ಸಾಮಾಜಿಕ ಅಂತರ ಮರೆತು ಮಾಜಿ ಸಚಿವ ಹೆಚ್.ಡಿ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಧರಣಿ

ನ್ಯಾಯಾಲಯದ ಆದೇಶದ ಪ್ರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ನಿಗಧಿಯಾಗಿರುವ ದಿನಾಂಕದಂತೆ ಹಾಸನ ಜಿಲ್ಲಾ ಕೇಂದ್ರ ಸಗಟು ಮಾರಾಟ ಸಂಸ್ಥೆಯ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಬಳಿ ಮನವಿ ಮಾಡಿದರು

ಮಾಜಿ ಸಚಿವ ಹೆಚ್.ಡಿ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಧರಣಿ

ಮಾಜಿ ಸಚಿವ ಹೆಚ್.ಡಿ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಧರಣಿ

  • Share this:
ಹಾಸನ(ಅಕ್ಟೋಬರ್​.01): ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಸುನೀಲ್ ಎಂಬುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಶಾಂತಿಯುತ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಈ ತಿಂಗಳು 18 ಮತ್ತು 25 ರ ಒಳಗೆ ಜನತಾ ಬಜಾರ್ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಅದರೆ ಹಾಸನ ಜನತಾ ಬಜಾರ್ ಸೊಸೈಟಿ ಚುನಾವಣೆ ವಿಷಯದಲ್ಲಿ ಸಹಕಾರ ಸಂಘಗಳ ಅಬಿವೃದ್ಧಿ ಅಧಕಾರಿ ಸುನೀಲ್ ಕಾನೂನು ಪಾಲನೆ ಮಾಡುತ್ತಿಲ್ಲ. ಚುನಾವಣೆಗೆ ಸಂಬಂಧಿಸಿದ ಯಾವುದೇ ನೋಟಿಫಿಕೇಷನ್ ಇನ್ನೂ ಕೂಡ ಆಗಿರುವುದಿಲ್ಲ. ದುರುದ್ದೇಶಪೂರ್ವಕವಾಗಿ ಚುನಾವಣೆ ನಡೆಯುವುದು ತಡವಾಗುವಂತೆ ಸುನೀಲ್ ವರ್ತಿಸುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಅಧಿಕಾರ ದೊರಕಿಸಿಕೊಡಲು ಈ ರೀತಿ ವರ್ತಿಸುತ್ತಿದ್ದಾರೆ. ಸುನೀಲ್ ಕೋರ್ಟ್ ಸೂಚನೆ ಮೀರಿ ಕೆಲಸ ಮಾಡುತ್ತಿರುವುದಾಗಿ ದೂರಿದರು.

​2020 ಜುಲೈ 6 ರಂದು ಹಾಸನ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿರುವ ದಿನದಿಂದ ಇಲ್ಲಿಯವರೆಗೂ ಸಂಸ್ಥೆಯ ಮತದಾರರ ಪಟ್ಟಿ ಸಿದ್ಧಗೊಳಿಸುವ ಕೆಲಸ ಕೈಗೊಂಡು ಮುಂದಿನ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿತ್ತು. ಆದರೇ ಸುನೀಲ್ ರವರು ಸಕಾಲದಲ್ಲಿ ಮಾಡದೇ ಉದ್ದೇಶ ಪೂರ್ವಕವಾಗಿಯೇ ಕರ್ತವ್ಯ ಲೋಪ ಎಸಗಿರುವುದಾಗಿ ಸಾಬೀತಾಗಿದೆ.

ಸುನೀಲ್ ಹಲವಾರು ಸೊಸೈಟಿಗಳಿಗೆ ಚುನಾವಣೆ ಅಧಿಕಾರಿಯಾಗಿದ್ದು, ಇತನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಎಂದರು. ಇತನ ಹೆಂಡತಿ ಭಾನು ಎಂಬುವವರು ಎಸಿಬಿಯಲ್ಲಿ ಸರ್ಕಲ್ ಇನ್ಸ್​​ಪೆಕ್ಟರ್ ಆಗಿದ್ದಾರೆ.

ತಮ್ಮ ಹೆಂಡತಿ ಹೆಸರನ್ನು ಬಳಸಿಕೊಂಡು ಪೊಲೀಸರನ್ನು ಹೆದರಿಸಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ಸುನೀಲ್ ಬೆದರಿಕೆ ಹಾಕಿಸಲಾಗುತ್ತಿದೆ. ಈಹಿಂದೆ ಹಾಸನ ತಾಲೂಕು ಐದಳ್ಳ ಕಾವಲು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಯ ಮೇಲೆ ಅಸಭ್ಯವಾಗಿ ವರ್ತಿಸಿ ಅವರ ಮೇಲೆ ಹಲ್ಲೆ ಮಾಡಿದಲ್ಲದೇ ಅವಾಚ್ಯ ಪದಗಳಿಂದ ನಿಂಧಿಸಿರುವ ಸುನೀಲ್ ವಿರುದ್ಧ ಈಗಾಗಲೇ ಹಾಸನದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ. ಸುನೀಲ್ ರವರು ಹಣದ ಅಮಲಿನಲ್ಲಿ ಜೊತೆಗೆ ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸಿ ಸಂಘದ ಇದೆ ವ್ಯಕ್ತಿಗೆ ಮತ ಹಾಕಲು ಪ್ರಚಾರ ನಡೆಸಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ ಸುನೀಲ್ ವಿರುದ್ಧ ತನಿಖೆ ಆಗಬೇಕು.

ಇದನ್ನೂ ಓದಿ :  ಖ್ಯಾತ ಕುಸ್ತಿಪಟು ರೇವುನಾಯಕ ಬೆಳಮಗಿಯನ್ನೇ ಹೈರಾಣಾಗಿಸಿದ ಕೊರೋನಾ - ಗದ್ಗದಿತರಾಗಿ ಕಣ್ಣೀರು ಹಾಕಿದ ಮಾಜಿ ಸಚಿವ

ನ್ಯಾಯಾಲಯದ ಆದೇಶದ ಪ್ರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ನಿಗಧಿಯಾಗಿರುವ ದಿನಾಂಕದಂತೆ ಹಾಸನ ಜಿಲ್ಲಾ ಕೇಂದ್ರ ಸಗಟು ಮಾರಾಟ ಸಂಸ್ಥೆಯ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಬಳಿ ಮನವಿ ಮಾಡಿ ಆಗ್ರಹಿಸಿ ನ್ಯಾಯ ಸಿಗದಿದ್ದರೇ ಶನಿವಾರ ಮತ್ತೆ ಬೃಹತ್ ಪ್ರತಿಭಟನಾ ನಮ್ಮ ಧರಣಿ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪಟ್ಟು ಹಿಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಲ್ಲಾವನ್ನು ಸರಿಪಡಿಸುವುದಾಗಿ ಭರವಸೆ ನುಡಿದರು.

ಕೊರೋನಾ ಎಂಬ ಮಹಾಮಾರಿ ಆವರಿಸಿದ್ದು, ಈಗಾಗಲೇ ಹಾಸನ ಜಿಲ್ಲೆಯಲ್ಲಿ ಸಾವಿರಾರು ಜನರು ಪಾಸಿಟಿವ್ ಬಂದು ಚಿಕಿತ್ಸೆ ಪಡೆದರೇ, ಚಿಕಿತ್ಸೆ ಫಲಕಾರಿಯಾಗದೇ ನೂರಾರು ಜನರು ಪ್ರಾಣವನ್ನೆ ತೆತ್ತಿದ್ದಾರೆ. ಆದರೆ, ಸಾಮಾಜಿಕ ಅಂತರ ಮರೆತು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಜೊತೆ ಧರಣಿ ಮಾಡುತ್ತಿದ್ದರೂ ಈ ಬಗ್ಗೆ ಯಾವ ಅಧಿಕಾರಗಳು ಚಕಾರ ಎತ್ತಲಿಲ್ಲ. ಆದರೆ, ಸಾಮಾನ್ಯ ಬಡ ಜನರು ಇಂತಹ ವಾತವರಣ ಸೃಷ್ಠಿ ಮಾಡಿದರೇ ಅವರಿಗೆ ತಿಳುವಳಿಕೆ ನೀಡುವುದಲ್ಲದೇ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗುತಿತ್ತು ಎಂದು ಸಾರ್ವಜನಿಕರು ಪಿಸು ಮಾತನಾಡಿಕೊಳ್ಳುತ್ತಿದ್ದರು.
Published by:G Hareeshkumar
First published: