• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚನ್ನಪಟ್ಟಣದಲ್ಲೇ ಬೃಹತ್ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆಯಾಗಲಿ: ಕ.ಕ.ಜ.ವೇ. ಆಗ್ರಹ

ಚನ್ನಪಟ್ಟಣದಲ್ಲೇ ಬೃಹತ್ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆಯಾಗಲಿ: ಕ.ಕ.ಜ.ವೇ. ಆಗ್ರಹ

ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ ಕಾರ್ಯಕರ್ತರು

ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ ಕಾರ್ಯಕರ್ತರು

ಚನ್ನಪಟ್ಟಣ ಗೊಂಬೆ ಅಂದ್ರೆ ಇಡೀ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿವೆ. ಅಮೇರಿಕಾದ ವೈಟ್ ಹೌಸ್​ನಲ್ಲಿ ಚನ್ನಪಟ್ಟಣದ ಗೊಂಬೆಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಈಗ ಚನ್ನಪಟ್ಟಣವನ್ನ ಬಿಟ್ಟು ಕೊಪ್ಪಳದಲ್ಲಿ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದು ಸರಿಯಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಮುಂದೆ ಓದಿ ...
  • Share this:

ರಾಮನಗರ: ಕೊಪ್ಪಳದಲ್ಲಿ ಬೃಹತ್ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದಾಗಿ ಸಿಎಂ ಯಡಿಯೂರಪ್ಪನವರು ಘೋಷಣೆ ಮಾಡಿರುವುದನ್ನ ವಿರೋಧಿಸಿ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಚನ್ನಪಟ್ಟಣ ಅಂದ್ರೆ ಗೊಂಬೆಗಳ ನಾಡು ಎಂದೇ ವಿಶ್ವಪ್ರಸಿದ್ಧಿಯನ್ನ ಪಡೆದಿದೆ. ಆದರೆ ಈಗ ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಬೃಹತ್ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದರಿಂದ ಚನ್ನಪಟ್ಟಣದ ಇತಿಹಾಸಕ್ಕೆ ಧಕ್ಕೆಯಾಗಲಿದೆ ಎಂದು ಸರ್ಕಾರದ ಕ್ರಮದ ವಿರುದ್ಧ ಕಿಡಿಕಾರಿದರು.


ಚನ್ನಪಟ್ಟಣ ನಗರದ ಕಾವೇರಿ ಸರ್ಕಲ್​ನಲ್ಲಿ ಗೊಂಬೆಗಳನ್ನ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು, ರಾಜ್ಯ ಸರ್ಕಾರ ಇದೇ 15 ರೊಳಗೆ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ಚನ್ನಪಟ್ಟಣದಲ್ಲೇ ಘಟಕ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಇದೇ 24 ನೇ ತಾರೀಖು ಚನ್ನಪಟ್ಟಣದಿಂದ ಪಾದಯಾತ್ರೆ ಮಾಡಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.


ಇದನ್ನೂ ಓದಿ: ಗದಗದಲ್ಲಿ ಪ್ರಾಣಿಗಳಂತೆ ಗಿಡ-ಮರಗಳನ್ನು ದತ್ತು ಪಡೆಯುವ ಯೋಜನೆ


ಚನ್ನಪಟ್ಟಣ ಗೊಂಬೆ ಅಂದ್ರೆ ಇಡೀ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿವೆ. ಅಮೇರಿಕಾದ ವೈಟ್ ಹೌಸ್​ನಲ್ಲಿ ಚನ್ನಪಟ್ಟಣದ ಗೊಂಬೆಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಚನ್ನಪಟ್ಟಣದ ಗೊಂಬೆಗಳಿಂದ ಭಾರತ ದೇಶಕ್ಕೆ ದೊಡ್ಡಗೌರವ ಲಭಿಸಿದೆ. ಆದರೆ ಈಗ ಚನ್ನಪಟ್ಟಣವನ್ನ ಬಿಟ್ಟು ಕೊಪ್ಪಳದಲ್ಲಿ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದು ಸರಿಯಲ್ಲ ಎಂದು ಬೊಂಬೆನಾಡಿನ ಜನರು ಸಹ ಸರ್ಕಾರದ ಕ್ರಮಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.


ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವೇಳೆ ಕೊಪ್ಪಳದಲ್ಲಿ ಟಾಯ್ ಕ್ಲಸ್ಟರ್ ನಿರ್ಮಾಣ ಯೋಜನೆ ಘೋಷಿಸಿದ್ದರು. ನೈಸರ್ಗಿಕ ವಸ್ತುಗಳನ್ನ ಬಳಸಿ ಚಿತ್ರ ಬಿಡಿಸುವ ಕಿನ್ನಾಳ ಕಲೆ ಕೊಪ್ಪಳದ ವಿಶೇಷ. ಚನ್ನಪಟ್ಟಣದ ಗೊಂಬೆಗಳಂತೆ ಕೊಪ್ಪಳದ ಕಿನ್ನಾಳ ಕಲೆಗೂ ಜಗತ್​ಮನ್ನಣೆ ಪಡೆಯುವ ಉದ್ದೇಶವಿದೆ. ಕೊಪ್ಪಳದ ಕುಕನೂರಿನ ಭಾನಾಪುರ ಬಳಿ ಈ ಟಾಯ್ ಕ್ಲಸ್ಟರ್ ನಿರ್ಮಾಣಕ್ಕೆ 400 ಎಕರೆ ಭೂಮಿ ನೀಡಲಾಗಿದೆ. 2023ರ ವೇಳೆ ಈ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. 40 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.


ಇದನ್ನೂ ಓದಿ: Mysuru Dasara 2020: ಈ ಬಾರಿಯ ದಸರೆಯಲ್ಲಿ ಅಭಿಮನ್ಯು ಹೆಗಲಿಗೆ ಅಂಬಾರಿ ಭಾಗ್ಯ?; ನಾಳೆ ಅಂತಿಮ ತೀರ್ಮಾನ


ಆದರೆ, ಕೊಪ್ಪಳದಲ್ಲಿ ಟಾಯ್ ಕ್ಲಸ್ಟ್ ಶುರುವಾದರೆ ಚನ್ನಪಟ್ಟಣದ ಗೊಂಬೆಗಳ ಅಕರ್ಷಣೆ ಕಡಿಮೆಯಾಗಿ, ಸ್ಥಳೀಯ ಗೊಂಬೆ ತಯಾರಕ ಉದ್ಯಮಗಳಿಗೆ ಪೆಟ್ಟು ಬೀಳುತ್ತದೆ ಎಂದು ಚನ್ನಪಟ್ಟಣದ ನಾಯಕರ ಆತಂಕ.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು