• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಡಿಂಡಿಮ; ಉದ್ಧಟತನ ಮೆರೆದ ಉದ್ಧವ ಠಾಕ್ರೆಗೆ ಪಾಠ

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಡಿಂಡಿಮ; ಉದ್ಧಟತನ ಮೆರೆದ ಉದ್ಧವ ಠಾಕ್ರೆಗೆ ಪಾಠ

ನಿಪ್ಪಾಣಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ನಿಪ್ಪಾಣಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕರ್ನಾಟಕದ ಕೆಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ನಿಪ್ಪಾಣಿ ಪಟ್ಟಣದಲ್ಲಿ ನಿನ್ನೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಈ ಮೂಲಕ ನಿಪ್ಪಾಣಿ ಜನರ ಮನಸು ಯಾವತ್ತಿದ್ದರೂ ಕನ್ನಡವೇ ಎಂಬ ಸಂದೇಶ ಸಾರಲಾಯಿತು.

ಮುಂದೆ ಓದಿ ...
  • Share this:

ಬೆಳಗಾವಿ: ಪ್ರತಿಬಾರಿ ನಿಪ್ಪಾಣಿ ಹೆಸರು ತೆಗೆದುಕೊಂಡು ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳುತ್ತಿದ್ದ ಮಹಾರಾಷ್ಟ್ರ ನಾಯಕರಿಗೆ ಗಡಿಭಾಗದ ಕನ್ನಡಿಗರು ನಿಪ್ಪಾಣಿಯಲ್ಲಿ ಕನ್ನಡ ಸಮ್ಮೇಳನ ಮಾಡುವುದರ ಮೂಲಕ ನಿಪ್ಪಾಣಿ ಯಾವತ್ತಿದ್ದರೂ ಸಹ ಕರ್ನಾಟಕದ ಅವಿಭಾಜ್ಯ ಅಂಗವೆಂಬ ಉತ್ತರ ನೀಡಿದ್ದಾರೆ. ಇತ್ತೀಚೆಗಷ್ಟೇ ಗಡಿ ವಿಚಾರ ಕೆದಕಿ ಉದ್ದಟತನ ಮೆರೆದಿದ್ದ ಉದ್ದವ ಠಾಕ್ರೆ ಹಾಗೂ ಶಿವಸೇನೆ ಪುಂಡರಿಗೆ ಕನ್ನಡಿಗರು ತಕ್ಕ ಉತ್ತರ ನೀಡಿದ್ದಾರೆ.


ಕನ್ನಡ ಬಾವುಟ ಹೋಲುವ ಸೀರೆಯುಟ್ಟು ಕಂಗೊಳಿಸುತ್ತಿರೋ ಸ್ತ್ರೀಯರು, ಕನ್ನಡದ ಸಫಾರಿ ತೊಟ್ಟು ಮಿಂಚುತ್ತಿರುವ ಕನ್ನಡದ ಕಟ್ಟಾಳು ಪುರುಷರು, ಡೊಳ್ಳು ಕುಣಿತದ ಸ್ಟೆಪ್ಫು, ಸರ್ವಾಧ್ಯಕ್ಷರ ಮರೆವಣಿಗೆ ಈ ದೃಶ್ಯಗಳು ಕಂಡು ಬಂದಿದ್ದು ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿಯಲ್ಲಿ. ಇಲ್ಲಿ ಎರಡನೇ ಬಾರಿಗೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿವುದರ ಮೂಲಕ ನಿಪ್ಪಾಣಿ ಯಾವತ್ತಿದ್ದರೂ ಸಹ ಕನ್ನಡಿಗರ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತ ನೀಡಿದೆ. ನಗರದ ಕೆ ಎಲ್ ಇ ಸಂಸ್ಥೆಯ ಆಶೀರ್ವಾದ ಸಭಾ ಭವನದಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಕನ್ನಡ ಮನಸುಗಳು ನೆರದು ಕಾರ್ಯಕ್ರಮ ಯಶಸ್ವಿಗೊಳಿಸಿದರು‌.


ಸಮ್ಮೇಳನದ ಸರ್ವಾಧ್ಯಕ್ಷರಾದ ಶಾಂತಿನಾಥ ಲಗಾರೆ ಅವರ ಮೆರವಣಿಗೆ ನಿಪ್ಪಾಣಿಯ ಬೀದಿ ಬೀದಿಗಳಲ್ಲಿ ಕನ್ನಡ ಡಿಂಡಿಂಮ ಭಾರಿಸುವಂತಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ, ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಎಂದು ಹಾಡಿ ಕನ್ನಡ ಭಾಷಾಭಿಮಾನ ಮೆರೆದರು. ಅಲ್ಲದೆ ಗಡಿ ವಿಚಾರವಾಗಿ ಬೆಂಕಿ ಹಚ್ಚುತ್ತಿರುವ ಮಹಾ ನಾಯಕರು ಸಾಮರಸ್ಯ ಕಲಿಯಲಿ ಎಂದರು.


ಇದನ್ನೂ ಓದಿ: ರೈತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಸಫಲವಾಗುವುದಿಲ್ಲ: ಸಚಿವ ಡಾ.ಕೆ. ಸುಧಾಕರ್


ಪ್ರತಿ ಬಾರಿಯೂ ಮಹಾರಾಷ್ಟ್ರದ ಸಿ ಎಂ ಹಾಗೂ ವಿರೋಧ ಪಕ್ಷದ ನಾಯಕರು ನಿಪ್ಪಾಣಿ, ಕಾರವಾರದ ವಿಚಾರವಾಗಿ ಟ್ವೀಟ್ ಹಾಗೂ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಲೇ ಬರುತ್ತಿದ್ದಾರೆ. ರಾಜ್ಯದಲ್ಲಿ ಎಂ ಇ ಎಸ್ ಪುಂಡರು, ರಾಜ್ಯದ ಹೊರಗೆ ಶಿವಸೇನೆ ಪುಂಡರು ಕನ್ನಡಿಗರ ಸಹನೆ ಪರೀಕ್ಷಿಸುವ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಹೀಗಾಗಿ ನಿಪ್ಪಾಣಿಯಲ್ಲಿ ಕನ್ನಡ ಸಮ್ಮೇಳನ ಆಯೋಜ‌ನೆ ಮಾಡಿದ್ದು. ಗಡಿ ಮರಾಠಿಮಯ ಆಗಿದೆ ಎಂದು ಹೇಳುವ ಮಹಾ ನಾಯಕರು ಇಲ್ಲಿಗೆ ಬಂದು ನಗರಸಭೆ ಸೇರಿದಂತೆ ಸರ್ಕಾರಿ ಕಚೇರಿಗಳನ್ನು ನೋಡಿಕೊಂಡು ಹೋಗಲಿ ಎಂದು ಕಸಾಪ ಕಾರ್ಯದರ್ಶಿ ಸವಾಲು ಹಾಕಿದರು.


ಇದನ್ನೂ ಓದಿ: ಕಾರವಾರ: ಡೋಂಗ್ರಿ ಗ್ರಾಮದ ಜನರ ಗೋಳು ಕೇಳೋರ್ಯಾರು? ಈ ಊರಿಗೆ ಸೇತುವೆಯೂ ಇಲ್ಲ, ತೆಪ್ಪವೂ ಇಲ್ಲ!


ಒಟ್ಟಿನಲ್ಲಿ, ಕನ್ನಡ ನಾಡಿನ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಹಾಗೂ ಟ್ವೀಟ್ ಮಾಡಿ ಕನ್ನಡಿಗರ ಶಾಂತಿ ಭಂಗಕ್ಕೆ ಕಾರಣವಾಗುತ್ತಿದ್ದ ಮಹಾ ನಾಯಕರಿಗೆ ಗಡಿ ಕನ್ನಡಿಗರು ಸಾಹಿತ್ಯ ಸಮ್ಮೇಳನ ಮಾಡುವುದರ ಮೂಲಕ ನಿಪ್ಪಾಣಿ ಯಾವತ್ತಿದ್ದರೂ ಸಹ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂದೇಶ ಸಾರಿದ್ದಾರೆ.


ವರದಿ: ಲೋಹಿತ್ ಶಿರೋಳ, ಚಿಕ್ಕೋಡಿ

First published: