ಡಿ.ಕೆ.ಶಿವಕುಮಾರ್ ಇಂತಹ ಕೆಲಸ ಮಾಡೋಲ್ಲ: ಸಿಡಿ ಕೇಸ್‌ನಲ್ಲಿ ಡಿಕೆಶಿ ಪರ ಸಾಫ್ಟ್‌ ಕಾರ್ನರ್‌ ತೋರಿದ ಬಿಜೆಪಿ ಸಚಿವ ಜೆ.ಸಿ.ಮಾಧುಸ್ವಾಮಿ

ಸದನದಲ್ಲಿ ಸಚಿವ ಮಾಧುಸ್ವಾಮಿ ಮೌನವಾಗಿದ್ದಿರು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಹೃದಯದ ಆಂಜಿಯೋಪ್ಲಾಸ್ಟಿ ಆಗಿದೆ. ಸ್ಟಂಟ್‌ ಅಳವಡಿಸಿಕೊಂಡು ವಿಶ್ರಾಂತಿಯಲ್ಲಿದ್ದೇನೆ. ಇದೇ ಕಾರಣಕ್ಕೆ ನಾನು ಈ ಬಾರಿಯ ಬಜೆಟ್‌ ಅಧಿವೇಶನಕ್ಕೂ ಹೋಗಲಿಲ್ಲ. ನಾನು ಇತ್ತೀಚೆಗೆ ಎಲ್ಲಿಯೂ ಕಾರ್ಯಕ್ರಮಕ್ಕೆ ಬಂದಿಲ್ಲ. ಆಸ್ಪತ್ರೆಯಿಂದ ಡಿಸ್ವಾರ್ಜ್ ಆದ ಮೇಲೆ ಇದೇ ಮೊದಲನೆ ಕಾರ್ಯಕ್ರಮ ಅಂತ ಸದನಕ್ಕೆ ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದರು.

ಸಚಿವ ಮಾಧುಸ್ವಾಮಿ

ಸಚಿವ ಮಾಧುಸ್ವಾಮಿ

  • Share this:
ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ, ಡಿ.ಕೆ.ಶಿವಕುಮಾರ್‌ ಇಂತಹ ಕೆಲಸ ಮಾಡಿರಲಾರರು ಎಂದು ಸಣ್ಣ ನಿರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.  ಮೈಸೂರಿನಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಡಿಕೆಶಿ ಪ್ರಸ್ತಾಪ ವಿಚಾರವಾಗಿ ಡಿಕೆಶಿ ಹಾಗೇ ಮಾಡಿರಲಾರರು ಅಂದಿಕೊಂಡಿದ್ದೇನೆ. ನಾನು ಡಿ.ಕೆ.ಶಿವಕುಮಾರ್‌ರನ್ನ ಹಲವು ವರ್ಷದಿಂದ ನೋಡಿದ್ದೇನೆ. ಅವರು ಈ ರೀತಿ ಮಾಡಿರಲಾರರು, ಆ ಯುವತಿ ಅವರ ಹೆಸರು ಹೇಳಿದ್ದಾಳೆ. ಅದನ್ನ ಬಿಟ್ಟರೆ ಮತ್ಯಾವ ಗಂಭೀರ ಸಾಕ್ಷ್ಯವನ್ನು ಆಕೆ ನೀಡಿಲ್ಲ. ಹಾಗಾಗಿ ನೋಡೋಣ ಏನಾಗುತ್ತೆ ಅಂತ ಡಿಕೆಶಿ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸಾಫ್ಟ್ ಕಾರ್ನರ್ ತೋರಿದ್ದಾರೆ. 

ಸಿಡಿ ಕೇಸ್‌ ಘಟನೆಯಲ್ಲಿ ಏನೋ ಇದೆ ಅಂತ ಎಸ್‌ಐಟಿ ತನಿಖೆಗೆ ಆದೇಶ ಮಾಡಲಾಗಿದೆ. ಅರೆಸ್ಟ್ ಮಾಡೋಕೆ ಅವಕಾಶ ಇದೆಯಾ ಎಂಬುದನ್ನು ನೋಡಬೇಕು. ಈ ಸಂಬಂಧ ಎಸ್‌ಐಟಿ ಮುಂದೆ ದೂರುದಾರರು ಬರಬೇಕು. ಇವೆಲ್ಲವನ್ನ ನೋಡಿಕೊಂಡು ನಾವು ಮಾತನಾಡಬೇಕಿದೆ. ಈ ಘಟನೆಯಲ್ಲಿ ನರೇಶ್ ಗೊತ್ತಿಲ್ಲ ಅಂತ ಹೇಳೋಕಾಗೋಲ್ಲ. ಆಕೆ ಮಾತನಾಡಿರೋದು, ಡಿಕೆಶಿಯೂ ಹೇಳಿರೋದನ್ನ ಕೇಳಿದ್ದೇವೆ. ಆದರೆ ನರೇಶ್ ಬೇರೆ ಕಥೆ ಹೇಳ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವೇ ಇಲ್ಲ ಅಂತಿದ್ದಾರೆ. ಇವರೆಲ್ಲರ ಹೇಳಿಕೆಗಳನ್ನು ಗಮನಿಸಿ ಮಾತನಾಡೋಕೆ ಆಗೋಲ್ಲ. ತನಿಖೆ ಪೂರ್ಣಗೊಂಡ ಮೇಲಷ್ಟೇ ಈ ಬಗ್ಗೆ ಚರ್ಚೆ ಮಾಡಬೇಕು ಅಂತ ಸಚಿವ ಮಾಧುಸ್ವಾಮಿ ತಿಳಿಸಿದರು.

ಸಿಡಿ ಕೇಸ್‌ನಲ್ಲಿ ಜಾರಕಿಹೊಳಿ ಅವರನ್ನ ಬಂಧಿಸಲೂಬಹುದು, ಬಂಧನ ಮಾಡದೆಯೂ ಇರಬಹುದು ಎಂದು ಹೇಳಿದ ಸಚಿವ ಮಾಧುಸ್ವಾಮಿ, ಸಿಡಿ ಕೇಸ್‌ನಲ್ಲಿ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ಬಂಧಿಸಬಹುದು. ಇಲ್ಲವಾದಲ್ಲಿ ಅವರನ್ನ ಬರೀ ವಿಚಾರಣೆ ಮಾಡಿ ಬಿಡಬಹುದು ಅಷ್ಟೇ. ಅದನ್ನು ಮೀರಿ ನೇರವಾಗಿ ಚಾರ್ಜ್‌ಶೀಟ್ ಕೂಡ ಹಾಕಬಹುದು. ಈ ಘಟನೆ ಬಹಳ ಗೊಂದಲಮಯವಾಗಿದೆ. ಈ ಕೇಸ್ ತನಿಖೆ ಪೊಲೀಸ್‌ಗೂ ಕಷ್ಟ ಇದೆ. ಆಕೆ ದೃಢವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆಡಿಯೋ ಡಬ್ ಅಂತಾರೆ. ವಿಡಿಯೋ ಎಡಿಟ್ ಅಂತಾರೆ. ತನಿಖೆ ನಡೆದ ಮೇಲಷ್ಟೇ ನಾವು ಹೀಗಾಗಿದೆ ಅಂತ ತೀರ್ಮಾನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಇದನ್ನು ಓದಿ: ಕೊನೆಗೂ ಪ್ರತ್ಯಕ್ಷರಾದ ಜಾರಕಿಹೊಳಿ ಸಿಡಿ ಯುವತಿಯ ಪೋಷಕರು; ಎಸ್​ಐಟಿಯಿಂದ ವಿಚಾರಣೆ

ಇಂತಹ ಘಟನೆಗಳು ರಾಜ್ಯಕ್ಕೆ ಮುಜುಗರ ಆಗುತ್ತೆ, ಬ್ಲಾಕ್‌ಮಾರ್ಕ್‌ ಆಗೋದು ಅನ್ನೋದಕ್ಕಿಂತ ರಾಜ್ಯಕ್ಕೆ ಮುಜುಗರ ತರೋದು ನಿಜ. ನಾವು ಪ್ರಬುದ್ದರಾಗಿದ್ದರೆ ವೈಯುಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ. ಅದು ಅವರ ವೈಯಕ್ತಿಕ ವಿಚಾರ ಅಂತ ಸುಮ್ಮನಾಗಬಹುದಿತ್ತು. ಆದರೆ ನಾವು ಎಲ್ಲರೂ ಸೇರಿಕೊಂಡು ಎಷ್ಟು ತೇಜೋವಧೆ ಮಾಡಿಬಿಟ್ಟಿದ್ದೀವಿ. ರಾಜ್ಯದಲ್ಲಿ ಬೇರೆ ನ್ಯೂಸ್ ಇಲ್ಲವೇನೋ ಅನ್ನುವಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಮಾಧ್ಯಮ ಕಾರಣ ಅಂತ ನಾನು ಹೇಳಿಲ್ಲ.  ಆದರೆ  ರಾಜ್ಯದ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಮಾತನಾಡುತ್ತಿದ್ದೇನೆ. ಮೇಟಿ ಕೇಸ್‌ನಲ್ಲು ಇದೇ ರೀತಿ ಮರ್ಯಾದೆ ಹೋಯ್ತು. ಆದ್ರೆ ಕೇಸ್ ಏನು ಆಗಲೇ ಇಲ್ಲ. ಇದು ಸಹ ತನಿಖೆ ಮುಗಿಯುವವರೆಗೂ ಇಷ್ಟು ಚರ್ಚೆ ಮಾಡುವ ಅವಶ್ಯಕತೆ ಇರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

ಇನ್ನು ಸದನದಲ್ಲಿ ಸಚಿವ ಮಾಧುಸ್ವಾಮಿ ಮೌನವಾಗಿದ್ದಿರು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಹೃದಯದ ಆಂಜಿಯೋಪ್ಲಾಸ್ಟಿ ಆಗಿದೆ. ಸ್ಟಂಟ್‌ ಅಳವಡಿಸಿಕೊಂಡು ವಿಶ್ರಾಂತಿಯಲ್ಲಿದ್ದೇನೆ. ಇದೇ ಕಾರಣಕ್ಕೆ ನಾನು ಈ ಬಾರಿಯ ಬಜೆಟ್‌ ಅಧಿವೇಶನಕ್ಕೂ ಹೋಗಲಿಲ್ಲ. ನಾನು ಇತ್ತೀಚೆಗೆ ಎಲ್ಲಿಯೂ ಕಾರ್ಯಕ್ರಮಕ್ಕೆ ಬಂದಿಲ್ಲ. ಆಸ್ಪತ್ರೆಯಿಂದ ಡಿಸ್ವಾರ್ಜ್ ಆದ ಮೇಲೆ ಇದೇ ಮೊದಲನೆ ಕಾರ್ಯಕ್ರಮ ಅಂತ ಸದನಕ್ಕೆ ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದರು.
Published by:HR Ramesh
First published: