HOME » NEWS » District » JDS STATE PRESIDENT H K KUMARSWAMY SAYS SIDDARAMAIAH SHOUD STOP TALKING LIGHTLY ABOUT JDS HK

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನ ಸಿದ್ದರಾಮಯ್ಯ ಬಿಡಲಿ: ಹೆಚ್.ಕೆ.ಕುಮಾರಸ್ವಾಮಿ

ಹೆಚ್.ಡಿ ಕುಮಾರಸ್ವಾಮಿ ಭಾವನಾತ್ಮಕ ಜೀವನ ನಡೆಸುವವರು. ಜನರ ನೋವನ್ನ ಕಂಡಾಗ ಕಣ್ಣೀರು ಬರುವುದು ಸಹಜ. ಸಿದ್ದರಾಮಯ್ಯನವರು ಕಠಿಣ ಹೃದಯ ಹೊಂದಿರುವವರು ಅವರಿಗೆ ಬಡವರ ಭಾವನೆಗಳು ಅರ್ಥವಾಗುವುದಿಲ್ಲ

news18-kannada
Updated:October 5, 2020, 9:17 PM IST
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನ ಸಿದ್ದರಾಮಯ್ಯ ಬಿಡಲಿ: ಹೆಚ್.ಕೆ.ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ
  • Share this:
ಹಾಸನ(ಅಕ್ಟೋಬರ್​. 05): ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾದಾಗ ಯಾರ ಹೆಗಲ ಮೇಲೆ ಕುಳಿತಿದ್ದರು ಎಂಬುದರ ಬಗ್ಗೆ ಯೋಚಿಸಬೇಕು. ಮೊದಲು ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಜೆಡಿಎಸ್ ಪಕ್ಷವನ್ನ ಟೀಕೆ ಮಾಡಿದ್ದು, ಅವರಿಗೆ ಹಳೆಯದೆಲ್ಲ ಮರೆತು ಹೋಗಿದೆ. ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿಯಾದಾಗ ಯಾರ ಹೆಗಲ ಮೇಲೆ ಕುಳಿತಿದ್ದರು ಎಂದು ಪ್ರಶ್ನೆ ಮಾಡಿದರು. ಸಮ್ಮಿಶ್ರ ಸರ್ಕಾರ ನಡೆಸಲು ನಾವು ಅವರ ಬಳಿ ಹೋಗಿರಲಿಲ್ಲ. ಕಾಂಗ್ರೆಸ್ ನವರೇ ನಮ್ಮ ಬಳಿ ಬಂದಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೂ ಅಧಿಕಾರ ನಡೆಸಿದ್ದು ಕಾಂಗ್ರೆಸ್ ನವರು ಎಂದರು. ಸಿದ್ದರಾಮಯ್ಯನವರು ಈ ರೀತಿ ಲಘುವಾಗಿ ಮಾತನಾಡುವುದನ್ನ ಬಿಡಬೇಕು. ನಾವು ಅವರ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಿಲ್ಲ. ಹೊರತಾಗಿ ಅವರೇ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಿದ್ದರು ಎಂದು ತಿರುಗೇಟು ನೀಡಿದರು.

ಹೆಚ್.ಡಿ ಕುಮಾರಸ್ವಾಮಿಯವರು ಕಣ್ಣೀರು ಹಾಕಿರುವ ಬಗ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಭಾವನಾತ್ಮಕ ಜೀವನ ನಡೆಸುವವರು. ಜನರ ನೋವನ್ನ ಕಂಡಾಗ ಕಣ್ಣೀರು ಬರುವುದು ಸಹಜ. ಸಿದ್ದರಾಮಯ್ಯನವರು ಕಠಿಣ ಹೃದಯ ಹೊಂದಿರುವವರು ಅವರಿಗೆ ಬಡವರ ಭಾವನೆಗಳು ಅರ್ಥವಾಗುವುದಿಲ್ಲ ಎಂದರು.

​ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಜಯಗಳಿಸಲಿದೆ ಎಂದು ವಿಶ್ವಾಸವಿದೆ. ಆದರೆ, ಬಿಜೆಪಿ ಅಧಿಕಾರ ಹೊಂದಿರುವ ರಾಜ್ಯದಲ್ಲಿ ಗಲಭೆಗಳು ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ ಬಗ್ಗೆ ಮಾತನಾಡಿದ ಅವರು, ಈ ಘಟನೆ ಜವಾಬ್ದಾರಿ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅಜ್ಜಯ್ಯ ಮಾತು ಕೇಳಿ ಆ ಹುಡುಗಿಯನ್ನ ಅಭ್ಯರ್ಥಿ ಮಾಡಿದಾರೆ: ಕಾಂಗ್ರೆಸ್​ಗೆ ರೇವಣ್ಣ ಚಾಟಿ

ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಬಚಾವೋ ಭೇಟಿ ಪಡಾವೋ ಎನ್ನುತ್ತಾರೆ. ಆದರೆ, ದೇಶದಲ್ಲಿ ಆಡಳಿತ ಯಂತ್ರ ಮಹಿಳೆಯರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು. ಮೋದಿಯವರು ಸಾರ್ವಜನಿಕವಾಗಿ ಈ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹ ಮಾಡಿದರು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವೇ ಇಲ್ಲ. ಘಟನೆ ಬಗ್ಗೆ ಅನ್ಯಾಯಕ್ಕೊಳಗಾದ ಯುವತಿಯೇ ಸಾಯುವ ಮುನ್ನ ನ್ಯಾಯ ಕೇಳಿದ್ದಾಳೆ. ನಿರ್ಭಯ ಪ್ರಕರಣದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ದಾಳಿ ನಡೆದಿರುವುದು ರಾಜಕೀಯ ಪ್ರೇರಿತವಾಗಿರಬಹುದು. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಯಾವ ರೀತಿ ಸ್ವೀಕರಿಸುವರೋ ಕಾದು ನೋಡಬೇಕು. ಕಾನೂನು ಪ್ರಕಾರ ನಡೆಸದಿರುವ ತನಿಖೆ ಬಗ್ಗೆ ನಾವು ಮಾತನಾಡಲಾಗುವುದಿಲ್ಲ. ಡಿಕೆ ಶಿವಕುಮಾರ್​ ಉತ್ತರಿಸಿದ ನಂತರ ವಿಷಯ ತಿಳಿದು ಪ್ರತಿಕ್ರಿಯಿಸುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Published by: G Hareeshkumar
First published: October 5, 2020, 9:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories