ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸಿ; ರೈತರ ನೆರವಿಗೆ ಧಾವಿಸಲು ಜೆಡಿಎಸ್ ಶಾಸಕರ ಮನವಿ

ಕೇಂದ್ರ ಸರ್ಕಾರ 2000 ರೂ ಬೆಂಬಲ ಬೆಲೆ ನೀಡಬೇಕು ರಾಜ್ಯ ಸರ್ಕಾರದಲ್ಲಿ 4,000 ರೂ ಪ್ರೋತ್ಸಾಹಧನ ಘೋಷಿಸಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಸಮ್ಮತ ಬೆಲೆ ದೊರೆಯಲು ಸಾಧ್ಯ. ಇಲ್ಲವಾದರೆ ಸಾಲದ ಸುಳಿಗೆ ಸಿಲುಕಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಸಿ.ಎನ್.ಬಾಲಕೃಷ್ಣ ಅವರು ಹೇಳಿದರು.

news18-kannada
Updated:June 4, 2020, 10:55 PM IST
ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸಿ; ರೈತರ ನೆರವಿಗೆ ಧಾವಿಸಲು ಜೆಡಿಎಸ್ ಶಾಸಕರ ಮನವಿ
ಸಭೆ
  • Share this:
ಹಾಸನ(ಜೂ.04): ಕೊಬ್ಬರಿಯನ್ನು ಸೂಕ್ತ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹಧನದೊಂದಿಗೆ ಖರೀದಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಅರಸೀಕೆರೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಶ್ರವಣಬೆಳೆಗೊಳ ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಒತ್ತಾಯಿಸಿದ್ದಾರೆ.

ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಕಳೆದ ವರ್ಷ ಕ್ವಿಂಟಾಲ್‍ಗೆ 17,000 ರೂಪಾಯಿಗಳಿದ್ದ ಕೊಬ್ಬರಿ ಬೆಲೆ 9,000 ರೂಗೆ ಕುಸಿದಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಸೂಕ್ತ ಬೆಲೆ ನಿಗದಿ ಮಾಡಿ, ನಾಫೆಡ್ ಮೂಲಕ ಖರೀದಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಈ ಕುರಿತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ 2000 ರೂ ಬೆಂಬಲ ಬೆಲೆ ನೀಡಬೇಕು ರಾಜ್ಯ ಸರ್ಕಾರದಲ್ಲಿ 4,000 ರೂ ಪ್ರೋತ್ಸಾಹಧನ ಘೋಷಿಸಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಸಮ್ಮತ ಬೆಲೆ ದೊರೆಯಲು ಸಾಧ್ಯ. ಇಲ್ಲವಾದರೆ ಸಾಲದ ಸುಳಿಗೆ ಸಿಲುಕಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಸಿ.ಎನ್.ಬಾಲಕೃಷ್ಣ ಅವರು ಹೇಳಿದರು.

Lunar Eclipse 2020: ನಾಳೆ ಸಂಭವಿಸಲಿದೆ ವರ್ಷದ ಎರಡನೇ ಚಂದ್ರಗ್ರಹಣ; ಇದರ ವಿಶೇಷತೆ ಏನು ಗೊತ್ತೇ?

ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ತೆಂಗಿನಕಾಯಿ ಬೆಲೆಯೂ ನೆಲಕಚ್ಚಿದೆ, ಜಿಲ್ಲೆಯಲ್ಲಿ ಸುಮಾರು 50 ಸಾವಿರ ಮಂದಿ ಕೊಬ್ಬರಿ ಬೆಳಗಾರರಿದ್ದಾರೆ, ಜಿಲ್ಲಾಧಿಕಾರಿಯವರು ವಾಸ್ತವ ಅಂಕಿಅಂಶಗಳನ್ನು ಕ್ರೂಢೀಕರಿಸಿ ಸರ್ಕಾರಕ್ಕೆ ವರದಿ ಮಾಡಿ ಹೆಚ್ಚಿನ ಬೆಂಬಲ ಬೆಲೆ ಹಾಗೂ ಪ್ರೊತ್ಸ್ಸಾಹಧನದೊಂದಿಗೆ ಖರೀದಿಗೆ ಅನುಮತಿ ಪಡೆಯಬೇಕು ಎಂದು ಶಾಸಕರು ಕೋರಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇತರ ಆಹಾರ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಘೋಷಿಸಿದೆ, ತೆಂಗು ಬೆಳೆಗಾರರ ಬಗ್ಗೆಯೂ ಗಮನಹರಿಸಬೇಕು. ಕ್ವಿಂಟಾಲ್‍ಗೆ ಕನಿಷ್ಠ 13,000 ದಿಂದ 16,000 ರೂ ವರೆಗೆ ಬೆಲೆ ನಿಗದಿ ಮಾಡಿ 15 ದಿನಗಳೊಳಗೆ ನಾಫೆಡ್ ಮೂಲಕ ಖರೀದಿ ಪ್ರಾರಂಭಿಸಬೇಕು ಎಂದರು. ಜಿಲ್ಲಾಧಿಕಾರಿಯವರು ಮಾತನಾಡಿ, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಿನ ತೆಂಗು ಬೆಳೆಗಾರರಿದ್ದು, ಅವರ ಅಂಕಿ ಅಂಶಗಳೊಂದಿಗೆ ಕಳೆದ ಒಂದು ವರ್ಷದೊಳಗಿನ ಮಾರುಕಟ್ಟೆ ಪರಿಸ್ಥಿತಿ ಹಾಗೂ ರೈತರಿಗೆ ಆಗಿರುವ ನಷ್ಟದ ಬಗ್ಗೆ ವರದಿ ಮಾಡಿ ಸೂಕ್ತ ಪ್ರೋತ್ಸಾಹಧನ ಮತ್ತು ಬೆಂಬಲ ಬೆಲೆ ನಿಗಧಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.
First published: June 4, 2020, 10:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading