HOME » NEWS » District » JDS PARTY IS FARMERS PRO PARTY SAYS HD REVANNA MAK

ನಮ್ಮ ಪಕ್ಷ ರೈತರ ಪರವಿದೆ; ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು - ಹೆಚ್.ಡಿ. ರೇವಣ್ಣ

79ಎ ಮತ್ತು ಬಿ ಎರಡೂ ಕಾಲಂ ತಗೆದು ಮಾರ್ಪಾಡು ಮಾಡಿದ್ದಕ್ಕೆ ಮಾತ್ರ ವೋಟಿಂಗ್ ಆದಾಗ ನಾವು ಬೆಂಬಲಿಸಿದ್ದೆವು. ಆದರೇ ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿರುವುದಾಗಿ ಹೆಚ್​ಡಿ ರೇವಣ್ಣ ತಿಳಿಸಿದ್ದಾರೆ.

news18-kannada
Updated:December 12, 2020, 7:05 AM IST
ನಮ್ಮ ಪಕ್ಷ ರೈತರ ಪರವಿದೆ; ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು - ಹೆಚ್.ಡಿ. ರೇವಣ್ಣ
ಮಾಜಿ ಸಚಿವ ಹೆಚ್. ಡಿ. ರೇವಣ್ಣ.
  • Share this:
ಹಾಸನ: ನಮ್ಮ ಜೆಡಿಎಸ್ ಪಕ್ಷವು ರೈತರ ವಿರುದ್ಧ ಇಲ್ಲ. ರೈತರ ಪರವಾಗಿದ್ದು, ಏನಾದರೂ ರೈತರ ವಿರುದ್ಧದ ಕಾಯಿದೆ ಇದ್ದರೇ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.​ ​ಹಾಸನದಲ್ಲಿ ​ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, "ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿದ್ದೇವೆ. ಕೆಲ ವಿಷಯಗಳನ್ನ ಮಾರ್ಪಾಡು ಮಾಡಿದ ಬಳಿಕ ನಾವು ಕಾಯ್ದೆ ಪರವಾಗಿ ಮತ ಹಾಕಿದ್ದೇವೆ" ಎಂದು ಹೇಳುವ ಮೂಲಕ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದೆ ಇದೇ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದ ಆ ನಾಯಕರೇ ಇಲ್ಲಾ ಅವರ ಉಸಿರೇ ಇಲ್ಲಾ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. 2013 ರಲ್ಲಿ ಈ ಭೂಸುಧಾರಣಾ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದವರು ಯಾರು? ವಿಧಾನ ಪರಿಷತ್ ನಲ್ಲಿ 13 ಜನ ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಯಾಕೆ? ಅವರನ್ನ ಗೈರು ಮಾಡಿಸಿದವರು ಯಾರು? ಎಂದು ತನಿಖೆ ಮಾಡಿಸಿ" ಎಂದು ಸವಾಲ್ ಹಾಕಿದರು.

ಇದನ್ನೂ ಓದಿ : ಮತೀಯ ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವೇ ಹೊರತು ಗೋ ಕಾಳಜಿಯಲ್ಲ; ಸಿದ್ದರಾಮಯ್ಯ

79ಎ ಮತ್ತು ಬಿ ಎರಡೂ ಕಾಲಂ ತಗೆದು ಮಾರ್ಪಾಡು ಮಾಡಿದ್ದಕ್ಕೆ ಮಾತ್ರ ವೋಟಿಂಗ್ ಆದಾಗ ನಾವು ಬೆಂಬಲಿಸಿದ್ದೆವು. ಆದರೇ ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿರುವುದಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ವಿಷಯಗಳನ್ನ ಮಾರ್ಪಾಡು ಮಾಡಿದ ಬಳಿಕ ನಾವು ಕಾಯ್ದೆ ಪರವಾಗಿ ಮತ ಹಾಕಿದ್ದೇವೆ. ವಿಧಾನ ಪರಿಷತ್ ನಲ್ಲಿ ನಿನ್ನೆ ಕಾಂಗ್ರೆಸ್ ನವರೇ ಎಪಿಎಂಸಿ ಕಾಯ್ದೆಗೆ ಬೆಂಬಲಿಸಿದ್ದಾರೆ ಎಂದು ಆರೋಪಿಸಿದರು.
Youtube Video

ನಾನು ಮುಖ್ಯಮಂತ್ರಿಯನ್ನು ಖುದ್ದಾಗಿ ಭೇಟಿ ಮಾಡಿಲ್ಲಾ. ಸಿಎಲ್ಪಿ ಸಭೆ ಮುಗಿದ ಬಳಿಕ ಸಿಎಂ ಬರುತ್ತಿದ್ದಾಗ ನನ್ನನ್ನು ನೋಡಿ ಅವರೇ ಬಂದು ಮಾತನಾಡಿದ್ದಾರೆ! ರೈತರಿಗೆ ಮಾತ್ರ ಜಮೀನು ಖರೀದಿಸಬೇಕು ಎಂಬುದು ಈಗಲೂ ನಮ್ಮ ವಾದ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಭೂಸುಧಾರಣಾ ಕಾಯ್ದೆ ರದ್ದುಪಡಿಸುತ್ತೇವೆ. ಕುಮಾರಸ್ವಾಮಿಯದು ದೇವೇಗೌಡರದು ಇಬ್ಬರ ನಿಲುವೂ ಒಂದೇ ನಾವು ರೈತರ ಪರವಾಗಿದ್ದೇವೆ. ಭೂಸುಧಾರಣಾ ಕಾಯ್ದೆಯಿಂದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ ಆಗೋದು, ನಮಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Published by: MAshok Kumar
First published: December 12, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories