ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಇದೇ ಮೀಸಲಾಗಿ ನಿಗದಿ ಮಾಡುವಂತೆ ಶಾಸಕ ಶ್ರೀನಿವಾಸಗೌಡ ಕೋರಿಕೆಯ ಪತ್ರ ವೈರಲ್

ಕೋಲಾರದಲ್ಲಿ ಗ್ರಾ‌ಮ ಪಂಚಾಯಿತಿ ಚುನಾವಣೆ ನಂತರ ಅಧ್ಯಕ್ಷ- ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಮುಹೂರ್ತ ನಿಗದಿ ಆಗುತ್ತಿದ್ದಂತೆ  ಆಕಾಂಕ್ಷಿಗಳು ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ತೆರಳಿದ್ದರೆ, ಮತ್ತೆ ಕೆಲವರು ತಟಸ್ತವಾಗಿದ್ದಾರೆ. ಇನ್ನೇನು ಒಂದು ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಮುಗಿಯಲಿದ್ದು,ಕೋಲಾರ ಶಾಸಕರು ಬರೆದಿದ್ದಾರೆ ಎನ್ನಲಾಗುವ ಮೀಸಲಾತಿಯ ಕೋರಿಕೆಯ ಪತ್ರವೂ ವೈರಲ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೇ ಸ್ಪಷ್ಟನೆ ನೀಡಬೇಕಿದೆ.

ಶಾಸಕ ಶ್ರೀನಿವಾಸಗೌಡ

ಶಾಸಕ ಶ್ರೀನಿವಾಸಗೌಡ

  • Share this:
ಕೋಲಾರ; ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಅಭ್ಯರ್ಥಿಗಳು, ಅಧಿಕಾರದ ಗದ್ದುಗೆಗೇರಲು ಪ್ರವಾಸಗಳಲ್ಲಿ ತಲ್ಲೀನರಾಗಿದ್ದಾರೆ. ಚುನಾವಣೆ ಮುಗಿದ ಬಳಿಕವೂ ಅಧಿಕಾರದ ಹಿಂದೆ ಬಿದ್ದಿದ್ದಾರೆ. ಇನ್ನು ಹೀಗಿರುವಾಗ ಕೋಲಾರ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಗೆದ್ದಿರುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಶಾಸಕ ಶ್ರೀನಿವಾಸಗೌಡ ಸಹ ತುದಿಗಾಲಲ್ಲಿ ನಿಂತಿದ್ದಾರೆ.

ಕೋಲಾರದ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಲೆಟರ್ ಹೆಡ್​ನಲ್ಲಿರುವ, ಹಾಗೂ ಶ್ರೀನಿವಾಸಗೌಡ ಸಹಿಯಿರುವ‌ ಕೋರಿಕೆಯ ಪತ್ರವೊಂದು ವೈರಲ್ ಆಗಿದೆ. ಕೋಲಾರ ತಾಲೂಕಿನ 19 ಗ್ರಾಮ ಪಂಚಾಯಿತಿಗಳಿಗೆ‌ ಇಂತಹ ಮೀಸಲಾತಿಯನ್ನು ಪ್ರಕಟಿಸುವಂತೆ,  ಜಿಲ್ಲಾಧಿಕಾರಿಗೆ ಬರೆದಿರುವ ಪಾತ್ರವೂ ಸಾಕಷ್ಟೂ ವೈರಲ್ ಆಗಿದೆ. ಪತ್ರದಲ್ಲಿ 19 ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ, ಪತ್ರದಲ್ಲಿ ಅನುಸೂಚಿತ ಜಾತಿಯನ್ನು ಉಲ್ಲೇಖಿಸಿ ನೀಡಿರುವ ಕೋರಿಕೆ ಪತ್ರದಲ್ಲಿ ದಾಖಲಾಗಿರುವ ಅಂಶಗಳಾಗಿದೆ.

ಶಾಸಕ ಶ್ರೀನಿವಾಸಗೌಡ ಹೇಳುವುದೇನು?

ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ್ಯ ಗಾದಿಗೆ ಮೀಸಲಾತಿಗೆ‌ ಜಿಲ್ಲಾಧಿಕಾರಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವು, ನ್ಯೂಸ್ 18 ಕನ್ನಡ ವಾಹಿನಿಗೆ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಗೌಡ ಅವರು 19 ಗ್ರಾಮ ಪಂಚಾಯ್ತಿಗೆ ಮೀಸಲಾತಿ ನಿಗದಿ ಮಾಡುವಂತೆ ನೀಡಿರುವ ಆ ಪತ್ರ ನನ್ನದಲ್ಲ. ನಾನು ಪತ್ರವನ್ನೇ ಬರೆದಿಲ್ಲ ಎಂದು  ಶಾಸಕ ಶ್ರೀನಿವಾಸಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರದಲ್ಲಿ ಇರುವ ಸಹಿ ನನ್ನದೇ ಎಂದಿರುವ ಶಾಸಕರು, ಪತ್ರವನ್ನು ಯಾರೋ ತೆಗೆದುಕೊಂಡು ಹೋಗಿ ಹೀಗೆ ಮಾಡಿದ್ದು ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆದು, ಏನೂ ಗೊತ್ತಿಲ್ಲದಂತೆ ಕಥೆ ಕಟ್ಟುತ್ತಿದ್ದಾರಾ ಎನ್ನುವಂತಹ ಅನುಮಾನವೂ  ಶ್ರೀನಿವಾಸಗೌಡ ಮೇಲೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ, ಇನ್ನು ಹೇಗೆ ಪತ್ರದಲ್ಲಿ ಸಹಿ ಹೇಗೆ ಬಂತು ? ಎನ್ನುವುದರ ಬಗ್ಗೆ ಗೊತ್ತಿಲ್ಲ ಅಂತಿರುವ ಶಾಸಕರು,  ಈ ಬಗ್ಗೆ ಕ್ರಮ ತೆಗೆದುಕೊಳ್ಳುವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರ.


ಇದನ್ನು ಓದಿ: ಅಕ್ರಮ ಮಣ್ಣು ಸಾಗಿಸಿದ್ದ ಪಿಎನ್​ಸಿ ಉಪ ಗುತ್ತಿಗೆದಾರನ ವಿರುದ್ದ ಚಿತ್ರದುರ್ಗ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದೂರು ದಾಖಲು

ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿನ ನಂತರ ವರ್ತೂರು ಪ್ರಕಾಶ್ ಅವರು ತಮ್ಮ ಬೆಂಬಲಿಗರಿಗೆ, ಕೋಲಾರದ ನಿವಾಸದಲ್ಲಿ ಬಾಡೂಟ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದ ವರ್ತೂರು ಪ್ರಕಾಶ್, ಮೀಸಲಾತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಆ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಬಳಿ ಜಗಳಕ್ಕೆ ಇಳಿಯಲು ಸಿದ್ದರಾಗಿರಿ. ಯಾರದ್ದೋ ಒತ್ತಡಕ್ಕೆ ಅಧಿಕಾರಿಗಳು ಮುಳುಗುವ ಸಾಧ್ಯತೆಗಳಿಗೆ ಎಂದು ಕರೆ‌ ನೀಡಿದ್ದರು.

ಒಟ್ಟಿನಲ್ಲಿ ಕೋಲಾರದಲ್ಲಿ ಗ್ರಾ‌ಮ ಪಂಚಾಯಿತಿ ಚುನಾವಣೆ ನಂತರ ಅಧ್ಯಕ್ಷ- ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಮುಹೂರ್ತ ನಿಗದಿ ಆಗುತ್ತಿದ್ದಂತೆ  ಆಕಾಂಕ್ಷಿಗಳು ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ತೆರಳಿದ್ದರೆ, ಮತ್ತೆ ಕೆಲವರು ತಟಸ್ತವಾಗಿದ್ದಾರೆ. ಇನ್ನೇನು ಒಂದು ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಮುಗಿಯಲಿದ್ದು, ಕೋಲಾರ ಶಾಸಕರು ಬರೆದಿದ್ದಾರೆ ಎನ್ನಲಾಗುವ ಮೀಸಲಾತಿಯ ಕೋರಿಕೆಯ ಪತ್ರವೂ ವೈರಲ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೇ ಸ್ಪಷ್ಟನೆ ನೀಡಬೇಕಿದೆ.
Published by:HR Ramesh
First published: