HOME » NEWS » District » JDS MLA SHIVALINGE GOWDA CLAIMS THAT HE KNOWS THE SOURCE OF DRUGS MAFIA SNVS

ಡ್ರಗ್ಸ್ ಮೂಲ ಎಲ್ಲಿ ಎಂದು ನನಗೆ ಗೊತ್ತಿದೆ - ಶಾಸಕ ಶಿವಲಿಂಗೇಗೌಡ ಸ್ಪೋಟಕ ಹೇಳಿಕೆ

ಡ್ರಗ್ಸ್ ಮೂಲದ ಬಗ್ಗೆ ಹೇಳಲು ಹೋದರೆ ನಾನೇ ಟಾರ್ಗೆಟ್ ಆಗುತ್ತೇನೆ. ಹಿಂದೆ ವಿಧಾನಸೌಧದಲ್ಲಿ ಶಾಸಕ ಕಳಕಪ್ಪ ಬಂಡಿ ತಮ್ಮ ಡ್ರಗ್ ವ್ಯಸನಿ ಮಗನನ್ನು ಕಾಪಾಡಿ ಎಂದು ಕೇಳಿಕೊಂಡಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ಧಾರೆ.

news18-kannada
Updated:September 6, 2020, 2:03 PM IST
ಡ್ರಗ್ಸ್ ಮೂಲ ಎಲ್ಲಿ ಎಂದು ನನಗೆ ಗೊತ್ತಿದೆ - ಶಾಸಕ ಶಿವಲಿಂಗೇಗೌಡ ಸ್ಪೋಟಕ ಹೇಳಿಕೆ
ಜೆಡಿಎಸ್ ಶಾಸಕ ಶಿವಲಿಂಗೇ ಗೌಡ
  • Share this:
ಹಾಸನ: ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದ್ದು, ಆ ಮೂಲವನ್ನು ಬೈಯ್ಯಲು ಹೋದರೆ ಯಾರುಯಾರಿಗೋ ಬೇಜಾರಾಗುತ್ತೆ ಎಂದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅರಸೀಕೆರೆಯಲ್ಲಿ ನಿನ್ನೆ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಡ್ರಗ್ಸ್ ದಂಧೆ ಬಗ್ಗೆ ಪ್ರಸ್ತಾಪಿಸಿದರು. ಎಲ್ಲಾ ದೇಶದಲ್ಲೂ ಡ್ರಗ್ಸ್ ಇದೆ. ನಮ್ಮ ಭಾರತದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಕೆಟ್ಟದ್ದು ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಯಾವುದೇ ಬೀಚ್‍ಗೆ ಹೋಗಿ ಅಲ್ಲಿ ಕುಡಿದು ಮಲಗಿರುವವರೆಲ್ಲಾ ಡ್ರಗ್ಸ್ ತೆಗೆದುಕೊಂಡು ಮಲಗಿರುತ್ತಾರೆ. ಎಲ್ಲಿ ಲಾಭವಿದೆ ಅಲ್ಲಿ ಅದಕ್ಕೆ ಬಿಸಿನೆಸ್‍ದಾರರು ಹುಟ್ಟಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ದೇಶ, ರಾಜ್ಯದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿದೆ ಎಂದು ಶಿವಲಿಂಗೇ ಗೌಡರು ಹೇಳಿದರು.

ಈ ಬಗ್ಗೆ ವಿಧಾನಸೌಧದಲ್ಲಿ ಹಿಂದೆ 3-4 ಗಂಟೆಗಳ ಕಾಲ ಚರ್ಚೆಯಾಗಿತ್ತು. ಆಗಲೇ ನಾನು ಡ್ರಗ್ಸ್ ಬಗ್ಗೆ ವಿರೋಧ ಮಾಡಿದ್ದೆ. ಈ ಹಿಂದೆ ಶಾಸಕ ಕಳಕಪ್ಪ ಬಂಡಿ, ನನ್ನ ಮಗ ಎಂಬಿಬಿಎಸ್ ಓದುತ್ತಿದ್ದು ಡ್ರಗ್ಸ್​ಗೆ ಅಡಿಕ್ಟ್ ಆಗಿದ್ದಾನೆ. ನನ್ನ ಮಗನನ್ನ ಉಳಿಸಿಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಅಂದೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಈಗ ನಿಯಂತ್ರಣಕ್ಕೆ ತರಬಹುದಿತ್ತು. ಈಗಲಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡ್ರಗ್ಸ್ ವಿರುದ್ಧ ಸರ್ಕಾರದ ಕ್ರಮ ಇನ್ನಷ್ಟು ಗಟ್ಟಿಯಾಗಬೇಕು, ತನಿಖೆ ಅರ್ಧಕ್ಕೆ ಬಿಡಬಾರದು: ಹೆಚ್.ಕೆ. ಪಾಟೀಲ್

ಎಂಬಿಬಿಎಸ್ ಮತ್ತು ಪಿಜಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಯಾರ ಕೈಯಲ್ಲಿದ್ದಾರೆ? ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲವೇ? ಅದರ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ. ಆ ಮೂಲವನ್ನ ಬೈಯ್ಯಲು ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಯಾರೋ ನಾಲ್ಕು ಜನ ಆರ್ಥಿಕವಾಗಿ ಮುಂದುವರಿಯಲು ಯುವಕರನ್ನ ಹಾಳು ಮಾಡುವ ಕೆಟ್ಟ ಪ್ರವೃತ್ತಿ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದರು.



ಮುಂಬೈನಲ್ಲಿ ಸುಶಾಂತ್ ಸಿಂಗ್ ಸಾವು ಪ್ರಕರಣದ ಮೂಲಕ ಪ್ರಾರಂಭವಾದ ಡ್ರಗ್ಸ್ ಜಾಲಗಳ ಬೇಟೆ ಕರ್ನಾಟಕದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಈಗಾಗಲೇ ಹಲವು ಡ್ರಗ್ ಪೆಡ್ಲರ್​ಗಳು ಬಂಧಿತರಾಗಿದ್ದಾರೆ. ಬೆಂಗಳೂರಿನ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ 12 ಮಂದಿಯ ಮೇಲೆ ಎಫ್​ಐಆರ್ ದಾಖಲಾಗಿದೆ. ನಟಿ ರಾಗಿಣಿ ದ್ವಿವೇದಿ, ಹೈಟೆಕ್ ಪಾರ್ಟಿಗಳ ಆಯೋಜಕ ವೀರೇನ್ ಖನ್ನಾ, ರಾಜಕಾರಣಿಯ ಮಗ ವಿನೋದ್ ಆಳ್ವ ಮೊದಲಾದವರು ಆರೋಪ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಆಫ್ರಿಕನ್ ಭಾಷೆಯಲ್ಲಿ ಮಾತನಾಡಿ ಪೊಲೀಸರಿಗೆ ಬೇಸ್ತು ಬೀಳಿಸುತ್ತಿರುವ ಡ್ರಗ್ ಪೆಡ್ಲರ್ಸರ್ಕಾರ ಅಮೂಲಾಗ್ರವಾಗಿ ಜಾಲವನ್ನು ಭೇದಿಸಲು ಆಸಕ್ತಿ ತೋರುತ್ತಿದ್ದು ಸಿಸಿಬಿ ಪೊಲೀಸರು ಡ್ರಗ್ಸ್ ಕಿಂಗ್​ಪಿನ್​ಗಳನ್ನ ಎಳೆಎಳೆಯಾಗಿ ಬಿಚ್ಚಿಡುವ ಕಾರ್ಯದಲ್ಲಿದ್ದಾರೆ. ವಿಪಕ್ಷಗಳೂ ಕೂಡ ಸರ್ಕಾರದ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by: Vijayasarthy SN
First published: September 6, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories