HOME » NEWS » District » KALABURGI POLICE THE SEIZURE OF GUTKA TOBACCO AND MARIJUANA WORTH MILLIONS OF RUPEES HK

ಕಲಬುರ್ಗಿ ಪೊಲೀಸರ ಮುಂದುವರಿದ ಕಾರ್ಯಾಚರಣೆ ; ಲಕ್ಷಾಂತರ ರೂಪಾಯಿ ಮೌಲ್ಯದ ಗುಟ್ಕಾ, ತಂಬಾಕು, ಗಾಂಜಾ ವಶಕ್ಕೆ

ಕಲಬುರ್ಗಿಯ ಬ್ರಹ್ಮಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:September 16, 2020, 2:39 PM IST
ಕಲಬುರ್ಗಿ ಪೊಲೀಸರ ಮುಂದುವರಿದ ಕಾರ್ಯಾಚರಣೆ ; ಲಕ್ಷಾಂತರ ರೂಪಾಯಿ ಮೌಲ್ಯದ ಗುಟ್ಕಾ, ತಂಬಾಕು, ಗಾಂಜಾ ವಶಕ್ಕೆ
ಇಬ್ಬರು ಆರೋಪಿಗಳು
  • Share this:
ಕಲಬುರ್ಗಿ(ಸೆಪ್ಟೆಂಬರ್.16): ಕಲಬುರ್ಗಿ ಪೊಲೀಸರು ಕಾರ್ಯಾಚರಣೆಗಳನ್ನು ಮುಂದುವರೆಸಿದ್ದಾರೆ. ಅದರಲ್ಲಿಯೂ ಬೆಂಗಳೂರು ಪೊಲೀಸರು ಕಾಳಗಿ ಬಳಿ ದಾಳಿ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪೊಲೀಸರು ಚುರುಕಾಗಿ ಅಡ್ಡಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತ್ಯೇಕ ದಾಳಿಗಳನ್ನು ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗುಟ್ಕಾ, ತಂಬಾಕು ಉತ್ಪನ್ನ ಹಾಗೂ ಗಾಂಜಾವನ್ನು ಜಪ್ತಿ ಮಾಡಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸುಕೊಳ್ಳುವಲ್ಲಿ ಕಲಬುರ್ಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕಾಳಗಿ ಪೊಲೀಸರು, ಅಕ್ರಮ ಸಾಗಾಟದ ಟೆಂಪೊ ಟ್ರಕ್ ವಶಕ್ಕೆ ಪಡೆದಿದ್ದಾರೆ. ಸುಮಾರು 17 ಲಕ್ಷ ಮೌಲ್ಯದ ತಂಬಾಕು ಉತ್ಪನ್ನ ವಶಕ್ಕೆ ಪಡೆಯಲಾಗಿದೆ. ಪೊಲೀಸರಿಂದ ಓರ್ವನನ್ನು ಬಂಧಿಸಲಾಗಿದೆ. ಸುನೀಲ್ ಯಾಧವ ಬಂಧಿತ ಆರೋಪಿಯಾಗಿದ್ದಾನೆ. 

ತೆಲಂಗಾಣ ಮೂಲದ ಲಾರಿಯಲ್ಲಿ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು. ವಿಜಯಪುರದಿಂದ ಕಾಳಗಿ ಮೂಲಕ ತೆಲಂಗಾಣದತ್ತ ಹೊರಟ್ಟಿದ್ದ ಟೆಂಪೊ ಟ್ರಕ್. ಕಾಳಗಿಯ ಅಂಬೇಡ್ಕರ ಸರ್ಕಲ್ ಹತ್ತಿರ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

ತಂಬಾಕು ಉತ್ಪನ್ನಗಳ ಮುಂದೆ ಉಪ್ಪಿನಕಾಯಿ ಡಬ್ಬಿಗಳನ್ನಿಟ್ಟು ಮುಚ್ಚಿ ಸಾಗಾಟ ಮಾಡುತ್ತಿದ್ದ ಚಾಲಕ. ಅಕ್ರಮ ಸಾಗಾಟದ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ :

ಕಲಬುರ್ಗಿಯ ಬ್ರಹ್ಮಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ನಗರದ ಎಸ್.ಟಿ.ಬಿ.ಟಿ. ಕ್ರಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Sandalwood Drug Case: ಮಾದಕ ವಸ್ತು ಪ್ರಕರಣ: ಸ್ಟಾರ್​ ದಂಪತಿ ದಿಗಂತ್​-ಐಂದ್ರಿತಾ ವಿಚಾರಣೆ

ಬಂಧಿತರನ್ನು ರಮೇಶ್ ಕಾಳೆ ಮತ್ತು ಫಿರೋಜ್ ಅಲಿ ಎಂದು ಗುರುತಿಸಲಾಗಿದೆ. ರಮೇಶ್ ಕಾಳೆ ಕಲಬುರ್ಗಿಯ ಮಾಂಗರವಾಡಿ ನಿವಾಸಿಯಾದ್ರೆ, ಫಿರೋಜ್ ಅಲಿ ಬೀದರ್ ನ ಛಿದ್ರಿ ಕಾಲೋನಿ ನಿವಾಸಿಯಾಗಿದ್ದಾನೆ.

ಬಂಧಿತರಿಂದ 6 ಸಾವಿರ ರೂಪಾಯಿ ಮೌಲ್ಯದ 800 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಲಬುರ್ಗಿಯ ಎಸ್.ಟಿ.ಬಿ.ಟಿ. ಕ್ರಾಸ್ ಬಳಿ ಗಾಂಜಾ ಮಾರುತ್ತಿದ್ದ ಆರೋಪಿಗಳು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Published by: G Hareeshkumar
First published: September 16, 2020, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories