HOME » NEWS » District » KALBURGI WAS THE HIGHEST TO OF CORONA VIRUS PATIENTS IN KALYANA KARNATAKA HK

ಸಾವಿನ ಮನೆಯಾದ ಕಲ್ಯಾಣ ಕರ್ನಾಟಕ ; ಕೊರೋನಾ ಸಾವುಗಳಿಗೆ ಬೆಚ್ಚಿದ ಜನ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದೂ ಕೊರೋನಾ ರುದ್ರನರ್ತನ ಮಾಡಿದೆ. ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿ ದಾಟಿದೆ.

news18-kannada
Updated:June 21, 2020, 8:47 PM IST
ಸಾವಿನ ಮನೆಯಾದ ಕಲ್ಯಾಣ ಕರ್ನಾಟಕ ; ಕೊರೋನಾ ಸಾವುಗಳಿಗೆ ಬೆಚ್ಚಿದ ಜನ
ಪ್ರಾತಿನಿಧಿಕ ಚಿತ್ರ
  • Share this:
ಕಲಬುರ್ಗಿ(ಜೂ.21): ಕಲ್ಯಾಣ ಕರ್ನಾಟಕ ಹೆಸರಿಗಷ್ಟೇ ಎನ್ನುವಂತಾಗಿದೆ. ಕೊರೋನಾ ಸೋಂಕು ವಕ್ಕರಿಸಿಕೊಂಡ ನಂತರವಂತೂ ಈ ಭಾಗದ ಜನ ಕಲ್ಯಾಣವನ್ನೇ ಮರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಐದು ಜಿಲ್ಲೆಗಳಲ್ಲಿ ಸೋಂಕು ದಿನೇ ದಿನೇ ಏರಿಯಾಗುತ್ತಲೇ ಸಾಗಿದೆ. ಸೋಂಕಿತರ ಜೊತೆಗೆ ಸಾವಿನ ಪ್ರಮಾಣ ದಿಢೀರ್ ಏರಿಕೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಸಾವಿನ ಮನೆಯಾಗುತ್ತಿದೆ ಎಂದು ಭಾಸವಾಗುತ್ತಿದೆ. 

ಕಲ್ಯಾಣ ಕರ್ನಾಟಕದಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿರುವುದು, ಕೊರೋನಾ ನಿಯಂತ್ರಣದಲ್ಲಿಲ್ಲ ಎಂಬುದನ್ನು ತೋರ್ಪಡಿಸುತ್ತಿದೆ. ಕಳೆದ ಆರು ದಿನಗಳಲ್ಲಿ ಈ ಭಾಗದಲ್ಲಿ 11 ಕೊರೋನಾ ಸಾವುಗಳು ಸಂಭವಿಸಿವೆ. ಬೀದರ್ ಜಿಲ್ಲೆಯೊಂದರಲ್ಲಿಯೇ ಒಂಬತ್ತು ಸಾವುಗಳು ಸಂಭವಿಸಿವೆ. ಉಳಿದಂತೆ ಕಲಬುರ್ಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ತಲಾ ಒಂದು ಸಾವು ಸಂಭವಿಸಿವೆ.

ಜೂನ್ 16 ರಂದು ಬೀದರ್ ನಲ್ಲಿ 49 ವರ್ಷದ ಪುರುಷ ಸಾವನ್ನಪ್ಪಿದರೆ, ಜೂನ್ 17 ರಂದು ಬೀದರ್ ಜಿಲ್ಲೆಯ 26 ವರ್ಷದ ಪುರುಷ ಸಾವಿಗೀಡಾಗಿದ್ದಾನೆ. ಜೂನ್ 18 ರಂದು ಕೊಪ್ಪಳ, ಬೀದರ್ ಹಾಗೂ ಕಲಬುರ್ಗಿಗಳಲ್ಲಿ ಸಾವುಗಳು ಸಂಭವಿಸಿವೆ. ಕೊಪ್ಪಳದ 50 ವರ್ಷದ ಮಹಿಳೆ, ಬೀದರ್ ನ 55 ವರ್ಷದ ಪುರುಷ ಹಾಗೂ ಕಲಬುರ್ಗಿಯ 50 ವರ್ಷದ ಪುರುಷ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಜೂನ್ 19 ರಂದು ಬೀದರ್ ಜಿಲ್ಲೆಯ ಇಬ್ಬರ ಸಾವನ್ನಪ್ಪಿದ್ದಾರೆ. 45 ವರ್ಷದ ಪುರುಷ ಹಾಗೂ 70 ವರ್ಷದ ಪುರುಷ ಸಾವಿಗೀಡಾಗಿದ್ದಾರೆ. ಜೂನ್ 20 ರಂದು ಬೀದರ್ ಜಿಲ್ಲೆಯಲ್ಲಿಯೇ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. 51 ವರ್ಷದ ಮಹಿಳೆ ಹಾಗೂ 65 ವರ್ಷದ ಪುರುಷ ಸಾವಿಗೀಡಾಗಿದ್ದಾರೆ. ಇಂದೂ ಸಹ ಬೀದರ್ ಜಿಲ್ಲೆಯಲ್ಲಿ ಮತ್ತಿಬ್ಬರು ಕೊನೆಯುಸಿರೆಳೆದಿದ್ದಾರೆ.

ವಿಚಿತ್ರವೆಂದರೆ ಮೃತಪಟ್ಟ ಬಹುತೇಕರದ್ದು ಟ್ರಾವೆಲ್ ಹಿಸ್ಟರಿಯಿಲ್ಲ. ತೀವ್ರ ಉಸಿರಾಟದ ತೊಂದರೆ, ಜ್ವರ, ಹೈಪರ್ ಟೆನ್ಶನ್ ಇತ್ಯಾದಿ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಇದುವರೆಗೆ 30 ಜನ ಸಾವನ್ನಪ್ಪಿರುವುದು ಆತಂಕಕ್ಕೀಡು ಮಾಡಿದೆ. ಕಳೆದ ಆರು ದಿನಗಳಲ್ಲಿ ಸತ್ತವರ ಸಂಖ್ಯೆ 11 ಆಗಿರೋದು ಜನರ ನಿದ್ರೆಗೆಡಿಸುವಂತೆ ಮಾಡಿದೆ. ಬೀದರ್ ಜಿಲ್ಲೆಯಲ್ಲಿ ಇದುವರೆಗೆ 15 ಜನ ಸಾವನ್ನಪ್ಪಿದ್ದರೆ, ಕಲಬುರ್ಗಿ ಜಿಲ್ಲೆಯಲ್ಲಿ 11 ಜನ ಸಾವಿಗೀಡಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅಂಕಿ-ಅಂಶಗಳು ಕಳವಳಕ್ಕೆ ಕಾರಣವಾಗಿವೆ.

ಮೂರು ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದೂ ಕೊರೋನಾ ರುದ್ರನರ್ತನ ಮಾಡಿದೆ. ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿ ದಾಟಿದೆ. ಈ ಭಾಗದಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದು, ಬೀದರ್ ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸಿದೆ. 70 ವರ್ಷದ ಪುರುಷ ಹಾಗೂ 46 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಇಬ್ಬರೂ ಹೈಪರ್ ಟೆನ್ಶನ್ ನಿಂದ ಬಳಲುತ್ತಿದ್ರು. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಬೆಳಕಿಗೆ ಬಂದಿದ್ದು, ಇಂದು 39 ಜನರಿಗೆ ಸೋಂಕು ದೃಢಪಟ್ಟಿದೆ.ಇದನ್ನೂ ಓದಿ : ಅಮವಾಸ್ಯೆ, ಗ್ರಹಣ ಎಂಬ ಮೌಢ್ಯಕ್ಕೆ ಸೆಡ್ಡು ಹೊಡೆದು ದಿನವಿಡೀ ಅಧಿಕಾರಿಗಳ ಸಭೆ ನಡೆಸಿದ ಎಂ. ಬಿ. ಪಾಟೀಲ

ಬೀದರ್ 13, ಯಾದಗಿರಿ 3 ಹಾಗೂ ರಾಯಚೂರು 2 ಜನರಿಗೆ ಸೋಂಕು ದೃಢಗೊಂಡಿದೆ. ಕಲ್ಯಾಣ ಕರ್ನಾಟಕದಲ್ಲಿ ಇಂದು 57 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 11 ಮಕ್ಕಳಿದ್ದಾರೆ. ಸೋಂಕಿತರ ಪೈಕಿ ಹೆಚ್ಚಿನವರು ಮಹಾರಾಷ್ಟರದಿಂದ ವಾಪಸ್ಸಾದವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಸೋಂಕಿತರ ಸಂಖ್ಕೆ 3025 ಕ್ಕೆ ಏರಿಕೆಯಾಗಿದೆ.

ಇಂದು ಈ ಭಾಗದಲ್ಲಿ 117 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಬೀದರ್ 58, ರಾಯಚೂರು 34, ಯಾದಗಿರಿ 15, ಕಲಬುರ್ಗಿ 9 ಹಾಗೂ ಕೊಪ್ಪಳ ಓರ್ವ ಡಿಸ್ಚಾರ್ಜ್ ಆಗಿದ್ದಾನೆ.
First published: June 21, 2020, 8:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories