ಕಾರವಾರ; ಉತ್ತರ ಕನ್ನಡ ಜಿಲ್ಲೆಗೆ ರೈಲ್ವೆ ಇಲಾಖೆಯಿಂದ ಅನ್ಯಾಯವಾಗುತ್ತಿದೆ. ಸಣ್ಣಪುಟ್ಟ ರೈಲ್ವೆ ಯೋಜನೆ ಕೂಡಾ ಹೋರಾಟದ ಮೂಲಕ ಪಡೆದುಕೊಳ್ಳಬೇಕಾದ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬಂದೊದಗಿದೆ. ಇಂತಹ ಧೋರಣೆ ನಿಲ್ಲಬೇಕು. ಉತ್ತರ ಕನ್ನಡ ಜಿಲ್ಲೆಗೆ ರೈಲ್ವೆ ಇಲಾಖೆಯಿಂದ ಸೌಕರ್ಯ ಸಿಗಬೇಕೆಂದು ಒತ್ತಾಯಿಸಿ ಇವತ್ತು ಉತ್ತರ ಕನ್ನಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದಿಂದ ಕಾರವಾರ ರೈಲ್ವೆ ನಿಲ್ದಾಣ
ಮುತ್ತಿಗೆ ಪ್ರತಿಭಟನೆ ನಡೆಯಿತು.
ಕಳೆದ ಮೂವತ್ತು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಗೆ ಟರ್ಮಿನಲ್ ರೈಲ್ವೇ ಸ್ಟೇಷನ್ ಬೇಕೆಂದು ಬೇಡಿಕೆ ಇಡಲಾಗಿತ್ತು. ಇದಕ್ಕೆ ಇಲಾಖೆಯಿಂದ ಭರವಸೆ ಸಿಕ್ಕಿತ್ತು. ಆದರೆ ಇದುವರೆಗೂ ಈ ಬೆಡಿಕೆ ಈಡೇರಿಲ್ಲ. ಜತೆಗೆ ಹೋರಾಟ ನಡೆಸಿ ಹೈಕೋರ್ಟ್ ಮೂಲಕ ಕಾರವಾರ-ಬೆಂಗಳೂರು ರೈಲ್ವೇ ಸಂಚಾರವನ್ನು ಕಳೆದ ಐದಾರು ವರ್ಷದ ಹಿಂದೆ ಆರಂಭ ಮಾಡಲಾಗಿತ್ತು. ಆದರೆ ಈಗ ಇದರ ಸಮಯದಲ್ಲಿ ವಿಳಂಬಾತಿ ಮತ್ತು ಬದಲಾವಣೆ ಮಾಡಲಾಗಿದೆ. ಇದಕ್ಕೆ ವಿರೋಧಪಡಿಸಿದ ಹೋರಾಟಗಾರರು ಕೂಡಲೇ ಮುಂಚೆ ಇದ್ದ ಸಮಯದಲ್ಲೆ ರೈಲು ಸಂಚರಿಸಬೇಕೆಂದು ಒತ್ತಾಯಿಸಿದರು. ಕೊಂಕಣ ರೈಲ್ವೇ ಯೋಜನೆಗೆ ಜಮೀನು ಕೊಟ್ಟ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ರೈಲ್ವೆ ಇಲಾಖೆಯ ವಿರುದ್ದ ಹೋರಾಟಗಾರರು ಹರಿಹಾಯ್ದರು.
ಇದನ್ನು ಓದಿ: ಎನ್ಡಿಎ ಜೊತೆಗೆ ಜೆಡಿಎಸ್ ವಿಲೀನ ಇಲ್ಲ; ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ
ಉತ್ತರ ಕನ್ನಡ ಜಿಲ್ಲೆಗೆ ಬೇಕಾದ ಯೋಜನೆಗಳು ಯಾವುದೂ ಕೂಡಾ ಸುಮ್ಮನೆ ಬಂದಿಲ್ಲ. ಬೇಕಾದ ಯೋಜನೆಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಆದರೆ ಜಿಲ್ಲೆಯ ಪರಿಸರಕ್ಕೆ ಮತ್ತು ಜಿಲ್ಲೆಗೆ ಬೇಡವಾದ ಯೋಜನೆಗಳು ಕೇಳದೆ ಬರುತ್ತಿವೆ. ಅದರಲ್ಲಿ ರೈಲ್ವೇಯ ಕೆಲ ಯೋಜನೆಗಳನ್ನ ಉತ್ತರ ಕನ್ನಡ ಜಿಲ್ಲೆಯ ಜನ ನ್ಯಾಯಾಲಯದ ಮೊರೆ ಹೋಗಿ ಪಡೆದುಕೊಂಡಿದ್ದಾರೆ. ಆದರೆ ಜಿಲ್ಲೆಗೆ ಮಾರಕವಾದ ಯೋಜನೆಗಳು ಜಿಲ್ಲೆಗೆ ಬಂದು ಜನರು ಹೋರಾಟ ಮಾಡಿ ಆ ಯೋಜನೆಗಳನ್ನ ಜಿಲ್ಲೆಯಿಂದ ಓಡಿಸಿದ್ದಾರೆ. ಬೆಂಗಳೂರು ಕಾರವಾರ ರೈಲ್ವೇ ಸಂಚಾರ ಕಳೆದ ಐದು ವರ್ಷದಿಂದ ಆರಂಭವಾಗಿದೆ. ಈ ಯೋಜನೆ ಕೂಡಾ ಜಿಲ್ಲೆಯ ಜನರು ಹೋರಾಟದ ಮೂಲಕ ಪಡೆದುಕೊಂಡಿದ್ದಾರೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಜನ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಂಡ್ರೆ ಜಿಲ್ಲೆಯ ಜನರಿಗೆ ಸರಕಾರ ಕೊಟ್ಟ ಕೊಡುಗೆ ಏನು ಎಂದು ಜಿಲ್ಲೆಯ ಜನ ಪ್ರಶ್ನಿಸುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣ ರೈಲ್ವೆ ಯೋಜನೆಗೆ ಅತಿ ಹೆಚ್ಚು ಜಮೀನು ಬಿಟ್ಟುಕೊಟ್ಟವರು ಉತ್ತರ ಕನ್ನಡ ಜಿಲ್ಲೆಯ ಜನ. ಆದರೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅನ್ಯಾವಾಗುತ್ತಿದೆ ಎಂದು ಜಿಲ್ಲೆಯ ಜನ ಮತ್ತು ರೈಲ್ವೇಯ ಯೋಜನೆ ನಿರಾಶ್ರಿತರು ಆರೋಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಅನ್ಯಾಯವಾಗುತ್ತಿದೆ. ಜತೆಗೆ ಉದ್ಯೋಹ ಮೀಸಲಾತಿಯಲ್ಲೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಜನರನ್ನೇ ನಿಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇನ್ನೂ ರೈಲ್ವೆ ಯೋಜನೆಗೆ ಜಮೀನುಕೊಟ್ಟ ನಿರಾಶ್ರಿತರಿಗೆ ಇದುವರೆಗೂ ಪರಿಹಾರವನ್ನು ಸರಕಾರ ಸಮರ್ಪಕವಾಗಿ ನೀಡಿಲ್ಲವಂತೆ. ಇಲ್ಲಿನ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ ಹೊರತು ಸರಕಾರ ಬೇಕಾದ ಯೋಜನೆಗಳನ್ನು ಜಿಲ್ಲೆಯ ಜನರಿಗೆ ನೀಡಿಲ್ಲ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ