HOME » NEWS » District » KANNADA NEWS VIJAYPUR BHEEMA RIVER SHORE ASSASSIN MAHADEVA SAHUKARA BYRAGONDA ARRESTED ON HIS BIRTHDAY SCT

ಹುಟ್ಟುಹಬ್ಬದ ದಿನವೇ ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಅರೆಸ್ಟ್

ಹಣಕ್ಕಾಗಿ ಬೇಡಿಕೆ ಮತ್ತು ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಮತ್ತು ಅಂದು ಆತನ ಜೊತೆಗಿದ್ದ ಇನ್ನಿಬ್ಬರ ವಿರುದ್ಧ ಚಡಚಣ ಪೊಲೀಸರು ಕಲಂ 384, 511, 504, 506, ಐಪಿಸಿ 34ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ

news18-kannada
Updated:July 23, 2020, 9:48 AM IST
ಹುಟ್ಟುಹಬ್ಬದ ದಿನವೇ ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಅರೆಸ್ಟ್
ಬಂಧಿತನಾದ ಭೀಮಾ ತೀರದ ಮುಖಂಡ
  • Share this:
ವಿಜಯಪುರ(ಜು 23): ವಿಜಯಪುರ ಜಿಲ್ಲೆಯ ಉಮರಾಣಿಯ ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಜನ್ಮದಿನದಂದೇ ಅರೆಸ್ಟ್ ಆಗಿದ್ದಾರೆ. ತಮ್ಮ ಸ್ನೇಹಿತ ಹಾಗೂ ವಿಜಯಪುರ ಜಿಲ್ಲೆಯ ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಶ. ಡಾಂಗೆ ಎಂಬುವವರಿಗೆ 5 ಕೋಟಿ ರೂ. ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಆರೋಪದಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಜು. 19 ರಂದು ಮಹಾದೇವ ಸಾಹುಕಾರ ಭೈರಗೊಂಡ ಅವರು, ನಾಮದೇವ ಶ. ಡಾಂಗೆ ಅವರನ್ನು ಚಡಚಣ ತಾಲೂಕಿನ ಕೆರೂರು ಗ್ರಾಮದಲ್ಲಿರುವ ತೋಟದ ಮನೆಗೆ ಕರೆಸಿದ್ದರು.  ಆಗ ಅಲ್ಲಿಗೆ ಬಂದಿದ್ದ ಡಾಂಗೆಗೆ ಭೈರಗೊಂಡ ಜೊತೆಗಿದ್ದ ಇನ್ನಿಬ್ಬರು 5 ಕೋಟಿ ರೂ. ಹಣದ ಬೇಡಿಕೆ ಇಟ್ಟಿದ್ದಾರೆ.  ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಡಾಂಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇಂಡಿಯ ಖ್ಯಾತ ಚಿನ್ನದ ವ್ಯಾಪಾರಿ ನಾಮದೇವ ಶ. ಡಾಂಗೆ, ತಮ್ಮ ದೂರಿನಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಮತ್ತು ಇನ್ನಿಬ್ಬರ ವಿರುದ್ಧ ದೂರು ನೀಡಿದ್ದಾರೆ. ಜು. 19ರಂದು ಮಹಾದೇವ ಸಾಹುಕಾರ ಭೈರಗೊಂಡ ತಮ್ಮ ತೋಟದ ಮನೆಗೆ ಕರೆಯಿಸಿದ್ದರು.  ಆಗ ಅವರ ಜೊತೆಗೆ ಇದ್ದ ಇನ್ನಿಬ್ಬರು ರೂ. 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.  ಹಣ ನೀಡಿದ್ದರೆ ತಲೆ ಕಟ್ ಮಾಡುತ್ತೇನೆ. ಯಾರಿಗಾದರೂ ತಿಳಿಸಿದರೆ ಹಣೆಗೆ ಗುಂಡು ಇಟ್ಟು ಕೊಲೆ ಮಾಡುತ್ತೇನೆ ಎಂದು ಇನ್ನಿಬ್ಬರು ಬೆದರಿಕೆ ಹಾಕಿದ್ದಾರೆ. ಹಣ ನೀಡದಿದ್ದರೆ ನಿನ್ನ ಕುಟುಂಬವನ್ನು ಸರ್ವನಾಶ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಡಾಂಗೆ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸೋದರನ ಸಾವಿನ ಸುದ್ದಿ ಕೇಳಿ ಬೆಳಗಾವಿಯ ಅಕ್ಕ-ತಂಗಿಯರಿಗೆ ಹೃದಯಾಘಾತ; ಮೂವರಿಗೂ ಗ್ರಾಮಸ್ಥರಿಂದ ಒಟ್ಟಾಗಿ ಅಂತ್ಯಕ್ರಿಯೆ!

ಅಷ್ಟೇ ಅಲ್ಲ, ಎರಡು ದಿನದೊಳಗೆ 5 ಕೋಟಿ ರೂ. ಹಣ ಇಲ್ಲವೇ 3 ಕೆಜಿ ಬಂಗಾರ ನೀಡದಿದ್ದರೆ ನಿನ್ನ ಅಂಗಡಿ ಮತ್ತು ಮನೆಯನ್ನು ಲೂಟಿ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಚಿನ್ನದ ವ್ಯಾಪಾರಿ ನಾಮದೇವ ಶಿ. ಡಾಂಗೆ ದೂರಿನಲ್ಲಿ ಆರೋಪಿಸಿದ್ದಾರೆ.

ಹಣಕ್ಕಾಗಿ ಬೇಡಿಕೆ ಮತ್ತು ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಮತ್ತು ಅಂದು ಆತನ ಜೊತೆಗಿದ್ದ ಇನ್ನಿಬ್ಬರ ವಿರುದ್ಧ ಚಡಚಣ ಪೊಲೀಸರು ಕಲಂ 384, 511, 504, 506, ಐಪಿಸಿ 34ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ್ ಮಾಹಿತಿ ನೀಡಿದ್ದಾರೆ.
Youtube Video
ಬುಧವಾರ ಬೆಳಿಗ್ಗೆ ಚಡಚಣ ಪೊಲೀಸರು ಮಹಾದೇವ ಸಾಹುಕಾರ ಭೈರಗೊಂಡನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ, ನಂತರ ಆತನನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ನಡೆಸಿದ್ದಾರೆ. ಬುಧವಾರವೇ ಭೈರಗೊಂಡ ಅವರ ಹುಟ್ಟುಹಬ್ಬವಾಗಿತ್ತು.  ನಂತರ ಇಂಡಿಯಲ್ಲಿ ನ್ಯಾಯಾಂಗದ ಎದುರು ಹಾಜರು ಪಡಿಸಿದ್ದಾರೆ.  ಇನ್ನಿಬ್ಬರ ಆರೋಪಿಗಳ ಬಂಧನಕ್ಕಾಗಿ ತನಿಖೆ ಕೈಗೊಂಡಿರುವುದಾಗಿ ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ್ ತಿಳಿಸಿದ್ದಾರೆ.
Published by: Sushma Chakre
First published: July 23, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories