HOME » NEWS » District » JDS FAILED ATTEMPT TO GRAB MANDYA ZP PRESIDENT POST RGM SNVS

ಮಂಡ್ಯ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಹೈಡ್ರಾಮ; ಡಿಸಿ ಆದೇಶ ತಪ್ಪಾಗಿ ಅರ್ಥೈಸಿ ಜೆಡಿಎಸ್ ಸದಸ್ಯರ ಯಡವಟ್ಟು

ಜಿಲ್ಲಾಧಿಕಾರಿಗಳ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಮಂಡ್ಯ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಪ್ರಭಾರಿಯಾಗಿ ಏರಲು ಹೋಗಿದ್ದ ಜೆಡಿಎಸ್​ನ ಅಶೋಕ್ ಅಂತಿಮವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖಭಂಗ ಅನುಭವಿಸಿದ್ದಾರೆ.

news18-kannada
Updated:November 8, 2020, 8:09 AM IST
ಮಂಡ್ಯ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಹೈಡ್ರಾಮ; ಡಿಸಿ ಆದೇಶ ತಪ್ಪಾಗಿ ಅರ್ಥೈಸಿ ಜೆಡಿಎಸ್ ಸದಸ್ಯರ ಯಡವಟ್ಟು
ಮಂಡ್ಯ ಜಿಲ್ಲಾ ಪಂಚಾಯತ್
  • Share this:
ಮಂಡ್ಯ: ಮಂಡ್ಯ ಜಿಲ್ಲಾ ಪಂಚಾಯತ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ಹೈ ಡ್ರಾಮವೇ ನಡೆಯಿತು. ಹಾಲಿ ಅಧ್ಯಕ್ಷರಾಗಿದ್ದ ನಾಗರತ್ನ‌ಸ್ವಾಮಿಯವರ ಅಧಿಕಾರ ಅವಧಿ ಮುಗಿದಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅಶೋಕ್ ಅನಧಿಕೃತವಾಗಿ ಹಂಗಾಮಿಯಾಗಿ ಅಧ್ಯಕ್ಷ ಸ್ಥಾನಕ್ಕೇ ಏರಿದರು. ಆದ್ರೆ ಹಾಲಿ ಅಧ್ಯಕ್ಷೆ ದೂರು ನೀಡುತ್ತಿದ್ದಂತೆ ಸಂಜೆ ವೇಳೆಗೆ ಅಧ್ಯಕ್ಷ ಸ್ಥಾನದಿಂದ ಇಳಿದು ಮುಖಭಂಗಕ್ಕೀಡಾಗಿದ್ದಾರೆ.

ರಾತ್ರೋ ರಾತ್ರಿ‌ ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಜೆಡಿಎಸ್ ಸದಸ್ಯರು ಸೇರಿ ನೂತನ ಜಿ.ಪಂ. ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅವರ ಪದಗ್ರಹಣ ಮಾಡಲು ಸಜ್ಜಾಗಿದ್ದರು. ಈ ಹಿಂದಿನ ಅಧ್ಯಕ್ಷೆಯಾಗಿದ್ದ ನಾಗರತ್ನ ಸ್ವಾಮಿ ಅವರ ಅಧಿಕಾರಾವಧಿ ಮುಗಿದಿದೆ ಅನ್ನೋ ಸರ್ಕಾರದ ತಿದ್ದುಪಡಿ ಕಾಯ್ದೆಯ ಮೂಲಕ ಡಿ.ಸಿ.ಯ ಅನುಮತಿಯಂತೆ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಂಗಾಮಿಯಾಗಿ ಅಧಿಕಾರ ನಡೆಸಬಹುದೆಂಬ ಆದೇಶ ಪತ್ರ ಹಿಡಿದು ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಪ್ರಭಾರಿಯಾಗಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದರು. ಪ್ರಭಾರಿ ಅಧ್ಯಕ್ಷರಿಗೆ ಸದಸ್ಯರು ಸೇರಿದಂತೆ ಸ್ನೇಹಿತರು ಹಾಕಿ ಪುಷ್ಪಗುಚ್ಚ ನೀಡಿ ಶುಭಕೋರಿದ್ರು. ಈ ವೇಳೆ ಮಾತನಾಡಿದ ಪ್ರಭಾರ ಅಧ್ಯಕ್ಷ ಅಶೋಕ್, ಸರ್ಕಾರ ಹೊಸ ಆದೇಶದಲ್ಲಿ ಅಧ್ಯಕ್ಷರ 30 ತಿಂಗಳ ಅಧಿಕಾರ ಅವಧಿ ಮುಗಿದಿದೆ. ಸರ್ಕಾರದ ಆದೇಶದ ಮೇರೆಗೆ ಡಿಸಿಯಿಂದ ಆದೇಶ ಪಡೆದು ಸ್ಥಾಯಿ ಸಮಿತಿ ಆಧ್ಯಕ್ಷನಾಗಿರೋ ತಾನು ಪ್ರಭಾರಿಯಾಗಿದ್ದುಕೊಂಡು ಜಿ.ಪಂ.ನ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು.

ಏಕಾಏಕಿ ಯಾವುದೇ ಅನುಮತಿ ಪಡೆಯದೆ, ಜೆಡಿಎಸ್ ಸದಸ್ಯರು ಯಾವುದೇ ಆದೇಶವಿಲ್ಲದೆ ತಮ್ಮ ಕಚೇರಿಗೆ ನುಗ್ಗಿದ್ದು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಜಿ.ಪಂ. ಪ್ರಭಾರಿಯಾಗಿ ಅಧಿಕಾರ ವಹಿಸಿಕೊಂಡ ಸುದ್ದಿ ತಿಳಿದು ಹಾಲಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಪೊಲೀಸ್ ಎಸ್ಪಿ ಕಚೇರಿಗೆ ಬಂದು ದೂರು ನೀಡಿದರು. ಅಲ್ಲದೆ, ಬೆಳಗ್ಗೆ ಡಿ.ಸಿ. ಆದೇಶ ಹಿಡಿದು ಅಧಿಕಾರ ಪದಗ್ರಹಣ ಮಾಡಿದ ಅಶೋಕ್ ತಮ್ಮ ಆದೇಶ ಪತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲ ಮೂಡಿಸಿದ್ದಾರೆಂದು ಡಿ.ಸಿ.ಕೂಡ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಆಸ್ತಿ ಬರೆಸಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರಗಟ್ಟಿದ ಮಕ್ಕಳು; ಏಳು ತಿಂಗಳು ಊರೂರು ಅಲೆದ ವೃದ್ಧೆ

ಇನ್ನು ಜಿ.ಪಂ. ಕಚೇರಿಯಲ್ಲಿ  ಜೆಡಿಎಸ್ ಸದಸ್ಯರು ದೌರ್ಜನ್ಯ ನಡೆಸಿ ಅಧ್ಯಕ್ಷರ ಕೊಠಡಿಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ಜಿ.ಪಂ.ಸಿಇಒ ಕೂಡ ಎಸ್​ಪಿ ಕಚೇರಿಗೆ ಬಂದು ದೂರು‌ ನೀಡಿದರು. ಅಲ್ಲದೆ, ಈಗಲೂ ಸರ್ಕಾರದ ಆದೇಶದಂತೆ ನಾಗರತ್ನ ಅವರೇ ಜಿ.ಪಂ.‌ಅಧ್ಯಕ್ಷೆ ಎಂದು ಸ್ಪಷ್ಟನೆ ನೀಡಿ ದೌರ್ಜನ್ಯ ನಡೆಸಿದವರ ವಿರುದ್ದ ಕ್ರಮ‌ ಕೈಗೊಳ್ಳಲು ಸೂಚಿಸಿದರು. ಇನ್ನು ತಮ್ಮ ಕಚೇರಿಗೆ ಯಾರ ಅನುಮತಿ, ಯಾರ ಆದೇಶವೂ ಕೂಡ ಇಲ್ಲದೆ ಅನಧಿಕೃತವಾಗಿ ಪ್ರವೇಶ ಮಾಡಿ ದೌರ್ಜನ್ಯ ನಡೆಸಿದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿ ಈ ಸಂಬಂಧ ಮಹಿಳಾ ಆಯೋಗಕ್ಕೂ ದೂರು ನೀಡುವುದಾಗಿ ಅಧ್ಯಕ್ಷೆ ನಾಗರತ್ನ ತಿಳಿಸಿದ್ದಾರೆ.

Mandya ZP President office
ಮಂಡ್ಯ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಪ್ರಭಾರಿಯಾಗಿ ಏರಿದ್ದ ಜೆಡಿಎಸ್​ನ ಅಶೋಕ್


ಒಟ್ಟಾರೆ ಈ ಜಿ.ಪಂ.ನ ಅಧ್ಯಕ್ಷ ಸ್ಥಾನದ ಹೈಡ್ರಾಮ ಪ್ರಕರಣ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯಗೊಂಡಿದೆ. ಸುಮಾರು ಸತತ ನಾಲ್ಕು ಗಂಟೆಗಳ ಸುದೀರ್ಘ ಚರ್ಚೆ ಬಳಿಕ ರಾತ್ರಿ 8 ಗಂಟೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮಸ್ಯೆ ಬಗೆಹರಿಸಿದೆ. ಅನಧಿಕೃತವಾಗಿ ಅಧ್ಯಕ್ಷಗಾದಿಗೆ ಹಂಗಾಮಿಯಾಗಿ ನೇಮಕವಾಗಿದ್ದ ಅಶೋಕ್ ಅವರಿಗೆ ಇದ್ರಿಂದ ಭಾರೀ ಮುಖಭಂಗವಾಗಿದೆ. ಕಚೇರಿ ಬಿಡದೆ ಕುಳಿತಿದ್ದ ಜೆಡಿಎಸ್ ಸದಸ್ಯರಿಗೆ ನೋಟೀಸ್ ನೀಡಲು ಜಿಲ್ಲಾಡಳಿತ ಮುಂದಾಯಿತು. ಖುದ್ದು ಜಿಲ್ಲಾಧಿಕಾರಿಗಳೇ ಪೊಲೀಸ್ ಅವರೊಂದಿಗೆ ಜಿ.ಪಂ. ಕಚೇರಿಗೆ ಬರುತ್ತಿದ್ದಂತೆ ಕಚೇರಿಯಲ್ಲಿದ್ದ ಜೆಡಿಎಸ್ ಸದಸ್ಯರು ಮತ್ತು ಪ್ರಭಾರಿ ಅಧ್ಯಕ್ಷ ಅಶೋಕ್ ಜಾಗ ಖಾಲಿ ಮಾಡಿದರು. ಡಿಸಿ ಜೊತೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಜಿ.ಪಂ. ಹಾಲಿ ಅಧ್ಯಕ್ಷೆ ನಾಗರತ್ನ ಆಗಮಿಸಿ ತಮ್ಮ ಕೊಠಡಿಯ ಚೇರ್​ನಲ್ಲಿ ಕುಳಿತು ನಿಟ್ಟಿಸಿರುಬಿಟ್ಟರು‌.ವರದಿ: ರಾಘವೇಂದ್ರ ಗಂಜಾಮ್
Published by: Vijayasarthy SN
First published: November 8, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories