ದೂರಿನ ಪತ್ರದಲ್ಲಿ ಜೆಡಿಎಸ್ ಮುಖಂಡರಿಂದ ಫೋರ್ಜರಿ ಸಹಿ; ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪ

ಈ ವಿಚಾರದಲ್ಲಿ ಜೆಡಿಎಸ್​ ಮುಖಂಡರ ಕೈವಾಡವಿದೆಯೇ? ಅಥವಾ ಹಾಸನ ಜಿಲ್ಲಾ ಪಂಚಾಯತ್​ ಅಧ್ಯೆಕ್ಷೆ ಶ್ವೇತಾ ದೇವರಾಜ್​ ಹಾಗೂ ಹಾಸನ ಬಾಗೂರು ಜಿಲ್ಲಾ ಪಂಚಾಯತ್​ ಸದಸ್ಯೆ ಶ್ವೇತಾ ಆನಂದ್ ಮಾಡಿರುವ ಆರೋಪ ಸತ್ಯವೇ ಎಂಬುದು ತನಿಖೆ ಆಗಬೇಕಿದೆ. 

news18-kannada
Updated:June 22, 2020, 7:02 PM IST
ದೂರಿನ ಪತ್ರದಲ್ಲಿ ಜೆಡಿಎಸ್ ಮುಖಂಡರಿಂದ ಫೋರ್ಜರಿ ಸಹಿ; ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪ
ಜೆಡಿಎಸ್ ದೂರಿನ ಪತ್ರದಲ್ಲಿ ಕಾಂಗ್ರೆಸ್​ನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರ ಸಹಿ ಇರುವುದು.
  • Share this:
ಹಾಸನ; ಜೆಡಿಎಸ್​ ಸದಸ್ಯರು ನನ್ನ ಮೇಲೆ ಆರೋಪದ ದೂರಿನ ಪತ್ರ ಬರೆದಾಗ ಅದರಲ್ಲಿ ಕೆಲ ಸದಸ್ಯರ ಫೋರ್ಜರಿ ಸಹಿ ಮಾಡಲಾಗಿದೆ ಎಂದು ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಜೆಡಿಎಸ್ ಮುಖಂಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ವಿರುದ್ಧ ದೂರು ನೀಡಲು ಜೆಡಿಎಸ್ ಸದಸ್ಯರು ಪತ್ರ ಬರೆದಿದ್ದಾರೆ. ಆದರೆ ಈ ಪತ್ರದಲ್ಲಿ ಜೆಡಿಎಸ್​ ಮುಖಂಡರು ಕಾಂಗ್ರೆಸ್​ ಸದಸ್ಯರ ಹೆಸರಿನಲ್ಲಿ ಫೋರ್ಜರಿ ಸಹಿ ಹಾಕಿದ್ದಾರೆ ಎಂದು ಶ್ವೇತಾ ದೇವರಾಜ್ ಆರೋಪ ಮಾಡಿದ್ದಾರೆ.

ಜೆಡಿಎಸ್​ ಸದಸ್ಯರು ತನ್ನ ವಿರುದ್ಧ ದೂರು ನೀಡಿದ್ದಾರೆ ಎಂಬ ದೂರಿನ ಪತ್ರದಲ್ಲಿ ಹಾಸನ ಬಾಣವಾರ ಜಿಲ್ಲಾ ಪಂಚಾಯತ್​ ಸದಸ್ಯ ಅಶೋಕ್​ ಬಿ ಎಸ್​ ಎಂಬುವರ ಹೆಸರಲ್ಲಿ ಜೆಡಿಎಸ್​ ನಾಯಕರೇ ಫೋರ್ಜರಿ ಸಹಿ ಹಾಕಿದ್ದಾರೆ. ಆದರೆ ಅಶೋಕ್​ ಎಂಬುವರು 2018ರಲ್ಲೇ ಹಾಸನ ಜಿಲ್ಲಾ ಪಂಚಾಯತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಿರುವಾಗ ಅವರು ಇತ್ತೀಚೆಗೆ ನೀಡೀರುವ ದೂರಿನ ಪತ್ರಕ್ಕೆ ಸಹಿಹಾಕಲು ಹೇಗೆ ಸಾಧ್ಯ ಎಂದು ಜಿಪಂ, ಅಧ್ಯಕ್ಷೆ  ಶ್ವೇತಾ ದೇವರಾಜ್​ ಪ್ರಶ್ನಿಸಿದ್ದಾರೆ.

ಹಾಗೆಯೇ ಜಿಲ್ಲಾ ಪಂಚಾಯತ್​ ಸದಸ್ಯೆ ಶ್ವೇತಾ ಆನಂದ್​ ಕಾಂಗ್ರೆಸ್​ ಪಕ್ಷದವರು. ಆದರೆ ತನ್ನ ವಿರುದ್ಧದ ದೂರಿನ ಪತ್ರದಲ್ಲಿ ಅವರ ಸಹಿಯೂ ಇದೆ. ಈ ಬಗ್ಗೆ ಅವರನ್ನು ಕೇಳಿದರೆ ನಾನು ಸಹಿ ಹಾಕಿಲ್ಲ ಎಂದಿದ್ದಾರೆ. ಹೀಗಾಗಿ ಜೆಡಿಎಸ್​ ನಾಯಕರು ಫೋರ್ಜರಿ ಹಾಕಿದ್ದಾರೆ.  ಎಂಬ ಆರೋಪ ಮಾಡಿದ್ದಾರೆ.

ಇನ್ನು ಈ ಬಗ್ಗೆ ಚನ್ನರಾಯಪಟ್ಟಣ ಬಾಗೂರು ಜಿಲ್ಲಾ ಪಂಚಾಯತ್​ ಕ್ಷೇತ್ರದ ಸದಸ್ಯೆ ಶ್ವೇತಾ ಆನಂದ್​ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ದೂರಿನ ಪತ್ರಕ್ಕೆ ಸಹಿ ಹಾಕಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ 23 ಸದಸ್ಯರ ಬಳಿ ರೇವಣ್ಣ ಹಾಗೂ ಭವಾನಿ ರೇವಣ್ಣ ಸಮ್ಮುಖದಲ್ಲಿ ಹೊಳೆನರಸೀಪುರದ ಅವರ ಮನೆಯಲ್ಲಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಜೆಡಿಎಸ್ ನಾಯಕರನ್ನು ಕೇಳಿದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ.

ಇದನ್ನು ಓದಿ: 46 ವರ್ಷ ಬ್ಲ್ಯಾಕ್ ಟಿಕೆಟ್ ಮಾರದೆ, ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಿದ್ದ ಮೈಸೂರಿನ ಶಾಂತಲ ಚಿತ್ರಮಂದಿರ ಬಂದ್‌!
ಸದ್ಯ ಈ ವಿಚಾರ ಹಾಸನ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪ ಆಗಿದೆ. ಆದರೆ ಇಂತಹ ಒಂದು ಗಂಭೀರ ವಿಚಾರದ ಬಗ್ಗೆ ಮುಂದೆ ತನಿಖೆಯಾಗಬೇಕಿದೆ. ಈ ವಿಚಾರದಲ್ಲಿ ಜೆಡಿಎಸ್​ ಮುಖಂಡರ ಕೈವಾಡವಿದೆಯೇ? ಅಥವಾ ಹಾಸನ ಜಿಲ್ಲಾ ಪಂಚಾಯತ್​ ಅಧ್ಯೆಕ್ಷೆ ಶ್ವೇತಾ ದೇವರಾಜ್​ ಹಾಗೂ ಹಾಸನ ಬಾಗೂರು ಜಿಲ್ಲಾ ಪಂಚಾಯತ್​ ಸದಸ್ಯೆ ಶ್ವೇತಾ ಆನಂದ್ ಮಾಡಿರುವ ಆರೋಪ ಸತ್ಯವೇ ಎಂಬುದು ತನಿಖೆ ಆಗಬೇಕಿದೆ.
First published: June 22, 2020, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading