HOME » NEWS » District » JAMBU SAVARI 2020 PREPARATION TOOK PLACE AHEAD OF PERFORM FOR ONLY 300 METER THIS YEAR IN MYSURU PMTV HK

Mysore Dasara 2020: ಜಂಬೂ ಸವಾರಿಗೆ ತಾಲೀಮು ಈ ಬಾರಿ 300 ಮೀಟರ್ ಮಾತ್ರ ಮೆರವಣಿಗೆ

ನಾಡಹಬ್ಬ ದಸರಾ ಕಳೆಗಟ್ಟಿದ್ದು ಈ ಬಾರಿ ಅರಮನೆಯೊಳಗೆ ಮಾತ್ರ ‌ನಡೆಯುವ ದಸರಾ ಜಂಬೂ ಸವಾರಿ ನೋಡಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

news18-kannada
Updated:October 22, 2020, 9:54 PM IST
Mysore Dasara 2020: ಜಂಬೂ ಸವಾರಿಗೆ ತಾಲೀಮು ಈ ಬಾರಿ 300 ಮೀಟರ್ ಮಾತ್ರ ಮೆರವಣಿಗೆ
ಜಂಬೂ ಸವಾರಿ ತಾಲೀಮು
  • Share this:
ಮೈಸೂರು(ಅಕ್ಟೋಬರ್​. 22): ವಿಶ್ವ ವಿಖ್ಯಾತ ನಾಡಹಬ್ಬ ದಸರೆಯ 6ನೇ ದಿನವೂ ದಸರೆ ಕಳೆಗಟ್ಟಿದ್ದು ಇಂದಿನಿಂದ ಗಜಪಡೆಯು ನಾಲ್ಕನೇ ಹಂತದ ತಾಲೀಮು ಶುರುಮಾಡಿದೆ. ಇಷ್ಟು ದಿನ ತೂಕದ ತಾಲೀಮು ನಡೆಸಿದ ಗಜಪಡೆ‌ ಇಂದು ಜಂಬೂ ಸವಾರಿಯ ತಾಲೀಮು ನಡೆಸಿ‌ ಸೈ ಎನಿಸಿಕೊಂಡಿದೆ. ಅಭಿಮನ್ಯು ನೇತೃತ್ವದಲ್ಲಿ ನಡೆದ ಜಂಬೂ ಸವಾರಿ‌ ತಾಲೀಮನಲ್ಲಿ ಅಶ್ವಗಳು ಸೇರಿ ಪೊಲೀಸ್ ಬ್ಯಾಂಡ್ ಟೀಂ ಬಾಗಿಯಾಗಿ ಪುಷ್ಪಾರ್ಚನೆ ಮಾಡುವ ತಾಲೀಮು‌ ಕೂಡ ಸರಾಗವಾಗಿ‌ ನೆರವೇರಿದೆ. ಗಜ ಪಡೆಯ ನಾಲ್ಕನೇ‌ ಹಂತದ ಜಂಬೂ ಸವಾರಿ ತಾಲೀಮು ಆರಂಭವಾಗಿದ್ದು, ಪುಷ್ಪಾರ್ಚನೆ‌ ಮಾಡುವ ತಾಲೀಮು ಯಶಸ್ವಿಯಾಗಿದೆ. ಈ ಬಾರಿ 300ಮೀ‌ಟರ್​ ಮಾತ್ರ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಅದರ ಮೊದಲ ಹಂತದ ತಾಲೀಮು ಇಂದು ನೆರವೇರಿತು.‌ ನಾಡಹಬ್ಬ ದಸರೆಗೆ ದಿನಗಣನೆ ಶುರುವಾಗಿದ್ದು, ನಿತ್ಯವೂ ಗಜಪಡೆ ಒಂದೊಂದು ಹಂತವನ್ನ ಮುಕ್ತಾಯ ಮಾಡುವತ್ತ ಸಾಗುತ್ತಿದೆ.

ಇಷ್ಟು ದಿನ ತೂಕದ ತಾಲೀಮು ಸೇರಿ ಮರದ ಅಂಬಾರಿ ತಾಲೀಮು ನಡೆಸಿದ ಗಜಪಡೆಗೆ ಇಂದು ಕೊನೆ ಹಂತದ ಜಂಬೂ ಸವಾರಿ ತಾಲೀಮು‌ ಶುರುವಾಗಿದೆ. ಅರಮನೆ ಮುಂಭಾಗ ಅಶ್ವಾರೋಹಿದಳದ ಕುದುರೆಗಳು ಸೇರಿದಂತೆ ಪೊಲೀಸ್ ಬ್ಯಾಂಡ್‌ ಸಿಬ್ಬಂದಿಗಳು ಇವತ್ತು ಜಂಬೂ ಸವಾರಿಯ ತಾಲೀಮು ನಡೆಸಿದರು. ಗಜಪಡೆ ಹೇಗೆ ಬರಬೇಕು? ಗಜಪಡೆಗೆ ಹೇಗೆ ಪುಷ್ಪಾರ್ಚಾನೆ ಮಾಡಬೇಕು? ಬಳಿಕ ಜಂಬೂ ಸವಾರಿ ಸಾಗುವಾಗ ಅಶ್ವಗಳು ಹೇಗೆ ಸಾಗಬೇಕು? ಪೊಲೀಸ್ ಬ್ಯಾಂಡ್ ಪುಷ್ಪಾರ್ಚನೆ ಮುಗಿದ ಬಳಿಕ‌ ರಾಷ್ಟ್ರಗೀತೆ ನುಡಿಸುವುದು' ಹೀಗೆ ಹಲವು ವಿಧಾನಗಳನ್ನ ಇವತ್ತು ರಿಹರ್ಸಲ್ ಮಾಡಲಾಯಿತು.

ತಾಲೀಮನಲ್ಲಿ ಏನಾದರು ತಪ್ಪಿದ್ದರೆ ಅಥವಾ ಸಮಸ್ಯೆ ಆದರೆ ಅದನ್ನ ತಿದ್ದುಕೊಳ್ಳುವ ಕೆಲಸ ಕೂಡ ಆಗುತ್ತಿದೆ. ಇಂದು ಮೊದಲನೇ‌ ದಿನದ ತಾಲೀಮು ಇನ್ನು ಎರಡು ಬಾರಿ ತಾಲೀಮು ಮಾಡಿ ನಾವು ಜಂಬೂ ಸವಾರಿಗೆ ಸಿದ್ದತೆ ಮಾಡಿಕೊಳ್ಳುತ್ತೇವೆ ಅಂತಾರೆ ವೈದ್ಯರು.

ಇದನ್ನೂ ಓದಿ : ಪ್ರವಾಹ ಪೀಡಿತ ಪ್ರದೇಶದಲ್ಲಿ ಪಿಎಸ್ಐಗೆ ಚೆಲ್ಲಾಟ ; ಸಂತ್ರಸ್ತರಿಗೆ ಪ್ರಾಣ ಸಂಕಟ

ಇನ್ನು ಗಜಪಡೆಯ ತಾಲೀಮು‌ ಒಂದು ಕಡೆಯಾದ್ರೆ ಮತ್ತೊಂದು ಕಡೆ ಅರಮನೆಯಲ್ಲು ಖಾಸಗಿ ದರ್ಬಾರ್ 6ನೇ ದಿನಕ್ಕೆ ಕಾಲಿಟ್ಟಿದೆ. ಅರಮನೆಯಿಂದ‌ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಪಟ್ಟದ ಆನೆ, ಕುದುರೆ ಸೇರಿ ಹಸುವನ್ನ ಪೂಜೆಗೆ ಕರೆದೊಯ್ಯಲಾಯಿತು. ಇದೇ ವೇಳೆ ಗಜಪಡೆಯ ಜಂಬೂ ಸವಾರಿಯ ತಾಲೀಮು ಕೂಡ ಭರ್ಜರಿಯಾಗಿ ನೆರವೇರಿದೆ. ಅಲ್ಲದೆ ಗಜಪಡೆ ಆರೋಗ್ಯವಾಗಿದ್ದು, ಇನ್ನೆರಡು ಬಾರಿ ತಾಲೀಮು ನಡೆಯಲಿದೆ. ಅದರಲ್ಲಿ ಮರದ ಅಂಬಾರಿಯ ಹೊರಿಸಿ ತಾಲೀಮು ಕೂಡ ನಡೆಯಲಿದ್ದು ಇದು ಕೊನೆಯ ತಾಲೀಮು ಆಗಿದ್ದು ಇದು ಜಂಬೂಸವಾರಿಗೆ ಪೂರಕವಾಗಿದೆ.

ಒಟ್ಟಾರೆ ನಾಡಹಬ್ಬ ದಸರಾ ಕಳೆಗಟ್ಟಿದ್ದು ಈ ಬಾರಿ ಅರಮನೆಯೊಳಗೆ ಮಾತ್ರ ‌ನಡೆಯುವ ದಸರಾ ಜಂಬೂ ಸವಾರಿ ನೋಡಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ‌ ಜಂಬೂ ಸವಾರಿಯ ತಾಲೀಮು ಸಹ ಭರ್ಜರಿಯಾಗಿ ಸಾಗಿದ್ದು ಈ ಬಾರಿ ದಸರಾ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ.
Published by: G Hareeshkumar
First published: October 22, 2020, 6:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories