Abbas melinamani passes away : ಕನ್ನಡದ ಹೆಸರಾಂತ ಕಥೆಗಾರ ಅಬ್ಬಾಸ್ ಮೇಲಿನಮನಿ ನಿಧನ
ಕಥೆಗಾರ ಅಬ್ಬಾಸ್ ಮೇಲಿನಮನಿ ಅವರ ಕಥೆಗಳು ವಿಶ್ವವಿದ್ಯಾಲಯದ ಪಠ್ಯಪುಸ್ತಕ, ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ತಮ್ಮದೇಯಾದ ಓದುಗ ಬಳಗವನ್ನು ಹೊಂದಿದ್ದರು
news18-kannada Updated:September 21, 2020, 11:13 PM IST

ಕಥೆಗಾರ ಅಬ್ಬಾಸ್ ಮೇಲಿನಮನಿ
- News18 Kannada
- Last Updated: September 21, 2020, 11:13 PM IST
ಬಾಗಲಕೋಟೆ(ಸೆಪ್ಟೆಂಬರ್. 21): ಕನ್ನಡದ ಖ್ಯಾತ ಕಥೆಗಾರ ಅಬ್ಬಾಸ್ ಮೇಲಿನಮನಿ (66) ತೀವ್ರ ಹೃದಯಾಘಾತದಿಂದ ಚಿತ್ರದುರ್ಗದಲ್ಲಿ ಅವರ ಮಗಳ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅಬ್ಬಾಸ್ ಮೇಲಿನಮನಿ ಅವರ ಹುಟ್ಟೂರು ಮುಳುಗಡೆ ನಗರಿ ಬಾಗಲಕೋಟೆ. 1954 ಮಾರ್ಚ್ 05 ರಂದು ಜನಿಸಿದ ಇವರು ಪದವಿ ಶಿಕ್ಷಣದ ವರೆಗೆ ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದ ಅಬ್ಬಾಸ್ ಮೇಲಿನಮನಿಯವರು ಕಥೆಗಾರರಾಗಿ ನಾಡಿನ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಚಿತ್ರದುರ್ಗದಿಂದ ಪಾರ್ಥಿವ ಶರೀರವನ್ನು ಬಾಗಲಕೋಟೆಯ ನವನಗರದ ಸೆಕ್ಟರ್ -3ರಲ್ಲಿರುವ ಅವರ ಮನೆಗೆ ರಾತ್ರಿ ತಂದು ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಅಬ್ಬಾಸ ಮೇಲಿನಮನಿ ಅವರಿಗೆ ಹೆಂಡತಿ, ಓರ್ವ ಮಗ ಹಾಗೂ ಓರ್ವ ಮಗಳನ್ನ ಅಗಲಿದ್ದಾರೆ.
ಕವನ ಸಂಕಲನಗಳು : ಅಬ್ಬಾಸ್ ಮೇಲಿನಮನಿ ಅವರ ಕಥೆಗಳು ವಿಶ್ವವಿದ್ಯಾಲಯದ ಪಠ್ಯಪುಸ್ತಕ, ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ತಮ್ಮದೇಯಾದ ಓದುಗ ಬಳಗವನ್ನು ಹೊಂದಿದ್ದರು. ಇವರ ಪ್ರಮುಖ ಕಥೆಗಳೆಂದರೆ. ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು : ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಮಾಸ್ತಿ ಕಥಾ ಪ್ರಶಸ್ತಿ, ಡಾ. ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಅಬ್ಬಾಸ ಅವರಿಗೆ ಸಂದಿವೆ.
ತಮ್ಮ ಬರವಣಿಗೆಯಲ್ಲಿ ಕೃಷ್ಣಾ ತೀರದ ಜನರ ಬದುಕು, ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯ, ವೈರುಧ್ಯ ಹಾಗೂ ತಲ್ಲಣಗಳನ್ನು ತಮ್ಮ ಕಥೆಗಳಲ್ಲಿ ಬಹು ಸೂಕ್ಷ್ಮವಾಗಿ ಕಟ್ಟಿಕೊಡುತ್ತಿದ್ದ ಅಬ್ಬಾಸ್ ಮೇಲಿನಮನಿ, ವೃತ್ತಿಯಲ್ಲಿ ಶಿಕ್ಷಕರಾಗಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ. ಈವರೆಗೆ ಒಂಬತ್ತು ಕಥಾ ಸಂಕಲನ, ಮೂರು ಕವನ ಸಂಕಲನ, ಮೂರು ಕಥಾ ಸಂಪುಟ, ಒಂದು ಕಾದಂಬರಿ, ಮೂರು ಲೇಖನಗಳ ಸಂಗ್ರಹ ಹಾಗೂ ಒಂಬತ್ತು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ತಡೆಯಲೇಬೇಕಿದೆ ; ಅಪಾರ್ಟ್ಮೆಂಟ್ ಮಾಲೀಕರ ಜತೆ ಡಿಸಿಎಂ ಸಂವಾದ
ಖ್ಯಾತ ಕಾದಂಬರಿಕಾರ, ಸಾಹಿತಿಯಾಗಿದ್ದ ಅಬ್ಬಾಸ್ ಮೇಲಿನಮನಿ ಅವರು ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಂತಾಪ ಸೂಚಿಸಿದ್ದಾರೆ. ಅಬ್ಬಾಸ್ ಮೇಲಿನಮನಿಯವರು ಸಾಹಿತ್ಯ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆ ನೀಡಿದ್ದಾರೆ. ಯುವ ಪ್ರತಿಭೆಗಳಿಗೆ ಮಾರ್ಗದರ್ಶಕಾಗಿದ್ದರು. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಮೃತರ ಕುಟುಂಬ ಪರಿವಾರಕ್ಕೆ ಹಾಗೂ ಅವರ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಿಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲೆಯ ಸಾಹಿತಿಗಳು, ಶಿಷ್ಯವರ್ಗ ಅಬ್ಬಾಸ್ ಮೇಲಿನಮನಿ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಕವನ ಸಂಕಲನಗಳು : ಅಬ್ಬಾಸ್ ಮೇಲಿನಮನಿ ಅವರ ಕಥೆಗಳು ವಿಶ್ವವಿದ್ಯಾಲಯದ ಪಠ್ಯಪುಸ್ತಕ, ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ತಮ್ಮದೇಯಾದ ಓದುಗ ಬಳಗವನ್ನು ಹೊಂದಿದ್ದರು. ಇವರ ಪ್ರಮುಖ ಕಥೆಗಳೆಂದರೆ. ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು.