ಕಲಬುರ್ಗಿ: ಬಿಸಿಲೂರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ವಂಚನೆ ಗಂಭೀರ ಆರೋಪ ಕೇಳಿ ಬಂದಿದೆ. ಐಎಎಸ್ 2017 ಬ್ಯಾಚ್ ನ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ದ ದೆಹಲಿ ಮೂಲದ ಯುವತಿ ದೋಖಾ ಮಾಡಿರುವ ಆರೋಪ ಮಾಡಿದ್ದಾಳೆ. ಯುವತಿ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾಗ 2019 ರಲ್ಲಿ ಲೋಖಂಡೆ ಪರಿಚಯವಾಗಿತ್ತಂತೆ. ಅಲ್ಲದೆ ಪರಸ್ಪರ ಭೇಟಿ ಅಲ್ಲದೆ ರೂಂಗೆ ಕರೆಸಿಕೊಂಡು ದಿನ ಕಳೆದಿದ್ದಾರಂತೆ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಸ್ನೇಹಲ್ ಲೋಖಂಡೆ ಮೋಸ ಮಾಡಿದ್ದಾರೆ ಅಂತಾ ದೆಹಲಿ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ವಿಜಯಪುರದ ಸಿಂಧಗಿಯಲ್ಲಿ ಲೋಖಂಡೆ ಎಸಿ ಆಗಿದ್ದಾಗ ಪೋಷಕರ ಜೊತೆಗೆ ಯುವತಿ ಆಗಮಿಸಿ ಲೋಖಂಡೆ ಅವರ ಕುಟುಂಬಸ್ಥರಿಗೆ ಭೇಟಿ ಆದರೂ ನ್ಯಾಯ ಸಿಗಲಿಲ್ಲವಂತೆ.
ದೆಹಲಿಯಲ್ಲಿ 2019 ಮೇ 17ರಿಂದ ಮೂರು ದಿನಗಳ ಕಾಲ ಸ್ನೇಹಲ್ ಅವರು ತನ್ನ ಜೊತೆ ಇದ್ದರು. ಆಗ ಮದುವೆ ಆಗುವುದಾಗಿ ಸ್ನೇಹಲ್ ಭರವಸೆ ಕೊಟ್ಟಿದ್ದರಂತೆ. ಅದೇ ಜೂನ್ ತಿಂಗಳಲ್ಲಿ ಲಂಡನ್ಗೆ ಹೋಗುವ ಮುನ್ನ ಯುವತಿ ಜೊತೆ ಸ್ನೇಹಲ್ ಕಾಲ ಕಳೆದಿದ್ದರಂತೆ. ಜುಲೈ 20ರಂದು ದೆಹಲಿಯ ಹಾಸ್ಟೆಲ್ನಲ್ಲಿ ಇಬ್ಬರೂ ಒಂದು ರಾತ್ರಿ ಇದ್ದರು. ಮಾರನೇ ದಿನ ಐಪಿಲ್ ತೆಗೆದುಕೊಳ್ಳುವಂತೆ ಸ್ನೇಹಲ್ ಸಲಹೆ ನೀಡಿದರಂತೆ.
ಆಗಸ್ಟ್ 4ರಂದು ಇಬ್ಬರೂ ಭೇಟಿಯಾಗಿ ಲಂಚ್ ನಂತರ ರಾಯಲ್ ಪ್ಲಾಜಾದಲ್ಲಿ ಒಟ್ಟಿಗೆ ಇದ್ದಾರೆ. ಸ್ನೇಹಲ್ ಅವರ ಎರಡನೇ ಹಂತದ ತರಬೇತಿ ವೇಳೆ ದೆಹಲಿಯಲ್ಲಿ ಇದ್ದಷ್ಟೂ ದಿನವೂ ಯುವತಿಯನ್ನ ಭೇಟಿಯಾಗುತ್ತಿದ್ದರಂತೆ.
ಸ್ನೇಹಲ್ ಲೋಖಂಡೆ ಈ ಹಿಂದೆಯೂ ಬೇರೊಬ್ಬ ಹುಡುಗಿ ಜೊತೆ ಸಂಬಂಧ ಹೊಂದಿದ್ದರು ಎಂದು ಈ ಯುವತಿ ಆರೋಪಿಸಿದ್ದಾಳೆ. ಮದುವೆ ವಿಷಯ ಎತ್ತಿದ ಬಳಿಕ ಆ ಹುಡುಗಿಯನ್ನ ಕೈಬಿಟ್ಟಿದ್ದರಂತೆ. ತನ್ನೊಂದಿಗೆ ಎರಡು ವರ್ಷ ಸಂಬಂಧ ಬೆಳೆಸಿ ಮದುವೆ ವಿಚಾರ ಬಂದಾಗ ಕೈಬಿಟ್ಟಿದ್ಧಾರೆ ಎಂದು ಈ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಆತನ ಮಾತಿಗೆ ಕಿಮ್ಮತ್ತಿಲ್ಲ: Siddaramaiah ವಿವಾದಾತ್ಮಕ ಹೇಳಿಕೆ
ಯುವತಿ ಮತ್ತು ಆಯುಕ್ತ ಸ್ನೇಹಲ್ ಲೋಖಂಡೆ ನಡುವೆ ನಡೆದಿದೆ ಎನ್ನಲಾದ ಎಲ್ಲಾ ವಿಷಯಗಳನ್ನು ಪತ್ರದಲ್ಲಿ ಬರೆದು ನ್ಯಾಯಕ್ಕಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕಲಬುರಗಿ ಉಸ್ತುವಾರಿ ಮುರುಗೇಶ್ ನಿರಾಣಿ ಅವರಿಗೆ ಟ್ವಿಟರ್ ಮೂಲಕ ದೂರು ನೀಡಿ ಮನವಿ ಮಾಡಿದ್ದಾಳೆ. ಅಲ್ಲದೆ ಲೋಖಂಡೆ ಮತ್ತು ಯುವತಿ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಅಪ್ ಚಾಟ್ ಗಳನ್ನು ಟ್ಯಾಗ್ ಮಾಡಿದ್ದಾಳೆ. ಸಂತ್ರಸ್ತೆ ಯುವತಿಯ ಈ ಟ್ವೀಟ್ ದೂರು ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇನ್ನು ಈ ಬಗ್ಗೆ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರನ್ನ ಕೇಳಿದ್ರೆ, ಯುವತಿ ಯಾರು ಅಂತಾ ಗೊತ್ತಿಲ್ಲ, ವಾಟ್ಸ್ಅಪ್ ಚಾಟ್ ಗಳೆಲ್ಲ ಫೇಕ್ (ಫೇಳ್ಳು) ಅಂತಾ ಹೇಳಿದ್ದಾರೆ.
ದೆಹಲಿ ಮೂಲದ ಸಂತ್ರಸ್ತ ಯುವತಿ ಕಳೆದ ಎರಡ್ಮೂರು ದಿನಗಳ ಹಿಂದೆ ತನ್ನ ಪೋಷಕರೊಂದಿಗೆ ಕಲಬುರಗಿಗೆ ಆಗಮಿಸಿ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದಾಳೆ. ಲೋಖಂಡೆ ಮತ್ತು ಯುವತಿ ಮಧ್ಯೆ ನಡೆದ ಕೆಲ ವಿಷಯಳನ್ನು ಪೊಲೀಸ್ ಕಮಿಷನರ್ ವೈ ಎಸ್ ರವಿಕುಮಾರ್ ಅವರಿಗೆ ತಿಳಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಯುವತಿಯ ದೂರನ್ನ ಆಲಿಸಿದ ಕಮಿಷನರ್ ರವಿಕುಮಾರ್ ವಂಚನೆ ಪ್ರಕರಣದ ದೂರು ದೆಹಲಿಯಲ್ಲಿ ದಾಖಲು ಮಾಡುವಂತೆ ಯುವತಿಗೆ ಸೂಚಿಸಿದ್ದಾರೆ. ಇತ್ತ ಆಯುಕ್ತ ಸ್ನೇಹಲ್ ಲೋಖಂಡೆ, ಸಾಮಾಜಿಕ ಜಾಲತಾಣದಲ್ಲಿ ನನ್ನ ಪರಿಚಯ ಇದೇ ಅಂತಾ ಹೇಳಿ ನನ್ನ ಅವಹೇಳನ ಮಾಡ್ತಿದ್ದಾರೆ. ಪಾಲಿಕೆ ಆಯುಕ್ತ ಟ್ವಿಟರ್ ಖಾತೆ ಹ್ಯಾಂಡಲ್ ಮಾಡ್ತಿದ್ದ ಖಾತೆ ಮೇಲೆ ನಿನ್ನೆ ಸಂಜೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಲೋಖಂಡೆ ದೂರು ದಾಖಲಿಸಿದ್ದು, ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Omicron ಆತಂಕ: ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿ
ಕಲಬುರಗಿ ಪಾಲಿಕೆ ಅಯುಕ್ತ ಸ್ನೇಹಲ್ ಲೋಖಂಡೆ ಮೇಲಿನ ದೆಹಲಿ ಮೂಲದ ಯುವತಿ ಮಾಡಿರುವ ದೋಖಾ ಗಂಭೀರ ಆರೋಪ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಟ್ಟಿನಲ್ಲಿ ಲೋಖಂಡೆ ದೂರಿನ ಹಿನ್ನೆಲೆ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದು, ಆಯುಕ್ತ ಸ್ನೇಹಲ್, ಯುವತಿಗೆ ಮೋಸ ಮಾಡಿದ್ದಾರಾ? ಅಥವಾ ಆಯುಕ್ತರಿಗೆ ಬ್ಲಾಕ್ ಮೇಲ್ ಮಾಡಲು ಈ ಷಡ್ಯಂತ್ರ ಮಾಡಲಾಗಿದೆಯಾ? ಅನ್ನೊ ಸಂಪೂರ್ಣ ತನಿಖೆ ನಂತ್ರ ಬೆಳಕಿಗೆ ಬರಬೇಕಿದೆ. ಅದೇನೆ ಇದ್ರು ಪಾಲಿಕೆ ಆಯುಕ್ತರ ಮೇಲೆ ಕೇಳಿಬಂದಿರುವ ವಂಚನೆಯ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಮಾತ್ರ ಸುಳ್ಳಲ್ಲ.
ವರದಿ: ಅರುಣ್ ಕುಮಾರ್ ಕದಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ