HOME » NEWS » District » JAGADISH SHETTAR PLEDGE SUPPORT FOR HUDA DECISION TO EVACUATE ILLEGAL LAYOUTS AT HUBLI DHARWAD SNVS

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್​ಗಳ ತೆರವಿಗೆ ಬೆಂಬಲ ಇದೆ: ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್

ಅನಧಿಕೃತವಾಗಿ ನಿರ್ಮಿಸುವ ಲೇಔಟ್​ಗಳ ತೆರವಿನ ಕಾರ್ಯ ನಿರಂತರವಾಗಿ ನಡೆಯಬೇಕು. ಇದರಿಂದ ಅನಧಿಕೃತವಾಗಿ ಲೇಔಟ್ ನಿರ್ಮಿಸುವವರಿಗೆ ಬಿಸಿ ಮುಟ್ಟುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:July 7, 2020, 7:10 AM IST
ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್​ಗಳ ತೆರವಿಗೆ ಬೆಂಬಲ ಇದೆ: ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಮತ್ತಿತರರು
  • Share this:
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದಿಂದ ಅವಳಿ ನಗರದಲ್ಲಿ ನಿರ್ಮಿಸುತ್ತಿರುವ ಲೇಔಟ್​ಗಳ ಸರ್ವೇ ಕಾರ್ಯ ಆರಂಭಿಸಲಾಗಿದೆ. ಅನಧಿಕೃತವಾಗಿ ಲೇ ಔಟ್ ನಿರ್ಮಿಸುವವರಿಗೆ ನೋಟಿಸ್ ನೀಡಿ ತೆರವುಗೊಳಿಸುವ ಪ್ರಾಧಿಕಾರದ ಕಾರ್ಯಕ್ಕೆ ಜನ ಪ್ರತಿನಿಧಿಗಳ ಬೆಂಬಲವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನವನಗರದ ಹುಡಾ ಕಚೇರಿಯಲ್ಲಿ ಜರುಗಿದ ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಅನಧಿಕೃತವಾಗಿ ನಿರ್ಮಿಸುವ ಲೇಔಟ್​ಗಳ ತೆರವಿನ ಕಾರ್ಯ ನಿರಂತರವಾಗಿ ನಡೆಯಬೇಕು. ಇದರಿಂದ ಅನಧಿಕೃತವಾಗಿ ಲೇಔಟ್ ನಿರ್ಮಿಸುವವರಿಗೆ ಬಿಸಿ ಮುಟ್ಟುತ್ತದೆ. ಶಿಸ್ತುಬದ್ದವಾಗಿ ನಗರದ ಬೆಳವಣಿಗೆ ಮಾಡಬೇಕಾದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವಂತೆ‌ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಗರದ ಸಮಗ್ರ ಅಭಿವೃದ್ಧಿ ಯೋಜನೆ ಅನುಮೋದನೆ ನೀಡಲಾಗಿದೆ. ಕ್ರಡಾಯ್ ಅಸೋಸಿಯೇಷನ್ ವತಿಯಿಂದ ಇತರ ನಗರಗಳಂತೆ ಜೋನಲ್ ರೆಗ್ಯುಲೇಶನ್​ನಲ್ಲಿ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಇದರ ಬಗ್ಗೆ ಚರ್ಚಿಸಿ ಸಾಧ್ಯವಿರುವ ಬದಲಾವಣೆಗೆ ಶಿಫಾರಸ್ಸು ಮಾಡಿ ನಗರಾಭಿವೃದ್ಧಿ ಇಲಾಖೆ ಕಳುಹಿಸಿ ಕೊಡಲಾಗುತ್ತಿದೆ. ರಾಜ್ಯ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಹುಡಾ ನಿಯಮಗಳಲ್ಲಿ ಮಾಡಬೇಕಾದ ಬದಲಾವಣೆ ಬಗ್ಗೆ ಶಿಫಾರಸ್ಸುಗಳನ್ನು ಕಳುಹಿಸುವಂತೆ ಸೂಚನೆ ನೀಡಿದ್ದರು. ಇದರಂತೆ ಬದಲಾವಣೆಗೆ ಕೋರಿ ಸಭೆಯ ನಿರ್ಣಯ ಕಳುಹಿಸಲಾಗುತ್ತಿದೆ ಎಂದು ಮಾಜಿ ಸಿಎಂ ಹೇಳಿದರು.

ಇದನ್ನೂ ಓದಿ: M Vasudeva Maiya Suicide: ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ, ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ

ಇದುವರೆಗೆ ಯಾವುದೇ ರೈತರು ಜಮೀನು ನೀಡಲು ಮುಂದೆ ಬಂದಿಲ್ಲ. ಯಾರಾದರು ಜಮೀನು ನೀಡಿದರೆ ಪ್ರಸ್ತಾವನೆಯನ್ನು‌ ಮುಂದಿನ ಸಭೆಯ ಚರ್ಚಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಮೈಸೂರು, ಬೆಳಗಾವಿ ಸೇರಿದಂತೆ ಇತರೆ ನಗರಗಳಲ್ಲಿ ನಗರಾಭಿವೃದ್ಧಿ ನಿಯಮಗಳಂತೆ ಹುಡಾದಲ್ಲೂ ಬದಲಾವಣೆ ತರಲಾಗುವುದು. ನೂತನ ಜಿಲ್ಲಾಧಿಕಾರಿಗಳಿಗೆ ಒತ್ತುವರಿ ತೆರವಿನ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಶೆಟ್ಟರ್ ತಿಳಿಸಿದರು.

ರಾಜ್ಯಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಕೊವೀಡ್ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆ ದಾಖಲಾಗಬೇಕು. ಖಾಸಗಿ ಆಸ್ಪತ್ರೆಗಳು ಕೊವೀಡ್ ಚಿಕಿತ್ಸೆ ನೀಡಲು ಮುಂದೆ ಬಂದಿವೆ. ಚಿಕಿತ್ಸೆಗೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಮೆಡಿಕಲ್ ಕಾಲೇಜು, ಹಾಸ್ಟೆಲ್ ಸೇರಿದಂತೆ 6000 ಬೆಡ್​ಗಳನ್ನು ಕೊವೀಡ್ ಚಿಕಿತ್ಸೆಗಾಗಿ ಗುರುತಿಸಲಾಗಿದೆ. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿ ಕೊವೀಡ್ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಿ ನಿಯೋಜನೆ ಮಾಡಲಾಗಿದೆ. ಸಂಜೀವಿನಿ, ಹೆಗ್ಗೇರಿ ಆಯುರ್ವೇದ ಕಾಲೇಜು, ಎಸ್.ಡಿ.ಎಂ. ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿವೆ. ಕೊರೋನಾ ರಾಜ್ಯದಲ್ಲಿ ಸಮುದಾಯದಲ್ಲಿ ಹರಡುವ ಹಂತಕ್ಕೆ ತಲುಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬೆಡ್​ಗಳು ಭರ್ತಿ, ಹೊಸ ರೋಗಿಗಳಿಗೆ ಇಲ್ಲ ಸ್ಥಳ: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಹಾಯಕತೆ

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ‌ ನಾಗೇಶ್ ಕಲಬುರ್ಗಿ, ಶಾಸಕ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್, ಅಬ್ಬಯ್ಯ ಪ್ರಸಾದ್, ಶ್ರೀನಿವಾಸ ಮಾನೆ, ಪ್ರದೀಪ್ ‌ಶೆಟ್ಟರ್, ಸಿ.ಎಂ. ನಿಂಬಣ್ಣನವರ, ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಇತರರು ‌ಉಪಸ್ಥಿತರಿದ್ದರು.
Published by: Vijayasarthy SN
First published: July 7, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories