HOME » NEWS » District » JDS WON IN NAGAMANGALA MUNICIPAL ELECTION IN MANDYA SESR RGM

ಸಂಸದೆ ಸುಮಲತಾ ಮತಚಲಾಯಿಸಿದರೂ ಕೈ ತಪ್ಪಿದ ಅಧಿಕಾರ; ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್​ ಪ್ರಾಬಲ್ಯ

ಸಂಸದೆ ಸುಮಲತಾ ಇದೇ ಮೊದಲ ಬಾರಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದರು.

news18-kannada
Updated:November 5, 2020, 6:29 PM IST
ಸಂಸದೆ ಸುಮಲತಾ ಮತಚಲಾಯಿಸಿದರೂ ಕೈ ತಪ್ಪಿದ  ಅಧಿಕಾರ; ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್​ ಪ್ರಾಬಲ್ಯ
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳು
  • Share this:
ಮಂಡ್ಯ (ನ.5): ತೀವ್ರ ಕುತೂಹಲ ಕೆರಳಿಸಿದ್ದ  ನಾಗಮಂಗಲ ಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಕೇವಲ ಒಂದು ಮತದ ಅಂತರದಿಂದ ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಡೇ ಕ್ಷಣದ ಕಸರತ್ತಿನ‌ ಮೂಲಕ ಸಂಸದೆ ಸುಮಲತಾರನ್ನು ಮತದಾನಕ್ಕೆ ಕರೆಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖ ಭಂಗವಾಗಿದೆ. ಮತದಾನಕ್ಕೆ ಬಂದು ಅಧಿಕಾರ ಕೊಡಿಸಲಾಗದೆ ಸಂಸದೆ ಸುಮಲತಾ ಕೂಡ ತೀವ್ರ  ಮುಖ ಭಂಗ ಅನುಭವಿಸಿದ್ದಾರೆ. ನಾಗಮಂಗಲ ಪಟ್ಟಣ ಪುರಸಭೆಗೆ ಇಂದು  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವ ಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ  ಸ್ಥಾನ ಮೀಸಲಾದರೆ, ಹಿಂದುಳಿದ ವರ್ಗ(ಎ) ಗೆ ಉಪಾಧ್ಯಕ್ಷ ಸ್ಥಾನ‌ ಮೀಸಲಾಗಿತ್ತು. ಕಳೆದ ಎರಡು ವರ್ಷದ ಹಿಂದೆ 23 ಸದಸ್ಯ ಬಲದ ಪುರಸಭೆಗೆ  ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ ಹಾಗೂ ಜೆಡಿ ಎಸ್ 12 ಸ್ಥಾನ ಪಡೆದಿತ್ತು. ಮೀಸಲಾತಿ ಪ್ರಕಟವಾಗಿ ಹೈಕೋರ್ಟ್ ಸೂಚನೆ ಮೇರೆಗೆ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.

23 ಸದಸ್ಯರ ಜೊತೆಗೆ 1 ಸಂಸದೆ ಹಾಗೂ ಕ್ಷೇತ್ರದ ಶಾಸಕ ಮತ ಸೇರಿ 25 ಮತ ಗಳು ಚುನಾವಣೆಗೆ ಊರ್ಜಿತವಾಗಿತ್ತು.ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ  ಚುನಾವಣೆಯಲ್ಲಿ 13 ಮತ ಪಡೆದು ಜೆಡಿಎಸ್ ನ ಆಶಾ  ಅಧ್ಯಕ್ಷೆಯಾಗಿ ಆಯ್ಕೆಯಾದರು. ಜೆಡಿಎಸ್ ನ ಜಾಫರ್ ಶರೀಪ್  ಉಪಾಧ್ಯಕ್ಷರಾಗಿ  ಆಯ್ಕೆಯಾದರು. 1 ಮತದ ಅಂತರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಪರಾಜಯ ಕೊಂಡಿದ್ದಾರೆ.

JDS Won in nagamangala municipal Election in mandya
ನಾಗಮಂಗಲ ಪುರಸಭೆ


ನಾಗಮಂಗಲ ಪಟ್ಟಣ ಪುರಸಭೆಯಲ್ಲಿ ಜೆಡಿಎಸ್​ಗೆ ಶಾಸಕ ಮತ ಸೇರಿ 13 ಮತಗಳೊಂದಿಗೆ ಸರಳ ಬಹುಮತವಿತ್ತು.  ಕಾಂಗ್ರೆಸ್ ನವರು ರಣತಂತ್ರ ರೂಪಿಸಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದರು. ಅಲ್ಲದೇ  ಜೆಡಿಎಸ್ ಪಕ್ಷದ ಸದಸ್ಯರನ್ನು‌ ಒಲೈಸಿರುವ ಮಾತುಗಳು ಕೇಳಿ ಬಂದಿತ್ತು‌. ಇದರ ಜೊತೆಗೆ ಸಂಸದೆ ಸುಮಲತಾ ಇದೇ ಮೊದಲ ಬಾರಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದರು.

ಇದನ್ನು ಓದಿ: ಶ್ರೀಗಂಧ ಮರ ಕದ್ದೊಯ್ಯಲು ಮನೆ ಮಾಲೀಕನ ಹತ್ಯೆ ಪ್ರಕರಣ: ಕಡೆಗೂ ಸಿಕ್ಕಿಬಿದ್ದ ಆರೋಪಿಗಳು

ಆದರೆ ಜೆಡಿಎಸ್ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ಜಾರಿ ಮಾಡುವ ಮೂಲಕ ಪ್ರತಿತಂತ್ರ ರೂಪಿಸಿ ಯಾವುದೇ ಸದಸ್ಯರ ಮತ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೀಳದ ಹಾಗೆ ಮಾಡಿತು. ಜೆಡಿಎಸ್  ಪಕ್ಷಕ್ಕೆ ಪುರಸಭೆ ಅಧಿಕಾರ ಸಿಗುವ ಹಾಗೇ ನೋಡಿಕೊಂಡರು. ಇದರಿಂದ ಸಂಸದೆ ಸುಮಲತಾಗೂ ಮತಚಲಾಯಿಸಿದರೂ ಕಾಂಗ್ರೆಸ್​ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು.  ಅಧಿಕಾರ ಕೊಡಿಸಲು ರಣತಂತ್ರ ರೂಪಿಸಿದ ಕೈ ನಾಯ ಕ ಚಲುವರಾಯಸ್ವಾಮಿ ಕೂಡ
ಇದರಿಂದ ಮುಜುಗರಕ್ಕೆ ಇಡಾದರು.ನಾಗಮಂಗಲ ಪಟ್ಟಣ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿದ ಸುದ್ದಿ ತಿಳಿಯುತ್ತಲೆ ಪುರಸಭೆ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಪಟಾಕಿ  ಸಿಡಿಸಿ ಸಿಹಿ ಹಂಚಿ  ಸಂಭ್ರಮಿಸಿದರು. ಪುರಸಭೆಯಲ್ಲಿ ಜೆಡಿಎಸ್ ನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಶಾಸಕ ಸುರೇಶ್ ಗೌಡರನ್ನು ಪಟ್ಟಣ ಪುರಸಭೆಯ ಮುಂಭಾಗ  ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಹೊತ್ತು‌ ಮೆರ ವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದರು.
Published by: Seema R
First published: November 5, 2020, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories