ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಹಿನ್ನೆಡೆ ; ಜೆಡಿಎಸ್ ತೆಕ್ಕೆಗೆ ಶಿವಮೊಗ್ಗ ಎಂಪಿಎಂಸಿ ಅಧ್ಯಕ್ಷ ‌ಸ್ಥಾನ

ಅಧ್ಯಕ್ಷರಾಗಿ ಜೆಡಿಎಸ್ ನ ದುಗ್ಗಪ್ಪ ಗೌಡ ಮತ್ತು ಆರ್. ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಕ್ ನೀಡಿದೆ.

news18-kannada
Updated:July 2, 2020, 3:43 PM IST
ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಹಿನ್ನೆಡೆ ; ಜೆಡಿಎಸ್ ತೆಕ್ಕೆಗೆ ಶಿವಮೊಗ್ಗ ಎಂಪಿಎಂಸಿ ಅಧ್ಯಕ್ಷ ‌ಸ್ಥಾನ
ಅಧ್ಯಕ್ಷ ದುಗ್ಗಪ್ಪ ಗೌಡ ಮತ್ತು ಉಪಾಧ್ಯಕ್ಷ ಆರ್​. ಬಾಬು
  • Share this:
ಶಿವಮೊಗ್ಗ(ಜೂ.02): ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟಕ್ಕೆ  ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಮತ್ತು ಉಪಧ್ಯಾಕ್ಷ ಸ್ಥಾನ ಸಿಕ್ಕಿದೆ. ಪ್ರಭಲ ಪೈಪೋಟಿ ನಡುವೆ ಜೆಡಿಎಸ್ ನ ದುಗ್ಗಪ್ಪ ಗೌಡ ಅಧ್ಯಕ್ಷರಾಗಿ ಮತ್ತು ಆರ್​.ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ಸೋಲು ಕಂಡು ಮುಖಭಂಗ ಅನುಭವಿಸಿದೆ. 

ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಕೊನೆಯ 20 ತಿಂಗಳ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ನ ದುಗ್ಗಪ್ಪ ಗೌಡ ಮತ್ತು ಆರ್. ಬಾಬು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಕ್ ನೀಡಿದೆ.

ಬಿಜೆಪಿಯು 6 ಸದಸ್ಯರು  ಸೇರಿದಂತೆ 3 ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 9 ಜನ ಇದ್ದರೂ ಸಹ ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿಗೆ ಅಡ್ಡ ಮತದಾನ ಮಾಡುವ ಮೂಲಕ ಯಾವ ಸದಸ್ಯ ಕೈಕೊಟ್ಟಿದ್ದಾನೆ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ :  ಡಿಕೆ ಶಿವಕುಮಾರ್ ನನ್ನ ಮಿತ್ರನಲ್ಲ, ಅವರೊಬ್ಬ ಒಂದು ಪಕ್ಷದ ಅಧ್ಯಕ್ಷರಷ್ಟೆ ; ಸಚಿವ ರಮೇಶ್ ಜಾರಕಿಹೊಳಿ

ಜೆಡಿಎಸ್ ನ ದುಗ್ಗಪ್ಪಗೌಡರಿಗೆ 9 ಮತ,  ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಂಸಿ ಬಾಬುರವರಿಗೆ 9 ಮತಗಳು ಬಿದ್ದಿವೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಗದೀಶ್ ಗೆ 8 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾಲಕೃಷ್ಣಗೆ  8 ಮತಗಳು ಲಭಿಸಿವೆ.

ಈ ಮೂಲಕ ಬಿಜೆಪಿಗೆ ಸಿಎಂ ತವರು ಜಿಲ್ಲೆಯಲ್ಲೇ ಹಿನ್ನಡೆಯಾಗಿದೆ. ಒಟ್ಟು 17 ಜನ ಸದಸ್ಯರು ಶಿವಮೊಗ್ಗ ಎಂಪಿಎಂಸಿಯಲ್ಲಿ ಇದ್ದಾರೆ.
First published: July 2, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading