ವಾಸ್ತವ ಗೊತ್ತಿಲ್ಲದೇ ಟ್ವೀಟ್ ಮಾಡಿದ್ದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ಕರವೇ ಆಕ್ರೋಶ..!

ಶಾಸಕಿ ಅಂಜಲಿ ನಿಂಬಾಳ್ಕರ್ ರಾಜ್ಯದ ಜನಪ್ರತಿನಿಧಿಯಾಗಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದು ತಪ್ಪು. ಛತ್ರಪತಿ ಶಿವಾಜಿ ಮಹಾರಾಜರಿಗೆ ಕರ್ನಾಟಕದ ಎಲ್ಲಾ ಭಾಗದಲ್ಲಿ ಅತ್ಯಂತ ಗೌರವಿಂದ ಕಾಣಲಾಗುತ್ತದೆ

news18-kannada
Updated:August 12, 2020, 8:13 PM IST
ವಾಸ್ತವ ಗೊತ್ತಿಲ್ಲದೇ ಟ್ವೀಟ್ ಮಾಡಿದ್ದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ಕರವೇ ಆಕ್ರೋಶ..!
ಶಾಸಕಿ ಡಾ. ಅಂಜಲಿ ನಿಂಬಾಳ್ಕರ್
  • Share this:
ಬೆಳಗಾವಿ(ಆಗಸ್ಟ್​​. 12): ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾನೆ ವಿಚಾರ ಇದೀಗ ಬಹುತೇಕ ಇತ್ಯರ್ಥವಾಗಿದೆ. ಆದರೇ ಸ್ಥಳೀಯ ವಾಸ್ತವ ಸ್ಥಿತಿ ತಿಳಿದೇ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶಾಸಕಿ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಬೆಳಗಾವಿಯಲ್ಲಿ ಹೋರಾಟ ನಡೆಸಿದೆ.

ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಧರಣಿ ನಡೆಸಿದರು. ಶಾಸಕಿ ಅಂಜಲಿ ನಿಂಬಾಳ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಸುರೇಶ ತಳವಾರ್, ಕಸ್ತೂರಿ ಭಾವಿ ಸೇರಿ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.ಶಾಸಕಿ ಅಂಜಲಿ ನಿಂಬಾಳ್ಕರ್ ರಾಜ್ಯದ ಜನಪ್ರತಿನಿಧಿಯಾಗಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದು ತಪ್ಪು. ಛತ್ರಪತಿ ಶಿವಾಜಿ ಮಹಾರಾಜರಿಗೆ ಕರ್ನಾಟಕದ ಎಲ್ಲಾ ಭಾಗದಲ್ಲಿ ಅತ್ಯಂತ ಗೌರವಿಂದ ಕಾಣಲಾಗುತ್ತದೆ. ಆದರೇ ವಾಸ್ತವ ತಿಳಿಯದೇ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ತಪ್ಪು ಮಾಡಿದ್ದಾರೆ. ಕೂಡಲೇ ರಾಜ್ಯದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಆಗ್ರಹಿಸಿದ್ದಾರೆ.ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಸಣ್ಣ ವೈಮಸ್ಸು ಆರಂಭವಾಗಿತ್ತು. ಇದನ್ನು ರಾಜಕೀಯ ದಾಳವನ್ನಾಗಿ ಬಳಿಸಿಕೊಳ್ಳಲು ಶಿವಸೇನೆ ನಾಯಕರು ಪ್ರಯತ್ನ ಮಾಡಿದ್ದರು. ಅನೇಕ ಮಹಾರಾಷ್ಟ್ರ ನಾಯಕರು ಮನಗುತ್ತಿ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಈ ವಿಚಾರವನ್ನು ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿವಾದ ಮಾಡಲು ಯತ್ನಿಸಿ ಕೊನೆಗೆ ವಿಫಲರಾಗಿದ್ದಾರೆ. ಮನಗತ್ತಿ ಗ್ರಾಮಸ್ಥರು ಈಗಾಗಲೇ ಗ್ರಾಮದಲ್ಲಿ ಛತಪತಿ ಶಿವಾಜಿ ಮಹರಾಜ್ ಸೇರಿ ಅನೇಕ ಮಹಾನ್ ನಾಯಕರ ಮೂರ್ತಿಯನ್ನು ಒಂದೇ ಕಡೆ ಸ್ಥಾಪನೆ ಮಾಡಲು ನಿರ್ಧರಿಸಿ ಭೂಮಿ ಪೂಜೆಯನ್ನು ಸಹ ಮಾಡಿದ್ದಾರೆ.

ಇದನ್ನೂ ಓದಿ : ನಾನು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು‌ ಹಾಕಿದ್ದಾರೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರುಈ ವಿಚಾರ ಸಂಬಂಧ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಎರಡು ದಿನಗಳ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ರಾಷ್ಟ್ರ ನಾಯಕರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ, ಕೂಡಲೇ ಕ್ಷಮೆ ಕೇಳಬೇಕು. ಮೂರ್ತಿ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಪರ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿತ್ತು.

ಮನಗುತ್ತಿ ಶಿವಾಜಿ ಮೂರ್ತಿ ವಿವಾದವನ್ನು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯಲ್ಲಿ ಬರೆಯಲಾಗಿತ್ತು. ಈ ವಿಚಾರವನ್ನು ಬಾಬರಿ ಮಸೀದಿ ಧ್ವಂಸಕ್ಕೆ ಹೋಲಿಸಲಾಗಿತ್ತು. ಈ ವಿವಾದವನ್ನು ಹೆಚ್ಚು ಮಾಡಲು ಶಿವಸೇನೆ ಎಲ್ಲಾ ರೀತಿಯ ಯತ್ನ ಮಾಡಿದ್ದು ಕೊನೆಗೆ ವಿಫಲವಾಗಿದೆ. ಗ್ರಾಮಸ್ಥರು ಛತ್ರಪತಿ ಶಿವಾಜಿ, ಕೃಷ್ಣ, ಮಹಾತ್ಮ ಬಸವೇಶ್ವರ, ಸಂವಿದಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ವಾಲ್ಮೀಕಿ ಮೂರ್ತಿಯನ್ನು ಒಂದೇ ಕಡೇ ಸ್ಥಾಪನೆ ನಿರ್ಧಾರ ಮಾಡಿ ಮಹಾ ನಾಯಕರ ಬಾಯಿಗೆ ಬೀಗ ಹಾಕಿದ್ದಾರೆ.
Published by: G Hareeshkumar
First published: August 12, 2020, 8:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading