೆ ಹಣ ನೀಡದೆ ಕ್ವಾರಂಟೈನ್ ಆಗಲು ಬಯಸಿದರೆ, ಇವರು ಉದ್ಯೋಗ ಮಾಡುವ ಕಂಪನಿ ಇವರಿಗೆ ರಜೆ ನಿಡುವುದು ಕಷ್ಟ. ಕೆಲಸ ಕಳೆದುಕೊಳ್ಳುವ ಭಯ ಇರುತ್ತೆ. ಹೀಗಾಗಿ ಬೇರೆ ದಾರಿ‌ ಇಲ್ಲದೆ ಇವರು 2000ರೂ ನೀಡಿ ಗೋವಾಗೆ ಹೋಗುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಗೋವಾ ಸರಕಾರದ ಈ ನೀತಿ ಜನರನ್ನು ಕಂಗೆಡಿಸಿದೆ. ಇದರಿಂದ ಕಾರವಾರದ ಜನ ಗೋವಾ ಸರಕಾರದ ವಿರುದ್ದ ರೊಚ್ಚಿಗೆದ್ದಿದ್ದಾರೆ.
Published by: Latha CG
First published: August 29, 2020, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories