• Home
  • »
  • News
  • »
  • district
  • »
  • ಹಿರಿಯ ನಾಗರಿಕರ ಸಹಾಯಕ್ಕೆ ಬರುವ ಅಪರೂಪದ ವ್ಯಕ್ತಿ ಕಾರವಾರದ ಜೂಡ್ ಫರ್ನಾಂಡೀಸ್​ ಬಗ್ಗೆ ಜನಮೆಚ್ಚುಗೆ!

ಹಿರಿಯ ನಾಗರಿಕರ ಸಹಾಯಕ್ಕೆ ಬರುವ ಅಪರೂಪದ ವ್ಯಕ್ತಿ ಕಾರವಾರದ ಜೂಡ್ ಫರ್ನಾಂಡೀಸ್​ ಬಗ್ಗೆ ಜನಮೆಚ್ಚುಗೆ!

ಜೂಡ್ ಫರ್ನಾಂಡಿಸ್

ಜೂಡ್ ಫರ್ನಾಂಡಿಸ್

ಬಿಕಾಂ ಪದವಿ ಮುಗಿಸಿರುವ ಇವರು ಮದುವೆಯಾಗಿ ನಾಲ್ವರು ಮಕ್ಕಳಿದ್ದಾರೆ. ಕಾಲೇಜು ಹೋಗುತ್ತಿರುವಾಗಲೇ ತಂದೆ- ತಾಯಿ ಕಳೆದುಕೊಂಡಿರುವ ಇವರಿಗೆ ಅವರ ಸೇವೆ ಮಾಡುವ ಭಾಗ್ಯ ಸಿಗಲಿಲ್ಲ. ಹೀಗಾಗಿ ತಮ್ಮ ಮನೆಯವರ ಪ್ರೋತ್ಸಾಹದಿಂದ ಹಿರಿಯ ನಾಗರಿಕರು ಸಹಾಯಕ್ಕಾಗಿ ಕಾಲ್ ಮಾಡಿದ್ರೆ ತಕ್ಷಣ ಅವರ ಮನೆಗೆ ಧಾವಿಸಿ, ಬೇಕಾದ ಅಗತ್ಯ ಸಹಾಯ ಮಾಡುತ್ತಾರೆ.

ಮುಂದೆ ಓದಿ ...
  • Share this:

ಕಾರವಾರ: ಸಮಾಜಸೇವೆಯಲ್ಲಿ ನಾನಾ ರೂಪ. ಅಸಹಾಯಕರಿಗೆ ನೀರು, ಆಹಾರ ವಿತರಿಸುವುದನ್ನು ನಾವು ನೋಡಿದ್ದೇವೆ. ಈಗ ಕೋವಿಡ್ ಸಂಕಷ್ಟದ ದಿನ ಅದೆಷ್ಟೋ ಜನ ಸಹಾಯಕ್ಕೆ ನಿಂತಿದ್ದಾರೆ. ಹೀಗೆ  ಉತ್ತರಕನ್ನಡ ಜಿಲ್ಲೆಯ ಕಾರವಾರದ ವ್ಯಕ್ತಿ ಜೂಡ್ ಫರ್ನಾಂಡೀಸ್ ಮಾತ್ರ ಅಪರೂಪದ ಸಮಾಜಸೇವೆಯ ಮೂಲಕ ಮನೆಮಾತಾಗಿದ್ದಾರೆ. ಕೋವಿಡ್ ಸಮಯದಲ್ಲಿ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವ ಇವರು ಈಗ ಕಾರವಾರದಾದ್ಯಂತ ಮಾದರಿ ಆಗಿದ್ದಾರೆ. ಹಿರಿಯ ನಾಗರಿಕರ ಹೃದಯಕ್ಕೆ ಮಿಡಿಯುವ ಈ ವ್ಯಕ್ತಿಯ ಸೇವೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ.


ಹೌದು, ಕೋವಿಡ್- 19 ತೌಕ್ತೆ ಚಂಡಮಾರುತದಿಂದಾಗಿ ಉತ್ತರಕನ್ನಡ ಜಿಲ್ಲೆಯ ನಾಗರಿಕರು ತತ್ತರಿಸಿದ್ದಾರೆ. ಕೊರೋನಾ ರಣಕೇಕೆ ನಡುವೆ ಅಬ್ಬರಿಸಿದ ತೌಕ್ತೆ  ಚಂಡಮಾರುತಕ್ಕೆ ಸರಿಯಾಗಿ ವಿದ್ಯುತ್ ಇಲ್ಲ. ಕಳೆದ ಐದು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಕಾರವಾರ ನಾಗರಿಕರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಹಿರಿಯ ನಾಗರಿಕರಂತೂ ಹೈರಾಣಾಗಿ ಹೋಗಿದ್ದಾರೆ. ಮನೆಯ ಪಂಪ್ ಚಾಲು ಆಗ್ತಿಲ್ಲ. ಮೊಬೈಲ್ ಸ್ವಿಚ್ಡ್ ಆಫ್, ಹೀಗೆ ಮನೆಯ ಯಾವುದೇ ಕೆಲಸವೂ ಆಗ್ತಿಲ್ಲ.  ಇನ್ನು ಕೋಬಿಡ್ ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. ಇಂತಹವರ ಪಾಡು ಈ ವಿದ್ಯುತ್ ಇಲ್ಲದೆ ಹೇಳ ತೀರದ್ದಾಗಿದೆ. ಹೀಗಾಗಿ ಹಿರಿಯ ನಾಗರಿಕರ ಕಷ್ಟಕೇಳುವವರೆ ಇಲ್ಲ. ಇದನ್ನ ಅರಿತ ಕಾರವಾರ ನಗರದ ಬಾಂಡಿಶಿಟ್ಟಾದ ಜೂಡ್ ಫರ್ನಾಂಡೀಸ್ ಹಿರಿಯ ನಾಗರಿಕರ ಸಹಾಯಕ್ಕೆ ಮುಂದಾಗಿದ್ದಾರೆ. ತೊಂದರೆಗೆ ಸಿಲುಕಿದ ಹಿರಿಯ ನಾಗರಿಕರ ಮನೆಗೆ ಜನರೇಟರ್ ಒಯ್ದು ತಾತ್ಕಾಲಿಕ ವಿದ್ಯುತ್ ಕಲ್ಪಿಸುತ್ತಿದ್ದಾರೆ. ಅವರ ಮನೆಯ ನೀರಿನ ಟ್ಯಾಂಕ್ ತುಂಬಿಸುತ್ತಾರೆ. ಸ್ವಿಚ್ಡ್ ಆಫ್ ಆದ ಮೊಬೈಲ್ ಚಾರ್ಜ್ ಆಗುತ್ತೆ. ಮಹಿಳೆಯರು ಮಿಕ್ಸಿ ಸ್ಟಾರ್ಟ್ ಮಾಡಿ ಊಟದ ಸಾಂಬಾರಿಗೆ ಮಸಾಲೆ ರೆಡಿ ಮಾಡಿಕೊಳ್ಳಲು ಸಹಾಯವಾಗಿದೆ.


ಇದನ್ನು ಓದಿ: ರೊಟ್ಟಿ ಬುತ್ತಿ ಕಟ್ಟಿಕೊಂಡು ಪ್ರಚಾರ ನಡೆಸಿ ಏಕಕಾಲದಲ್ಲಿ 2 ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ರೈತ ನಾಯಕ ಬಾಬಾಗೌಡ ಪಾಟೀಲ್!


ಒಂದು ಕಡೆ ಕೋವಿಡ್ ಸಂಕಷ್ಟದಲ್ಲಿ ಕಾರವಾರ ನಗರ ಲಾಕ್ ಡೌನ್ ಸ್ಥಿತಿಯಲ್ಲಿದೆ. ಯಾರೂ ಕೂಡ ಇನ್ನೊಬ್ಬರ ಮನೆಗೆ ಹೋಗಲಾರದ ವಾತಾವರಣ ಇದೆ. ಇದರ ಜತೆಗೆ ಒಂದಿಷ್ಟು ಜನ ಕೊರೋನಾ ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. ಇದರ ನಡುವೆ ತೌಕ್ತೆ ಚಂಡಮಾರುತದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿರುವುದರಿಂದ ಜನತೆ ತೊಂದರೆಯಲ್ಲಿದ್ದಾರೆ. ಆದರೆ ಏನೂ ಮಾಡಲಾಗದ ಹಿರಿಯ ನಾಗರಿಕರ ಕಷ್ಟ ನೋಡಲಾರದೇ ಜೂಡ್ ಫರ್ನಾಂಡೀಸ್ ಇಂತ ಅಸಹಾಯಕ‌ ಸ್ಥಿತಿಯಲ್ಲಿ ಇದ್ದವರ ಸಹಾಯಕ್ಕೆ ಮುಂದಾಗಿದ್ದಾರೆ. 43 ವರ್ಷದ ಜೂಡ್ ಫರ್ನಾಂಡೀಸ್ ಹಿರಿಯ ನಾಗರಿಕರಿಗೆ ಮಾಡುವ ಈ ಸೇವೆ ದೇವರ ಸೇವೆ ಎಂದು ನಂಬಿದ್ದಾರೆ. ಹ್ಯುಮನ್ ರೈಟ್ ಎಜುಕೇಶನ್ ಅಸೋಸಿಯೇಶನ್ ನಾರ್ಥ್ ಕರ್ನಾಟಕ ಅಧ್ಯಕ್ಷರಾಗಿರುವ ಇವರು ತಮ್ಮ ಸ್ವಂತ ಖರ್ಚಿನಲ್ಲೇ ಈ‌ ಸೇವೆ ಮಾಡುತ್ತಿದ್ದಾರೆ.


ಬಿಕಾಂ ಪದವಿ ಮುಗಿಸಿರುವ ಇವರು ಮದುವೆಯಾಗಿ ನಾಲ್ವರು ಮಕ್ಕಳಿದ್ದಾರೆ. ಕಾಲೇಜು ಹೋಗುತ್ತಿರುವಾಗಲೇ ತಂದೆ- ತಾಯಿ ಕಳೆದುಕೊಂಡಿರುವ ಇವರಿಗೆ ಅವರ ಸೇವೆ ಮಾಡುವ ಭಾಗ್ಯ ಸಿಗಲಿಲ್ಲ. ಹೀಗಾಗಿ ತಮ್ಮ ಮನೆಯವರ ಪ್ರೋತ್ಸಾಹದಿಂದ ಹಿರಿಯ ನಾಗರಿಕರು ಸಹಾಯಕ್ಕಾಗಿ ಕಾಲ್ ಮಾಡಿದ್ರೆ ತಕ್ಷಣ ಅವರ ಮನೆಗೆ ಧಾವಿಸಿ, ಬೇಕಾದ ಅಗತ್ಯ ಸಹಾಯ ಮಾಡುತ್ತಾರೆ.

Published by:HR Ramesh
First published: