ಸಿಎಂ ಆಗಿ ಅವಧಿ ಪೂರ್ಣಗೊಳಿಸುತ್ತೀರಿ; ಮುಂದೆ ರಾಜ್ಯಪಾಲ ಇಲ್ಲವೇ ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗುತ್ತೀರಿ - ಬಿ ಎಸ್ ವೈಗೆ ಭವಿಷ್ಯ ನುಡಿದ ಮುನಿ

ಸಿಎಂ ಆಗಿ ಅವಧಿ ಪೂರ್ಣ ಹಾಗೂ ನಂತರ ರಾಜ್ಯಪಾಲ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಆಗುತ್ತಿರಿ ಎಂದು ಜೈನ ಮುನಿ ಆಶೀರ್ವಾದ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮುನಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗು ಸಹ ನೀವು ಸಿಎಂ ಆಗುತ್ತೀರಿ ಎಂದು ಹೇಳಿದ್ದರು.

ಜೈನ ಮುನಿ ಜೊತೆ ಸಿಎಂ ಬಿಎಸ್​ವೈ

ಜೈನ ಮುನಿ ಜೊತೆ ಸಿಎಂ ಬಿಎಸ್​ವೈ

  • Share this:
ಬೆಳಗಾವಿ(ಏಪ್ರಿಲ್ 06): ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರ ಮತ್ತಷ್ಟು ತೀವ್ರಗೊಂಡಿದೆ. ಮತ ಬೇಟೆಯಲ್ಲಿ ಕಾಂಗ್ರೆಸ್, ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿವೆ. ನಾಳೆಯಿಂದ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಇಂದು ಸಂಜೆ ಬೆಂಗಳೂರಿನಿಂದ ಆಗಮಿಸಿದ ಸಿಎಂ ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಕೇದಾರಪೀಠದ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದರು. ನಂತರ ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇವಾ ಮುನಿ  ಆಶೀರ್ವಾ ಪಡೆದ್ರು. ಈ ವೇಳೆಯಲ್ಲಿ ಜೈನ ಮುನಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ, "ನೀವು ಸಿಎಂ ಆಗಿ ಅವಧಿ ಪೂರ್ಣಗೊಳಿಸುತ್ತಿರಿ. ಮುಂದೆ ರಾಜ್ಯಪಾಲ ಇಲ್ಲವೇ ಉಪರಾಷ್ಟ್ರಪತಿ , ರಾಷ್ಟ್ರಪತಿ ಆಗುತ್ತೀರಿ" ಎಂದು ಆಶೀರ್ವಾದ ಮಾಡಿದ್ದಾರೆ.

ಲೋಕಸಭೆ ಉಪಚುನಾವಣೆ ಪ್ರಚಾರ ಕಾರ್ಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸಿಎಂ ವಾಸ್ತವ್ಯ ಮಾಡಿದ್ದು, ಬುಧವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ, ಯರಗಟ್ಟಿ ಹಾಗೂ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ರಸ್ತೆ ಮೂಲಕ ಆಗಮಿಸಿದ ಸಿಎಂ ಎರಡು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ರು.

ಮುತ್ನಾಳ ಗ್ರಾಮದ ಕೇದಾರಪೀಠದ ಶಾಖಾ ಮಠಕ್ಕೆ ಭೇಟಿ ನೀಡಿ ಶಿವಾನಂದ ಶಿವಾಚಾರ್ಯ ಶ್ರಿಗಳ ಆಶೀರ್ವಾದನ್ನು ಸಿಎಂ ಪಡೆದಿದ್ದಾರೆ. ಸಿಎಂ ಈ ಮಠಕ್ಕೆ ಮೂರು ಸಲ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ ಎನ್ನುವುದು ವಿಶೇಷ.

ನಂತರ ಹಲಗಾ ಗ್ರಾಮದ ಜೈನ ಮುನಿ ಭೇಟಿ ವೇಳೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ವಿಶೇಷ ಆಶೀರ್ವಾದ ಸಿಕ್ಕಿದೆ. ಸಿಎಂ ಆಗಿ ಅವಧಿ ಪೂರ್ಣ ಹಾಗೂ ನಂತರ ರಾಜ್ಯಪಾಲ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಆಗುತ್ತಿರಿ ಎಂದು ಜೈನ ಮುನಿ ಆಶೀರ್ವಾದ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮುನಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗು ಸಹ ನೀವು ಸಿಎಂ ಆಗುತ್ತೀರಿ ಎಂದು ಹೇಳಿದ್ದರು.

ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ, ಸಾರಿಗೆ ನೌಕರರ 8 ಬೇಡಿಕೆ ಈಡೇರಿಸಿದ್ದೇವೆ. ಕೊರೊನಾದಿಂದ ಆರ್ಥಿಕ ಸ್ಥಿತಿ ಹದಗೆಟ್ರು ಸಹ 1200 ಕೋಟಿ ರೂಪಾಯಿ ಸಾರಿಗೆ ನೌಕರರ ಸಂಬಳ ಸರ್ಕಾರ ಭರಿಸಿದೆ. ದಯವಿಟ್ಟು ಹಠವನ್ನು ಬಿಟ್ಟು ಸಾರಿಗೆ ನೌಕರರು ಮುಷ್ಕರ ಕೈ ಬಿಡಬೇಕು. ಸಮಸ್ಯೆ ಇದ್ರೆ ಕುಳಿತು ಮಾತನಾಡೊಣ. ಪದೇ ಪದೇ ಸಾಮಾನ್ಯ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಸಿಎಂ ಹೇಳಿದ್ರು.

ಕೊವಿಡ್ ನಿಯಮ ಪಾಲನೆಗೆ ಪ್ರಧಾನಿ ನಮ್ಮ ಜತೆಗೆ ಮಾತನಾಡುವವರಿದ್ದಾರೆ. ಈಗಾಗಲೇ ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ ಮಾಡಲಾಗಿದೆ. ಜನರು ಕೊವಿಡ್ ನಿಯಮ ಪಾಲಿನೆ ಮಾಡಬೇಕು ಎಂದು ಮನವಿ ಮಾಡಿದ್ರು.
Published by:Soumya KN
First published: