ತೆಲಂಗಾಣದಲ್ಲಿ ಭೂಕಂಪ; ಕಲಬುರ್ಗಿಯ ಹಲವೆಡೆ ನಡುಗಿದ ಭೂಮಿ; ಜನರು ಭಯಭೀತ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಕಾಳಗಿ ಮತ್ತು ಸೇಡಂ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಮನೆ ತೊರೆದು ಬಯಲಿನಲ್ಲಿ ಕೂತ ಘಟನೆ ನಡೆದಿದೆ. ತೆಲಂಗಾಣದ ವಿಕರಬಾದ್​ನಲ್ಲಿ ಆದ ಭೂಕಂಪನದ ಎಫೆಕ್ಟ್ ಇದೆಂದು ಭಾವಿಸಲಾಗಿದೆ.

ಕಲಬುರ್ಗಿಯ ಗ್ರಾಮವೊಂದರ ರಸ್ತೆ

ಕಲಬುರ್ಗಿಯ ಗ್ರಾಮವೊಂದರ ರಸ್ತೆ

 • Share this:
  ಕಲಬುರ್ಗಿ: ಆ ಜಿಲ್ಲೆಯ ಜನರು ಆಗ ತಾನೆ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಬಂದಿದ್ದರು. ಮನೆಯಲ್ಲಿರುವ ಮಹಿಳೆಯರು ಅಡುಗೆ ಮಾಡೋದಕ್ಕೆ ಅಂತಾ ಸಿದ್ದರಾಗ್ತಿದ್ದರು. ಆದ್ರೆ ಏಕಾ ಏಕಿಯಾಗಿ ಭೂಮಿ ಕಂಪಿಸಿದ ಹಿನ್ನೆಲೆ ಕಲಬುರಗಿ ಜಿಲ್ಲೆಯ ಮೂರು ತಾಲ್ಲೂಕಿನ ಹಲವು ಗ್ರಾಮಗಳ ಜನರು ಮನೆ‌ಮಠ ತೊರೆದು ರಸ್ತೆಗೆ ಬಂದು ನಿಂತುಕೊಂಡು ರಾತ್ರಿಯೆಲ್ಲಾ ರಸ್ತೆಯಲ್ಲಿ ಆತಂಕದಲ್ಲೇ ಕಾಲ ಕಳೆದಿದ್ದಾರೆ. ಮನೆ‌ ಮಠ ಬಿಟ್ಟು ಮಕ್ಕಳೊಂದಿಗೆ ರಸ್ತೆಯಲ್ಲಿ ಬಂದು ಕಾಲ ಕಳೆಯುತ್ತಿರುವ ಜನರು. ಮತ್ತೊಂದೆಡೆ ಬಿರುಕು ಬಿಟ್ಟಿರುವ ಮನೆಗಳು. ಕಂಪನಕ್ಕೆ ನೆಲಕ್ಕುರುಳುತ್ತಿರುವ ಪಾತ್ರೆಗಳು. ಅಷ್ಟಕ್ಕು ಇಂತಹದೊಂದು ದೃಶ್ಯ ಕಂಡು ಬಂದಿರೋದು ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ತಾಲ್ಲೂಕಿನಲ್ಲಿ.

  ಶುಕ್ರವಾರ ಸಂಜೆ 7.30 ರಿಂದ 8 ಗಂಟೆಯ ಒಳಗೆ ಕಲಬುರಗಿ ಜಿಲ್ಲೆಯ  ಚಿಂಚೋಳಿ ತಾಲ್ಲೂಕಿನ ನಿಡಗುಂದಾ , ಕೇರೊಳ್ಳಿ , ಭಂಟನಹಳ್ಳಿ , ಶಿರೊಳ್ಳಿ , ಸುಲೆಪೇಟ್ , ಮತ್ತು ಕಾಳಗಿ ತಾಲ್ಲೂಕಿನ ಹಲಚೇರಾ , ಹೊಸಹಳ್ಳಿ ಗಡಿಕೇಶ್ವಾರ ಸೇರಿದಂತೆ ಸೇಡಂ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದೆ. ಭೂಕಂಪನ ಆಗುತ್ತಿದ್ದಂತೆಯೆ ಚಿಂಚೋಳಿ, ಕಾಳಗಿ, ಸೇಡಂ ತಾಲ್ಲೂಕಿನ ಹಲವು ಗ್ರಾಮಗಳ ಜನರು ಮನೆ ಮಠ ಬಿಟ್ಟು ಮಕ್ಕಳು ಮರಿಗಳೊಂದಿಗೆ ರಸ್ತೆಗೆ ಬಂದು ರಾತ್ರಿಯೆಲ್ಲಾ ರಸ್ತೆಯಲ್ಲೆ ಕಾಲ ಕಳೆಯುವಂತಾಗಿದೆ. ಇನ್ನು, ಭೂಮಿ ಕಂಪಿಸಿದ ಹಿನ್ನೆಲೆ ಕೆಲವು ಮನೆಯ ಗೊಡೆಗಳು ಕುಸಿದರೆ, ಇನ್ನೂ ಕೆಲವಡೆ ಮನೆಯ ಪಾತ್ರೆಗಳು ನೆಲ್ಕುರುಳಿ ಬಿದ್ದಿರೋದಿಂದ ಜನ ಬೆಚ್ಚಿ ಬಿದ್ದಿದ್ದಾರೆ. ನೆರೆಯ ತೆಲಂಗಾಣದ ವಿಕರಬಾದ್ ಬಳಿ ಶುಕ್ರವಾರ ಸಂಭವಿಸಿದ ಭೂಕಂಪನಿಂದ ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ.

  Govt school in Gadikeshwara, Kalburgi
  ಗಡಿಕೇಶ್ವಾರದ ಸರ್ಕಾರಿ ಶಾಲೆ


  ಇನ್ನೂ ಚಿಂಚೋಳಿ, ಸೇಡಂ ತಾಲ್ಲುಕಿನ ಹಲವಡೆ ಭೂಕಂಪಿಸಿದ್ರೆ ಕಾಳಗಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಸಂಜೆ ಮತ್ತೆ ಭೂಮಿಯಿಂದ ಭಾರಿ ಶಬ್ದ ಹೊರಬಂದು ಭೂಮಿ ನಡುಗಿದ ಅನುಭವ ಆಗಿದೆ. ಗಡಿಕೇಶ್ವರ ಗ್ರಾಮದಲ್ಲಿ  ಎಂಟು ಗಂಟೆ ಸುಮಾರಿಗೆ ಸುಮಾರು ಎರಡು ನಿಮಿಷದಲ್ಲಿ ಎಂಟರಿಂದ ಹತ್ತು ಭಾರಿ ಭೂಮಯಿಂದ ಭಾರಿ ಶಬ್ದ ಹೊರಬಂದು ಭೂಮಿ ಕಂಪಿಸಿದೆ. ನಿನ್ನೆ ಬೆಳೆಗ್ಗೆ ಹತ್ತು ಗಂಟೆ ಸುಮಾರಿಗಷ್ಟೇ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಬಂದ ಭಾರಿ ಶಬ್ದಕ್ಕೆ ಜನ ಬೆಚ್ಚಿ ಬಿದ್ದಿದ್ದರು..

  ಇದನ್ನೂ ಓದಿ: Namma Metro- ತುಮಕೂರು ರಸ್ತೆಯಲ್ಲಿ ಮೆಟ್ರೋ ಫ್ಲೈಓವರ್ ಹತ್ತಿ ಜನರ ಪ್ರತಿಭಟನೆ; ಕಾರಣ ಇದು

  ತಡರಾತ್ರಿ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದರು.. ಅಲ್ಲದೆ ಎರಡ್ಮೂರು ದಿನಗಳಲ್ಲಿ ಕೇಂದ್ರದಿಂದ ತಜ್ಞರು ಆಗಮಿಸಿ ಅಧ್ಯಯನ ನಡೆಸಲಿದ್ದಾರೆ ಅಂತಾ ಶಾಸಕ ತೆಲ್ಕೂರ್ ಹೇಳಿದರು.

  ಒಟ್ಟಿನಲ್ಲಿ ಮೊನ್ನೆ ಸಂಜೆಯ ಸುಮಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಭೂಕಂಪನ ಆದ ಹಿನ್ನೆಲೆ ಜಿಲ್ಲೆಯ ಜನರು ರಾತ್ರಿಯೆಲ್ಲಾ ರಸ್ತೆಯಲ್ಲೆ ಕಾಲ ಕಳೆಯುವಂತಾಗಿದೆ. ಮತ್ತೊಂದೆಡೆ ಮನೆಯ ಗೊಡೆ ಕುಸಿದ ಹಿನ್ನೆಲೆ ಹಲವು ಕುಟುಂಬಗಳು ಮಕ್ಕಳು ಮರಿಗಳೊಂದಿಗೆ ಮತ್ತೊಬ್ಬರ ಮನೆ ದೇವಸ್ಥಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಅರುಣ್ ಕುಮಾರ್ ಕದಂ
  Published by:Vijayasarthy SN
  First published: