ಚಾಮರಾಜನಗರ (ನ. 27) : ನಾಡಿನಲ್ಲಿನ ಮನುಷ್ಯರನ್ನು ನಂಬುವುದಕ್ಕೆ ಆಗಲ್ಲ. ಆದರೆ ಕಾಡಿನಲ್ಲಿ ಪ್ರಾಣಿಗಳನ್ನು ನಂಬಿ ಬದುಕಿ ಬಿಡಬಹುದು ಎಂದು ನಟ ದುನಿಯ ವಿಜಯ್ ಮಾರ್ಮಿಕವಾಗಿ ತಿಳಿಸಿದ್ದಾರೆ. ಕಾಡಿನ ಬಗ್ಗೆ ಹೆಚ್ಚಾಗಿ ಒಲವು ಹೊಂದಿರುವ ದುನಿಯಾ ವಿಜಯ್ ಜಿಲ್ಲೆಗೆ ಭೇಟಿ ನೀಡಿದಾಗೆಲ್ಲಾ ಇಲ್ಲಿನ ಬಂಡೀಪುರ ಇಲ್ಲವೆ ಬಿಳಿಗಿರಂಗನಬೆಟ್ಟದ ಕಾಡುಗಳಿಗೆ ಭೇಟಿ ನೀಡುವುದು ಸಾಮಾನ್ಯ. ಇಂದು ಜಿಲ್ಲೆ ಗುಂಡ್ಲುಪೇಟೆಯಲ್ಲಿ ಖಾಸಗಿ ಹೋಟೆಲ್ ಒಂದನ್ನು ಉದ್ಘಾಟಿಸಲು ಆಗಮಿಸಿದ್ದ ಸಂದರ್ಭದಲ್ಲಿ ಅವರು ಬಂಡೀಪುರಕ್ಕೆ ತೆರಳಿದ್ದಾರೆ. ಇದಕ್ಕೂ ಮೊದಲು ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು ನನಗೆ ಕಾಡು ಅಂದರೆ ತುಂಬಾ ಇಷ್ಟ. ಹಾಗಾಗಿ ಬಿಡುವಾದಗಲ್ಲೆಲ್ಲಾ ಕಾಡಿಗೆ ಹೋಗುತ್ತೇನೆ. ಕಾಡಿನ ಶಾಂತತೆ ನನಗೆ ಇಷ್ಟ ಎಂದರು.
ಅಣ್ಣಾವ್ರ ಕುಟುಂಬದ ಕುಡಿಗೆ ನಿರ್ದೇಶನ
ಇದೇ ವೇಳೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ. ಜಿಲ್ಲೆಯ ಹೀರೋ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಾರೆ, ಶಿವಣ್ಣ, ರಾಘಣ್ಣ, ಪುನೀತ್ ರಾಜ್ ಕುಮಾರ್ ಅವರ ಮನೆಯಲ್ಲಿ ಬೆಳೆದ ಮುದ್ದಾದ ಹುಡುಗ ಲಕ್ಕಿ ಗೋಪಾಲ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ನಾನೇ ನಿರ್ದೇಶನ ಮಾಡುತ್ತಿದ್ದೇನೆ. ಚಿತ್ರದ ವಿವರಗಳನನ್ನು ಜನವರಿಯಲ್ಲಿ ಅನೌನ್ಸ್ ಮಾಡುತ್ತೇವೆ ಎಂದರು ಲಕ್ಕಿ ಗೋಪಾಲ್ ಹೇಗಿದ್ದಾರೆ. ಹೇಗೆಲ್ಲಾ ವರ್ಕೌಟ್ ಮಾಡುತ್ತಿದ್ದಾರೆ. ಹೇಗೆಲ್ಲಾ ತಯಾರಾಗುತ್ತಿದ್ದಾರೆ ಅನ್ನೋದನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದರು. ಅಂದಹಾಗೇ ಈ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ದುನಿಯಾ ವಿಜಯ್ ಸ್ಪಷ್ಟ ಪಡಿಸಿದರು.
ಇದನ್ನು ಓದಿ: Mysterious Deaths: ಹತ್ಯೆಯೋ? ಆತ್ಮಹತ್ಯೆಯೋ? ನಿಗೂಢವಾಗಿದೆ ಈ ನಟ-ನಟಿಯರ ಸಾವಿನ ರಹಸ್ಯ!
'ಸಲಗ' ಸಿನಿಮಾ ಆದಷ್ಟು ಬೇಗ ಬಿಡುಗಡೆಯಾಗಲಿದೆ. ಕೊರೋನಾ ಸೋಂಕು ಹೋಗಿಬಿಟ್ಟರೆ ತಕ್ಷಣ ಬಿಡುಗಡೆ ಮಾಡುತ್ತೇವೆ. ಅದಾದ ಕೂಡಲೇ ಲಕ್ಕಿ ಗೋಪಾಲ್ ನಟನೆಯ ಚಿತ್ರ ಬಿಡುಗಡೆ ಆಗುತ್ತದೆ., ಈ ಬಗ್ಗೆ ನಾನು ತುಂಬಾ ಖುಷಿಯಲ್ಲಿದ್ದೇನೆ ಎಂದರು.
ಪ್ಯಾನ್ ಇಂಡಿಯಾ ಬಗ್ಗೆ ಜಗ್ಗೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಗ್ಗೇಶ್ ಹಿರಿಯರು, ಅವರು ಎಲ್ಲಾ ಗೊತ್ತಿದ್ದೇ ಮಾತನಾಡಲು ಸಾಧ್ಯ. ನಮಗಿಂತ ಮೊದಲೇ ಚಿತ್ರ ರಂಗ ನೋಡಿದವರು. ದೊಡ್ಡವರು ಏನು ಹೇಳುತ್ತಾರೋ, ನಾವು ಚಿಕ್ಕವರು ಅದನ್ನು ಫಾಲೋ ಮಾಡ್ತೀವಿ ಎಂದಷ್ಟೇ ಹೇಳಿದರು.
( ವರದಿ: ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ