ಕಲಬುರ್ಗಿ ಪೊಲೀಸರಿಂದ ಎಂಟು ಜನ ಕಳ್ಳರ ಬಂಧನ ; ಆರು ಲಕ್ಷ ರೂಪಾಯಿ ಮೌಲ್ಯದ ವಸ್ತು ಜಪ್ತಿ

ಕಲಬುರ್ಗಿ ಹೊರವಲಯದ ಕೆಸರಟಗಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಏಳು ಜನರನ್ನು ವಿಚಾರಿಸಲು ಮುಂದಾದಾಗ, ಮೂವರು ಎಸ್ಕೇಪ್ ಆಗಿದ್ದಾರೆ. ನಾಲ್ವರು ದರೋಡೆ ಕೋರರನ್ನು ಪೊಲೀಸರು ಬಂಧಿಸಿದ್ದಾರೆ.

news18-kannada
Updated:August 12, 2020, 6:50 PM IST
ಕಲಬುರ್ಗಿ ಪೊಲೀಸರಿಂದ ಎಂಟು ಜನ ಕಳ್ಳರ ಬಂಧನ ; ಆರು ಲಕ್ಷ ರೂಪಾಯಿ ಮೌಲ್ಯದ ವಸ್ತು ಜಪ್ತಿ
ಆರೋಪಿಗಳು
  • Share this:
ಕಲಬುರ್ಗಿ(ಆಗಸ್ಟ್​. 12): ಕಲಬುರ್ಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ನಾಲ್ವರು ದರೋಡೆಕೋರರನ್ನು ಬಂಧಿಸುವವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಬಾಪು ನಗರದ ಆಟೋ ಚಾಲಕರಾದ ಸೋಮನಾಥ ಸಕಟ (25), ದೇವರಾಜ್ ಕಾಂಬಳೆ (25), ಬಾಪುನಗರದ ಆಟೋ ಚಾಲಕ, ಶಶಿನಾಥ್ ಪಾಟೀಲ್ (25)  ಮತ್ತು ಭರತ ನಗರದ ತಾಂಡಾದ ಚರಣ ಸಕಟ(23) ಎಂದು ಗುರುತಿಸಲಾಗಿದೆ.

ಬಂಧಿತರ ಪೈಕಿ ಮೂವರು ಆಟೋ ಚಾಲಕರಾಗಿದ್ದರೆ, ಓರ್ವ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ಸಾಮಾನು ಮಾರುವ ಕಾಯಕ ಮಾಡುತ್ತಿದ್ದವನು.ವಾಹನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸುತ್ತಿದ್ದ ಆರೋಪಿಗಳು. ಬೆದರಿಸಿ ಹಣ, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಖದೀಮರು. ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ದರೋಡೆಕೋರರ ಗ್ಯಾಂಗ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ವಿ.ವಿ. ಠಾಣೆ ಪೊಲೀಸ್ ಇನ್ಸಪೆಕ್ಟರ್ ಎಸ್.ಎಸ್.ಹಿರೇಮಠ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.

ಕಲಬುರ್ಗಿ ಹೊರವಲಯದ ಕೆಸರಟಗಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಏಳು ಜನರನ್ನು ವಿಚಾರಿಸಲು ಮುಂದಾದಾಗ, ಮೂವರು ಎಸ್ಕೇಪ್ ಆಗಿದ್ದಾರೆ. ನಾಲ್ವರು ದರೋಡೆ ಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3.45 ಲಕ್ಷ ರೂಪಾಯಿ 95 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಚಾಕು, ಒಂದು ಬೈಕ್ ಜಪ್ತಿ ಮಾಡಲಾಗಿದೆ.

ಕಲಬುರ್ಗಿಯ ಗುಬ್ಬಿ ಕಾಲೋನಿ, ವಿದ್ಯಾನಗರ, ಸೇಡಂ ರೋಡ್ ನ ಯಶಸ್ವಿ ಕಾಲೋನಿ, ಗ್ರೀನ್ ಸಿಟಿ ಹಾಗೂ ನಾಗನಹಳ್ಳಿ ರಿಂಗ್ ರಸ್ತೆಯ ವಾಹನಗಳನ್ನು, ದಾರಿ ಹೋಕರನ್ನು ಅಡ್ಡಗಟ್ಟಿ, ಚಾಕು ತೋರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದರೆಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ : ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಒದಗಿಸಲು ಆಗ್ರಹ

ಒಟ್ಟು ಐದು ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳು, ವಾಹನ ಸಂಚಾರರಿಗೆ ದೊಡ್ಡ ಕಂಟಕವಾಗಿ ಮಾರ್ಪಟ್ಟಿದ್ದರು. ಇವರಿಗೆ ಸಹಕರಿಸಿದ ಉಳಿದ ಆರೋಪಿಗಳ ಬಂಧನಕ್ಕೂ ಜಾಲ ಬೀಸಿರುವುದಾಗಿ ಸಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ನರಿಬೋಳ ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ವಾಡಿ ಪೊಲೀಸರಿಂದ ಬ್ಯಾಟರಿ ಕಳ್ಳರ ಬಂಧನ :ಕಲಬುರ್ಗಿ ಜಿಲ್ಲೆ ಚಿತ್ತಾಪುರದ ವಾಡಿ ಪೊಲೀಸರ ಕಾರ್ಯಾಚರಣೆ ನಡೆಸಿ, ನಾಲ್ವರು ಬ್ಯಾಟರಿ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟರಿ ಕಳ್ಳತನ ಆರೋಪಿಗಳು


ಬಂಧಿತ ಆರೋಪಿಗಳನ್ನು ಧಕ್ಕಾ ತಾಂಡಾದ ವಂದನಾ ಸಲೀಂ ಶೇಖ್, ಲಕ್ಷ್ಮಿ ಕಾಂಬಳೆ, ಶಹಾಬಾದ್ ನ ಗೌಸ್ ಬಂಗಡಿವಾಲೆ ಹಾಗೂ ಗೋಳಾ ಗ್ರಾಮದ ದೇವರಾಜ ಮಾವನೂರ ಎಂದು ಗುರುತಿಸಲಾಗಿದೆ. ಬಂಧಿತರನಿಂದ 36 ಸಾವಿರ ರೂಪಾಯಿ ಮೌಲ್ಯದ ಆರು ಬ್ಯಾಟರಿ ವಶಕ್ಕೆ ಪಡೆಯಲಾಗಿದೆ.

ವಾಡಿಯ ಬಿರ್ಲಾ ಏರಿಯಾದಲ್ಲಿ ನಿಲ್ಲಿಸಿದ್ದ ಶೇಖ್ ಮೆಹಬೂಬ್ ಎಂಬುವರಿಗೆ ಸೇರಿದ ಟಿಪ್ಪರ್ ನಲ್ಲಿದ್ದ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಆಟೋ ಸಹ ವಶಕ್ಕೆ ಪಡೆಯಲಾಗಿದೆ. ಒಟ್ಟು 2.86 ಲಕ್ಷ ರೂಪಾಯಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  -
Published by: G Hareeshkumar
First published: August 12, 2020, 6:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading