ರಾಮನಗರ(ಜುಲೈ 06): ಕೊರೋನಾ ಅಬ್ಬರದ ನಡುವೆಯೇ ಮಾಗಡಿ ಜೆಡಿಎಸ್ ಶಾಸಕ ಎ. ಮಂಜು ಬಿಂದಾಸ್ ವರ್ತನೆ ತೋರಿದ್ದಾರೆ. ರಾಮನಗರದ ಬಿಡದಿಯಲ್ಲಿ ಬೆಂಬಲಿಗರೊಬ್ಬರ ಬರ್ತ್ಡೇ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಹೊಸದೊಡ್ಡಿಯಲ್ಲಿ ಜೆಡಿಎಸ್ ಮುಖಂಡ ಶೇಷಪ್ಪ ಎಂಬುವರ 60 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಎ. ಮಂಜು ಸೆಲೆಬ್ರೇಷನ್ ಮಾಡಿದ್ದಾರೆ.
ಕೊರೋನಾ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಆದರೆ ಈ ನಡುವೆ ಜನಪ್ರತಿನಿಧಿಯಾಗಿ ಎ. ಮಂಜು ಜನರಿಗೆ ತಿಳಿವಳಿಕೆ ಹೇಳುವುದನ್ನ ಬಿಟ್ಟು ಶಾಸಕರಾಗಿ ತಾವೇ ಮೋಜುಮಸ್ತಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಮಂಡ್ಯದಿಂದ ಜನರು ಆಗಮಿಸಿದ್ದರು ಎನ್ನಲಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೇ ಜನಪ್ರತಿನಿಧಿಗಳೇ ಚೆಲ್ಲಾಟವಾಡಿದ್ದಾರೆ.
ಇದನ್ನೂ ಓದಿ: ಬೆಡ್ಗಳು ಭರ್ತಿ, ಹೊಸ ರೋಗಿಗಳಿಗೆ ಇಲ್ಲ ಸ್ಥಳ: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಹಾಯಕತೆ
ಜಿಲ್ಲೆಯ ಟೊಯೋಟಾ ಮತ್ತು ಬಾಷ್ ಕಂಪನಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಟೊಯೋಟಾದ ಶ್ರೀಧರ್ ಹಾಗೇ ಬಾಷ್ ಕಂಪನಿಯ ವೆಂಕಟೇಶ್ ಎಂಬುವರು ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಹಾಗಾಗಿ ಬಾಷ್ ಕಂಪನಿಯ ಮುಂದೆ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರು ಪ್ರತಿಭಟನೆ ನಡೆಸಿ ಕಂಪನಿಗೆ ರಜೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ