ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ಗೆ ಬಹುಪರಾಕ್; ಕಬ್ಬಾಳಮ್ಮನಿಗೆ ವಿಶೇಷ ಹರಕೆ ಪೂಜೆ

ಒಟ್ಟಾರೆ ಡಿ.ಕೆ.ಶಿವಕುಮಾರ್ ರವರ ಪ್ರತಿಜ್ಞಾವಿಧಿ ಕಾರ್ಯಕ್ರಮ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲೂ ಯಶಸ್ವಿಯಾಗಿದ್ದು, ಸ್ಥಳದಲ್ಲೇ ಡಿಕೆಶಿ ಪ್ರತಿಜ್ಞಾವಿಧಿ ಕಾರ್ಯಕ್ರಮ ನೋಡಿ ಜಿಲ್ಲೆಯ ಜನತೆ ಸಂತಸಗೊಂಡರು.

news18-kannada
Updated:July 2, 2020, 5:51 PM IST
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ಗೆ ಬಹುಪರಾಕ್; ಕಬ್ಬಾಳಮ್ಮನಿಗೆ ವಿಶೇಷ ಹರಕೆ ಪೂಜೆ
ಡಿಕೆಶಿ ಸ್ವಕ್ಷೇತ್ರದಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಎಲ್​ಇಡಿ ಸ್ಕೀನ್​ ಮೂಲಕ ವೀಕ್ಷಿಸಿದ ಜನತೆ.
  • Share this:
ರಾಮನಗರ (ಕನಕಪುರ): ಕೆಪಿಸಿಸಿ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಬೆಂಗಳೂರಿನ ಜೊತೆಗೆ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲೂ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ 180ಕ್ಕೂ ಹೆಚ್ಚು ಕಡೆಗಳಲ್ಲಿ ಡಿಜಿಟಲ್ ಎಲ್ಇಡಿ ಸ್ಕ್ರೀನ್ ಗಳನ್ನು ಅಳವಡಿಸಿ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು . ದೇಶದಲ್ಲೇ ಇದೇ ಮೊದಲ ಬಾರಿಗೆ ಡಿಜಿಟೆಲ್ ಮೀಡಿಯಾ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ.

ಕೆಪಿಸಿಸಿ ನೂತನ ಸಾರಥಿಯಾಗಿ ಡಿ.ಕೆ.ಶಿವಕುಮಾರ್ ಇಂದು ಡಿಜಿಟಲ್ ಮೀಡಿಯಾ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ ಕಾರ್ಯಕ್ರಮ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲೂ ಯಶಸ್ವಿಯಾಗಿದೆ. ದೇಶದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಡಿಜಿಟೆಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಎಲ್ಲೆಡೆ ಕೊರೋನಾ ಮಹಾಮಾರಿ ಇರುವುದರಿಂದ ಪ್ರತಿಜ್ಞಾವಿಧಿಗೆ ಯಾರು ಹೋಗುವುದಕ್ಕೆ ಆಗದ ಕಾರಣ ತಮ್ಮ ಗ್ರಾಮ ಹಾಗೂ ಪಟ್ಟಣಗಳಲ್ಲಿ ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯಕ್ರಮವನ್ನು ನೂತನ ಡಿಜಿಟೆಲ್ ಮಾಧ್ಯಮದ ಮೂಲಕ‌ ಜಿಲ್ಲೆಯ ಜನರಿಗೆ ತೋರಿಸಲಾಯಿತು.

ಗ್ರಾಮೀಣ ಭಾಗದ ಜನರಿಗೆ ಕಾಂಗ್ರೆಸ್ ಕಾರ್ಯಕರ್ತರ ಸಹಾಯದೊಂದಿಗೆ ಪ್ರತಿ  ಪಂಚಾಯತಿಯಲ್ಲಿ ಎಲ್ ಇಡಿ ಸ್ಕ್ರೀರ್ನ್ ಮೂಲಕ ಡಿಕೆಶಿ‌ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವುದನ್ನು ನೇರವಾಗಿ ನೋಡಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೂ ಮೊದಲು ಡಿಕೆಶಿ‌ ಆರಾಧ್ಯ ದೈವ, ಇಷ್ಟದೇವತೆ ಸಾತನೂರಿನ ಕಬ್ಬಾಳಮ್ಮ ದೇವಸ್ಥಾನದಲ್ಲಿ ವಿಶೇಷ ಹರಕೆ ಪೂಜೆ ನೆರವೇರಿಸಲಾಯ್ತು. 101 ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಸಿಎಂ ಆಗುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಸಾತನೂರಿನ ಯುವ ಕಾಂಗ್ರೆಸ್ ಮುಖಂಡ ಮಂಜು ಹಾಗೂ ಸ್ನೇಹಿತರು ಪೂಜಾ ಕಾರ್ಯಕ್ರಮ ನಡೆಸಿದರು. ಮುಖಂಡ ನಾಗರಾಜ್ ನೇತೃತ್ವದಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮ ವೀಕ್ಷಣೆ ಕಾರ್ಯಕ್ರಮ ನಡೆಯಿತು.

ಇನ್ನು ಡಿಕೆಶಿ ಹುಟ್ಟೂರಾದ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ‌ ಯಶಸ್ವಿಯಾಗುವಂತೆ ಕಾಂಗ್ರೆಸ್ ಮುಖಂಡರು ಶ್ರಮಿಸಿದರು. ಇನ್ನು ಜಿಲ್ಲೆಯ ಜನರಿಗೆ ಅನುಕೂಲವಾಗಲೆಂದು 180ಕ್ಕೂ ಹೆಚ್ಚು ಕಡೆಗಳಲ್ಲಿ ಡಿಜಿಟಲ್ ಎಲ್ಇಡಿ ಸ್ಕ್ರೀನ್​ಗಳನ್ನು ಅಳವಡಿಸಿದ್ದರು. ನಮ್ಮೂರಿನ ಮಗ ರಾಜ್ಯದಲ್ಲಿ ದೊಡ್ಡಮಟ್ಟಕ್ಕೆ ಬೆಳೆದಿದ್ದಾನೆಂದು ದೊಡ್ಡಾಲಹಳ್ಳಿಯ ಜನ ಶುಭ ಹಾರೈಸಿದರು. ದೊಡ್ಡಾಲಹಳ್ಳಿಯ ಕಾಂಗ್ರೆಸ್ ಮುಖಂಡ ಮಹೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಇದನ್ನು ಓದಿ: ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಒಟ್ಟಾರೆ ಡಿ.ಕೆ.ಶಿವಕುಮಾರ್ ರವರ ಪ್ರತಿಜ್ಞಾವಿಧಿ ಕಾರ್ಯಕ್ರಮ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲೂ ಯಶಸ್ವಿಯಾಗಿದ್ದು, ಸ್ಥಳದಲ್ಲೇ ಡಿಕೆಶಿ ಪ್ರತಿಜ್ಞಾವಿಧಿ ಕಾರ್ಯಕ್ರಮ ನೋಡಿ ಜಿಲ್ಲೆಯ ಜನತೆ ಸಂತಸಗೊಂಡರು.
First published: July 2, 2020, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading