HOME » NEWS » District » JOB CREATION DURING CORONA LOCKDOWN DEVELOPMENT OF SCHOOL AND ANGANWADI CENTERS IN EMPLOYMENT GUARANTEE SCHEME RH RSK

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೂ ಕೆಲಸ ಸೃಷ್ಟಿ; ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿ

ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಿ ಶಾಲೆ ಅಂಗನವಾಡಿಗಳನ್ನು ಅಭಿವೃದ್ಧಿಗೊಳಿಸಿದ ಪಂಚಾಯಿತಿ ಅಧಿಕಾರಿಗಳು ಕೂಡ ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದಾರೆ. ಪಿಡಿಓ ಪ್ರಕಾಶ್ ಇಂತಹದ್ದೊಂದು ಯೋಜನೆ ರೂಪಿಸಿ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಊರಿನಲ್ಲೇ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ.

news18-kannada
Updated:November 15, 2020, 7:15 AM IST
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೂ ಕೆಲಸ ಸೃಷ್ಟಿ; ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿ
ಉದ್ಯೋಗ ಖಾತ್ರಿ ಅಡಿ ಅಭಿವೃದ್ಧಿಗೊಂಡಿರುವ ಶಾಲೆ.
  • Share this:
ಕೊಡಗು: ಉದ್ಯೋಗಖಾತ್ರಿ ಯೋಜನೆಯಲ್ಲಿ ಜನರಿಂದ ಕೆಲಸಗಳನ್ನು ಮಾಡಿಸುವುದಕ್ಕಿಂತ ಯಂತ್ರೋಪಕರಣಗಳ ಬಳಸಿ ಕೆಲಸ, ಕಾಮಗಾರಿ ಮಾಡುವುದೇ ಹೆಚ್ಚು. ಆದರೆ ಇಲ್ಲೊಂದು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನು ಬಳಸಿ ಶಾಲೆ, ಅಂಗನವಾಡಿಗಳ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗಿದೆ. ಈ ಶಾಲೆಗಳಿಗೆ ಯಾವ ಖಾಸಗೀ ಶಾಲೆಯೂ ಪೈಪೋಟಿ ನೀಡಲು ಸಾಧ್ಯವಿಲ್ಲ.

ಹೌದು, ದೇಶವೆಲ್ಲಾ ಕೊರೋನಾ ಆತಂಕದಿಂದ ಲಾಕ್‍ಡೌನ್ ಆಗಿ ಜನರು ದುಡಿಮೇ ಇಲ್ಲದೆ ಪರದಾಡುತ್ತಿದ್ದರೆ, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನರಿಗೆ ತಮ್ಮ ಊರುಗಳಲ್ಲೇ ಉದ್ಯೋಗ ದೊರಕಿಸಿಕೊಡಲಾಗಿತ್ತು. ಅದು ಕೂಡ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಉದ್ಯಾನವನಗಳ ಅಭಿವೃದ್ಧಿಗಾಗಿ.

ಹೌದು ಮೇಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಭಾಷ್ ನಗರದ ಅಂಗನವಾಡಿ ಮತ್ತು ಹಾಕತ್ತೂರಿನ ಪ್ರೌಢಶಾಲೆ ಮೂರನ್ನು ತಲಾ 3 ಲಕ್ಷ ರೂಪಾಯಿಗಳ ಅನುದಾನ ಬಳಸಿ ಉದ್ಯಾನವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಗೊಳಿಸಲಾಗಿದೆ. ಉದ್ಯಾನವಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಹಲವು ಬಗೆಯ ಹೂಗಿಡಗಳನ್ನು ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಉದ್ಯಾನವನದಲ್ಲಿ ಓಡಾಡುವ ಪಾಥ್ ಗಳಿಗೆ ಇಂಟರ್ ಲಾಕ್ ಗಳನ್ನು ಅಳವಡಿಸಿ ಸ್ವಚ್ಚವಾಗಿರುವಂತೆ ಮಾಡಲಾಗಿದೆ. ಉದ್ಯಾನವನಕ್ಕೆ ಸ್ಪಿಂಕಲರ್ ಗಳನ್ನು ಅಳವಡಿಸಿ ನೀರಾವರಿ ಸೌಲಭ್ಯವನ್ನು ಅಳವಡಿಸಲಾಗಿದೆ.

ಇದನ್ನು ಓದಿ: ಕ್ರಿಕೆಟ್ ಬೆಟ್ಟಿಂಗ್​ಗೂ ನನಗೂ ಸಂಬಂಧವಿಲ್ಲ, ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ; ಶಾಸಕ ಮತ್ತಿಮೋಡ

ಇನ್ನು ಅಂಗನವಾಡಿಯಲ್ಲಿಯೂ ಉದ್ಯಾನದ ಜೊತೆಗೆ ಮಕ್ಕಳ ಆಟದ ಸಾಮಾಗ್ರಿಗಳನ್ನು ಅಳವಡಿ ಮಕ್ಕಳನ್ನು ಸೆಳೆಯುವಂತೆ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ಸುಭಾಷ್ ನಗರದಲ್ಲಿ ಸ್ವಾಗತ್ ಯುವಕ ಸಂಘದ ಮೂಲಕ ಅಂಗನವಾಡಿ ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಊರಿನ ಜನರು ತಮ್ಮ ಕೂಲಿಯ ಹಣವನ್ನೂ ಅಂಗನವಾಡಿಯ ಅಭಿವೃದ್ಧಿಗೆ ಬಳಕೆ ಮಾಡಿದ್ದೇವೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಹರೀಶ್. ಸಂಘದ ಈ ಕೆಲಸವೂ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.
Youtube Video

ಒಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಿ ಶಾಲೆ ಅಂಗನವಾಡಿಗಳನ್ನು ಅಭಿವೃದ್ಧಿಗೊಳಿಸಿದ ಪಂಚಾಯಿತಿ ಅಧಿಕಾರಿಗಳು ಕೂಡ ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದಾರೆ. ಪಿಡಿಓ ಪ್ರಕಾಶ್ ಇಂತಹದ್ದೊಂದು ಯೋಜನೆ ರೂಪಿಸಿ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಊರಿನಲ್ಲೇ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಅಲ್ಲದೆ ಆ ಮೂಲಕ ಗ್ರಾಮಗಳ ಶಾಲೆ ಅಂಗನವಾಡಿಗಳನ್ನು ಅಭಿವೃದ್ದಿಗೊಳಿಸಿದ್ದಾರೆ.
Published by: HR Ramesh
First published: November 15, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories