news18-kannada Updated:January 18, 2021, 7:48 AM IST
ಸಾಂದರ್ಭಿಕ ಚಿತ್ರ
ಕಲಬುರ್ಗಿ: ಜಿಲ್ಲೆ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ ಸಹೋದರರ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರೋ ಮಹಾಗಾಂವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಂದ್ರಕಾಂತ್ ಎಂದು ಗುರುತಿಸಲಾಗಿದೆ. ಹೆಣ್ಣಿನ ವಿಚಾರವಾಗಿ ಕೊಲೆ ಪ್ರಕರಣ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕೊಲೆಯಾದ ನಿಲೇಶ್ ಎಂಬಾತ ಕೆಲ ವರ್ಷಗಳ ಹಿಂದೆ ಚಂದ್ರಕಾತ್ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಹಗೆತನದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹಾಡ ಹಗಲೇ ಹತ್ತಾರು ಜನರ ಸಮ್ಮುಖದಲ್ಲಿಯೇ ನಿಲೇಶ್ ಹಾಗೂ ಆತನ ಸಹೋದರ ರಾಜು ಎಂಬುವರ ಬರ್ಬರ ಹತ್ಯೆಯಾಗಿತ್ತು. ಸಂಕ್ರಾಂತಿ ಸಂಭ್ರಮದಲ್ಲಿದ್ದ ಕಲಬುರ್ಗಿ ಜನತೆಯನ್ನು ಜೋಡಿ ಕೊಲೆ ಬೆಚ್ಚಿ ಬೀಳಿಸಿತ್ತು.
ಜನವರಿ 15 ರಂದು ಜನ ನೋಡ ನೋಡುತ್ತಿರುವಂತೆಯೇ ಸಹೋದರರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. 39 ವರ್ಷದ ನಿಲೇಶ್ ಮೋರೆ ಮತ್ತು 31 ವರ್ಷದ ರಾಜಶೇಖರ್ ಮೋರೆ ಕೊಲೆಯಾಗಿ ಹೋಗಿದ್ದರು. ಇಬ್ಬರು ಕೂಡ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡ ಜೀವನ ನಡೆಸುತ್ತಿದ್ದರು. ನಿಲೇಶ್ ನಿಗೆ ಮದುವೆಯಾಗಿದ್ದು ಮೂರು ಮಕ್ಕಳಿದ್ದವು. ರಾಜು ತನ್ನ ತಾಯಿ ಜೊತೆ ಗ್ರಾಮದ ಹೊರವಲಯದಲ್ಲಿರುವ ಮನೆಯಲ್ಲಿ ವಾಸವಾಗಿದ್ದ.
ನಿಲೇಶ್ ಪತ್ನಿ ಮತ್ತು ಮಕ್ಕಳ ಜೊತೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆರೋಪಿ ಚಂದ್ರಪ್ಪನ ಸಹೋದರಿಯ ಜೊತೆ ನಿಲೇಶ್ ಅಕ್ರಮ ಸಂಬಂಧ ಹೊಂದಿದ್ದ. ಆದರೆ, ಆಕೆಯನ್ನು ಬಿಟ್ಟು ಮಹಾರಾಷ್ಟ್ರದ ನಾಗ್ಪೂರು ಮೂಲದ ಉಶಾಳನ್ನು ಮದುವೆಯಾಗಿದ್ದ.ಇದನ್ನೂ ಓದಿ: INDIA VS AUSTRALIA LIVE: ಭಾರತ ಉತ್ತಮ ಪ್ರದರ್ಶನ, ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಪತನ
ಮದುವೆ ನಂತರ ನಿಲೇಶ್ ನಿಗೆ ಮೂರು ಮಕ್ಕಳಾಗಿವೆ. ಇತ್ತ ಚಂದ್ರಪ್ಪನ ಸಹೋದರಿಗೆ ಕೂಡಾ ಮದುವೆಯಾಗಿದೆ. ಆದ್ರೆ ತನ್ನ ಸಹೋದರಿ ಬಾಳನ್ನು ನಿಲೇಶ್ ಹಾಳು ಮಾಡಿದ್ದ ಅನ್ನೋ ದ್ವೇಷದಿಂದ ಕುದಿಯುತ್ತಿದ್ದ ಚಂದ್ರಪ್ಪ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಎನ್ನಲಾಗಿದೆ.ಇದೇ ದ್ವೇಷದ ಹಿನ್ನೆಲೆಯಲ್ಲಿ ಅನೇಕ ಬಾರಿ ಚಂದ್ರಪ್ಪ ನಿಲೇಶ್ ಮನೆಗೆ ಬಂದು ಗಲಾಟೆ ಕೂಡಾ ಮಾಡಿದ್ದ.
ಆದರೆ, ಜನವರಿ 15 ರಂದು ಮುಂಜಾನೆ ಚಂದ್ರಪ್ಪ, ನಿಲೇಶ್ ಮತ್ತು ರಾಜು ರನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಮದ್ಯ ಕುಡಿಸಿದ್ದನಂತೆ. ನಿಲೇಶ್ ಮತ್ತು ರಾಜುವಿಗೆ ಚೆನ್ನಾಗಿ ಕುಡಿಸಿದ ಚಂದ್ರಪ್ಪ ಊರಿಗೆ ವಾಪಸ್ಸಾಗುವ ವೇಳೆ ಇಬ್ಬರು ಸಹೋದರರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಚಂದ್ರಪ್ಪ ಪರಾರಿಯಾಗಿದ್ದ. ಕುಟುಂಬದ ಸದಸ್ಯರ ದೂರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಅನ್ವಯ ಆರೋಪಿ ಚಂದ್ರಪ್ಪನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣಿನ ವಿಚಾರವಾಗಿ ಕೊಲೆ ಮಾಡಿದಿದೆ ಎಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by:
MAshok Kumar
First published:
January 18, 2021, 7:48 AM IST