• Home
  • »
  • News
  • »
  • district
  • »
  • ಜೆಡಿಎಸ್ ಗೆ ಅಧಿಕಾರ ಇದ್ದಾಗ ಪಕ್ಷದ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ: ಮಾಜಿ ಶಾಸಕ ಮಧು ಬಂಗಾರಪ್ಪ

ಜೆಡಿಎಸ್ ಗೆ ಅಧಿಕಾರ ಇದ್ದಾಗ ಪಕ್ಷದ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ: ಮಾಜಿ ಶಾಸಕ ಮಧು ಬಂಗಾರಪ್ಪ

ಮಾಜಿ ಶಾಸಕ ಮಧು ಬಂಗಾರಪ್ಪ

ಮಾಜಿ ಶಾಸಕ ಮಧು ಬಂಗಾರಪ್ಪ

ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಬಸವರಾಜ್ ಹೊರಟ್ಟಿ ಹಾಗು ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು, ಒಂದೂ ವೇಳೆ ವಿಶ್ವನಾಥ್ ಅವರಿಗೆ ಅಧಿಕಾರ ಕೊಟ್ಟಿದ್ದರೆ ಪಕ್ಷದಲ್ಲಿ ಉಳಿಯುತ್ತಿದ್ದರು

  • Share this:

ಕೋಲಾರ(ನವೆಂಬರ್​. 19): ನಾನಿನ್ನು ಜೆಡಿಎಸ್ ಪಕ್ಷದಲ್ಲಿ ಇದ್ದೇನೆ, ಆದರೆ, ಎಲ್ಲಿಯೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನನ್ನನ್ನ ಪಕ್ಷಕ್ಕೆ ಸೇರಲು ಆಹ್ವಾನ ನೀಡಿರುವುದು ನಿಜ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ತಮ್ಮಆಪ್ತರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಮಧು ಬಂಗಾರಪ್ಪ ಅವರು ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಾನು ಹಾಗೂ ಡಿಕೆ ಶಿವಕುಮಾರ್​ ಕುಟುಂಬದ ಸ್ನೇಹಿತರಾಗಿದ್ದೇವೆ. ನಮ್ಮ ತಂದೆಯ ಅನುಯಾಯಿ ಆಗಿದ್ದವರು ಡಿಕೆ ಶಿವಕುಮಾರ್, ಹಾಗಾಗಿ ನನನ್ನು ಪಕ್ಷಕ್ಕೆ ಬರುವಂತೆ  ಕರೆಯುತ್ತಿರುವುದು ನಿಜ, ಆದರೆ, ಕಾಂಗ್ರೆಸ್ ಗೆ ಹೋಗುವ ತೀರ್ಮಾನ ಇನ್ನು ಮಾಡಿಲ್ಲ. ಹೋಗಲು ಪ್ರಯತ್ನ ಮಾಡಿದರು ನಮ್ಮ ಪಕ್ಷದ ಯುವ ಮುಖಂಡರು ನನ್ನನ್ನ ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.


ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಬಸವರಾಜ್ ಹೊರಟ್ಟಿ ಹಾಗು ಹೆಚ್.ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು, ಒಂದೂ ವೇಳೆ ವಿಶ್ವನಾಥ್ ಅವರಿಗೆ ಅಧಿಕಾರ ಕೊಟ್ಟಿದ್ದರೆ ಪಕ್ಷದಲ್ಲಿ ಉಳಿಯುತ್ತಿದ್ದರು. ನಾನು ಸಹ ವಿಶ್ವನಾಥ್ ಅವರನ್ನು ಕೈಮುಗಿದು ಕೇಳಿಕೊಂಡರು, ಕೊನೆಯ 2 ದಿನಗಳಲ್ಲಿ ತೀರ್ಮಾನ ಮಾಡಿ ಜೆಡಿಎಸ್ ಬಿಟ್ಟು ಹೋದರು, ನಾವು ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷದಲ್ಲಿದ್ದವರಿಗೆ ಸ್ಥಾನಮಾನ ನೀಡಿಲ್ಲ, ಇದೀಗ ನಾನು ಮಾತ್ರ ಸುಮ್ಮನೆ ಕುಳಿತುಕೊಂಡಿಲ್ಲ, ಬದಲಿಗೆ ಇಡೀ ಜೆಡಿಎಸ್ ಪಕ್ಷವೇ ಸುಮ್ಮನಾಗಿ ಕುಳಿತಿದೆ. ಹಾಗಾಗಿ ನಮ್ಮ ರಾಜ್ಯ ಹಾಗು ದೇಶದಲ್ಲಿ ವಿರೋಧ ಪಕ್ಷದವರು ದುರ್ಬಲವಾಗಿರಲು ಕಾರಣ ಎಂದರು.


ಇದೇ ವೇಳೆ ಮಾಜಿ ಸಿಎಂ ಹಾಗು ಹಾಲಿ ಸಿಎಂ ಮಕ್ಕಳು ಇತ್ತೀಚೆಗೆ ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದು, ನೀವು ಸುಮ್ಮನಾಗಿದ್ದೀರಾ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ನಮ್ಮ ಅಪ್ಪ ನನಗೆ ಕೆಟ್ಟ ಬುದ್ದಿ ಹೇಳಿಕೊಟ್ಟಿಲ್ಲ. ಒಳ್ಳೆ ಬುದ್ದಿ ಹೇಳಿಕೊಟ್ಟಿರುವುದಕ್ಕೆ ಚುನಾವಣೆಯಲ್ಲಿ 4 ಬಾರಿ ಸೋತಿದ್ದೇನೆ. ನನಗೂ ಕೆಟ್ಟ ಬುದ್ದಿ ಹೇಳಿಕೊಟ್ಟಿದ್ರೆ ಇಷ್ಟೊತ್ತಿಗೆ ಗೆಲ್ಲುತ್ತಿದೆ, ವೇಗವಾಗಿ ಹೋಗುವುದಾದರೆ ಪ್ರಾಮಾಣಿಕನಾಗಿ ಹೋಗಬೇಕು, ಅದಕ್ಕಾಗಿ ಅಡ್ಡ ದಾರಿಯಲ್ಲಿ ಹೋದರೆ ಉಪಯೋಗ ಆಗುವುದಿಲ್ಲ. ಅದು ಸಿಎಂ ಮಗನೇ ಆಗಿರಲಿ, ಮಾಜಿ ಸಿಎಂ ಮಗನೇ ಆಗಿರಲಿ, ಯಾರೇ ಆಗಿರಲಿ. ನಾನು ಹಣಕ್ಕೆ, ಅಧಿಕಾರಕ್ಕೆ, ಸಿದ್ದಾಂತದ ವಿರುದ್ಧ ಜೋತು ಬಿದ್ದವನಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.


ನಿಗಮ ಮಂಡಳಿ ವಿಚಾರದಲ್ಲಿ ಬಿಜೆಪಿ ರಾಜಕೀಯ:


ನಿಗಮ ಮಂಡಳಿ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ನಮ್ಮ ತಂದೆ ಅವರು ಸಿಎಂ ಇದ್ದಾಗ, ಕಿತ್ತೂರು ರಾಣಿ ಚೆನ್ನಮ್ಮ ನಿಗಮ ಮಂಡಳಿ ಸ್ಥಾಪನೆ ಮಾಡಿದ್ದರು. ಅದು ಆ ಭಾಗದ ಅಭಿವೃದ್ಧಿಗೆ ಪೂರಕವಾಗಿತ್ತು. ಆದರೆ, ಇದೀಗ ಇದು ರಾಜಕೀಯ ದುರುದ್ದೇಶ ಎನ್ನುವುದು ಬಿಟ್ಟರೆ ಮತ್ತೇನು ? ನಿಗಮ ಮಂಡಳಿ ಘೋಷಣೆ ಮಾಡುವುದು ಮುಖ್ಯವಲ್ಲ, ಅದಕ್ಕೆ ಪರಿಹಾರ ಎಷ್ಟು ಕೊಡುತ್ತಾರೆ ಎನ್ನುವುದು ಮುಖ್ಯ ಎಂದು ತಿಳಿಸಿದರು


ಇದನ್ನೂ ಓದಿ : Ramesh Jarkiholi : ಸಿಎಂ ಭೇಟಿ‌ ಮಾಡದಿದ್ದರ ಹಿಂದೆ ದುರುದ್ದೇಶ ಇರಲಿಲ್ಲ: ಸಚಿವ ರಮೇಶ್ ಜಾರಕಿಹೊಳಿ


ಕಳೆದ ಚುನಾವಣೆಗಳ ವೇಳೆಯಲ್ಲಿ ರಾಮನ ವಿಚಾರ ಪ್ರಸ್ತಾಪಿಸಿ ಆಗಿದೆ, ಮುಂದಿನ ಚುನಾವಣೆಯಲ್ಲಿ ಕೃಷ್ಣನ ಬಗ್ಗೆ ಮಾತನಾಡುತ್ತಾರೆ ನೋಡಿ ಎಂದು ಬಿಜೆಪಿ ವಿರುದ್ದ ಕುಟುಕಿದರು. ಮೊದಲು ಸರ್ಕಾರಗಳು ಕೊಟ್ಟಿರುವ ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಮಾಡಲಿ, ಚುನಾವದ ದುರುದ್ದೇಶದಿಂದ ನಿಗಮ ಮಂಡಳಿ ಸ್ಥಾಪನೆ ಮಾಡುವ ಅವಶ್ಯಕತೆ ಏನಿತ್ತು ಎಂದರು.


ನಮ್ಮ ಈಡಿಗ ಸಮುದಾಯದವರು ಸಹ ಈಗ ನಿಗಮ ಮಂಡಳಿ ಕೇಳುತ್ತಿದ್ದಾರೆ. ಕೊಟ್ರೆ ನಾನು ಕೊಡಬೇಡಿ ಅಂತ ಹೇಳುವುದಕ್ಕೆ ಆಗುತ್ತಾ ? ಸದ್ಯ ದೇಶದಲ್ಲಿ ಬಿಜೆಪಿ ವಿರುದ್ಧ ರಾಜಕೀಯ ಧ್ರುವಿಕರಣ ಆಗದಿದ್ದರೆ ಮುಂದೆ ದೇಶಕ್ಕೆ ಕಷ್ಟ ಎಂದು ತಿಳಿಸಿದರು.

Published by:G Hareeshkumar
First published: