HOME » NEWS » District » KANNADA ACTIVITIS VATAL NAGARAJ DEMANDED THAT CM B S YEDIYURAPPA SHOULD CONTROL CORONA OR QUIT CM POST HK

ಕೊರೋನಾ ನಿಯಂತ್ರಿಸಲಾಗದ ಯಡಿಯೂರಪ್ಪ ಸಿಎಂ ಕುರ್ಚಿ ಖಾಲಿ ಮಾಡಲಿ: ವಾಟಾಳ್ ನಾಗರಾಜ್​​ ಆಗ್ರಹ

ಸಚಿವ ಸುರೇಶ್ ಕುಮಾರ್​ ಅವರು ಮಕ್ಕಳ ಪ್ರಾಣದ ಜೊತೆ ಆಟ ಆಡಬಾರದು. ಸಚಿವರು ಗಂಭೀರವಾಗಿ ಚಿಂತನೆ ಮಾಡಿ ಶಾಲಾ ಕಾಲೇಜು ಮುಂದೂಡಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ತೆಗೆಯಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ

news18-kannada
Updated:October 8, 2020, 6:45 PM IST
ಕೊರೋನಾ ನಿಯಂತ್ರಿಸಲಾಗದ ಯಡಿಯೂರಪ್ಪ ಸಿಎಂ ಕುರ್ಚಿ ಖಾಲಿ ಮಾಡಲಿ: ವಾಟಾಳ್ ನಾಗರಾಜ್​​ ಆಗ್ರಹ
ವಾಟಾಳ್ ನಾಗರಾಜ್
  • Share this:
ಕಲಬುರ್ಗಿ(ಅಕ್ಟೋಬರ್. 08): ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿದ್ದರೂ, ಯಡಿಯೂರಪ್ಪನವರು ಬುದ್ದಿ ಕೆಟ್ಟವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೊರೋನಾ ತಡೆಗಟ್ಟಲು ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಗೌರವ ಇದ್ರೆ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಕೊರೋನಾದಿಂದ ನಿತ್ಯ ಸಾವು ಹೆಚ್ಚುತ್ತಿವೆ. ಆದರೆ, ಸಿಎಂ ಯಡಿಯೂರಪ್ಪನವರು ಕೊರೋನಾ ನಿಯಂತ್ರಣ ಕೈ ಬಿಟ್ಟಿದ್ದಾರೆ. ದುರಾಡಳಿತ ನಡೆಸುತ್ತಿದ್ದಾರೆ. ಸಾಯುವವರು ಸಾಯಲಿ. ನಾನು ನನ್ನ ಪಾಡಿಗೆ ಆರಾಮಾಗಿ ಇರುತ್ತೇನೆ ಎನ್ನುವುದಾರೆ ರಾಜೀನಾಮೆ ನೀಡಲಿ. ಕೊರೋನಾ ಬಗ್ಗೆ ರಾಜ್ಯದಲ್ಲಿ ಮೊದಲಿನ ಭಯ, ಭೀತಿ, ಶಿಸ್ತು ಮಾಯವಾಗಿದೆ. ಸರಕಾರಿ ಆಸ್ಪತ್ರೆಗಳು ಯಮಲೋಕ, ವೈದ್ಯರು ಯಮಧರ್ಮ ಅವರನ್ನ ಕೇಳುವ ಹಾಗೆ ಇಲ್ಲ. ಇನ್ನೂ ಖಾಸಗಿ ಆಸ್ಪತ್ರೆಯವರು ಲೂಟಿಗಿಳಿದಿದ್ದಾರೆ. ಇದೆಲ್ಲವನ್ನೂ ಯಾರು ತಡೆಯೋರು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡವೇ ಬೇಡ. ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳಿಗೂ ಕೊರೋನಾ ಹರಡುವ ಸಾಧ್ಯತೆ ಇರುತ್ತೆ. ವಿದ್ಯೆ ಬೇಕು, ಆದರೆ ಪ್ರಾಣ ಅದಕ್ಕಿಂತ ಮುಖ್ಯ. ಪ್ರಾಣ ಇದ್ದರೇ ವಿದ್ಯೆ ಕಲಿಯುವುದಕ್ಕೆ ಸಾಧ್ಯ. ಪ್ರಾಣವೇ ಇಲ್ಲದಿದ್ದರೇ ವಿದ್ಯೆ ಎಲ್ಲಿಂದ ಬರುತ್ತದೆ ಎಂದು ತಿಳಿಸಿದರು.

ಸಚಿವ ಸುರೇಶ್ ಕುಮಾರ್​ ಅವರು ಮಕ್ಕಳ ಪ್ರಾಣದ ಜೊತೆ ಆಟ ಆಡಬಾರದು. ಸಚಿವರು ಗಂಭೀರವಾಗಿ ಚಿಂತನೆ ಮಾಡಿ ಶಾಲಾ ಕಾಲೇಜು ಮುಂದೂಡಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ತೆಗೆಯಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಾಟಾಳ್ ಅಖಾಡಕ್ಕೆ

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಕಲಬುರ್ಗಿಯಲ್ಲಿ ದಿಢೀರ್ ಪ್ರತ್ಯಕ್ಷರಾದ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ : ಕೊರೋನಾ ಸೋಂಕಿತರ ಸೇವೆಗೆ ರೊಬೋಟಿಕ್ ಯಂತ್ರ; ಹುಬ್ಬಳ್ಳಿ ವಿದ್ಯಾರ್ಥಿಗಳಿಂದ ಆವಿಷ್ಕಾರ

ಕಲಬುರ್ಗಿಯ ಮಿನಿ ವಿಧಾನಸೌಧದದಲ್ಲಿ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಎನ್.ವಿ ಪ್ರಸಾದ ಅವರಿಗೆ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ವಾಟಾಳ್, ವಿಧಾನಸಭೆ, ವಿಧಾನ ಪರಿಷತ್ ಎಲ್ಲ ಕಡೆಯೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಚುನಾವಣಾ ಆಯೋಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ದುಡ್ಡಿದ್ದರೆ ಮಾತ್ರ ಗೆಲ್ಲಲು ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Youtube Video

2 ಸಾವಿರ ಕೋಟಿ ರೂಪಾಯಿಗಳಿದ್ದರೆ ಯಾರು ಬೇಕಾದರೀ ಮುಖ್ಯಮಂತ್ರಿ ಆಗಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಚುನಾವಣಾ ಆಯೋಗ ಭ್ರಷ್ಚಾಚಾರಕ್ಕೆ ಕಡಿವಾಣ ಹಾಕಬೇಕು ಎಂದರು.
Published by: G Hareeshkumar
First published: October 8, 2020, 6:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories