HOME » NEWS » District » JAGADISH SHETTAR INAUGURATES SCIENTIFIC WASTE MANAGEMENT UNIT AT HUBLI SNVS

ಹುಬ್ಬಳ್ಳಿಯಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕಕ್ಕೆ ಚಾಲನೆ

ಈ ತ್ಯಾಜ್ಯ ನಿರ್ವಹಣೆಯ ಘಟಕದಲ್ಲಿ ಒಟ್ಟು 5 ವಾರ್ಡ್​ಗಳಿಂದ ಸುಮಾರು 22,585 ಮನೆಗಳಿಂದ ಸುಮಾರು 47 ಟನ್ ಸಾಮರ್ಥ್ಯದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ.

news18-kannada
Updated:July 15, 2020, 8:40 AM IST
ಹುಬ್ಬಳ್ಳಿಯಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕಕ್ಕೆ ಚಾಲನೆ
ತ್ಯಾಜ್ಯ ನಿರ್ವಹಣೆ ಘಟಕದ ಉದ್ಘಾಟನೆ ಮಾಡಿದ ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ: ಇಲ್ಲಿಯ ನಂದಿನಿ ಬಡಾವಣೆಯಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣ ಮತ್ತು ಸಂಸ್ಕರಣಾ ಘಟಕದ ಉದ್ಘಾಟನೆ ಆಗಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಭಾಗವಾಗಿ ದ್ವಿತೀಯ ಹಂತದ ಈ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆ ಮತ್ತು  ಸಂಸ್ಕರಣಾ ಘಟಕ ನೂತನವಾಗಿ ನಿಮಾ೯ಣ ಮಾಡಲಾಗಿದೆ. ಬೃಹತ್ ಮತ್ತು ಮಧ್ಯಮ ಕ್ಯೆಗಾರಿಕಾ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ನಿನ್ನೆ ಈ ಘಟಕದ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಪಾಲಿಕೆಯ ಅಧೀಕ್ಷಕ ಅಭಿಯಂತರ ಇ ತಿಮ್ಮಪ್ಪ, ಘನತ್ಯಾಜ್ಯ ವಸ್ತು ನಿವ೯ಹಣಾ ವಿಭಾಗದ ಕಾಯ೯ನಿವಾ೯ಹಕ ಅಭಿಯಂತರ ವಿಜಯಕುಮಾರ್ ಆರ್, ಪಾಲಿಕೆಯ ಎಲ್ಲ ವಿಭಾಗಗಳ ಕಾಯ೯ನಿವಾ೯ಹಕ ಅಭಿಯಂತರರು, ವಲಯ ಕಚೇರಿ ಸಹಾಯಕ ಆಯುಕ್ತ ಎಸ್. ಸಿ. ಬೇವೂರ್, ಪಾಲಿಕೆಯ ಎಲ್ಲ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಪಾಲಿಕೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಈ ತ್ಯಾಜ್ಯ ನಿರ್ವಹಣೆಯ ಘಟಕದಲ್ಲಿ ಒಟ್ಟು 5 ವಾಡ೯ಗಳಿಂದ ಸುಮಾರು 22,585 ಮನೆಗಳಿಂದ ಸುಮಾರು 47 ಟನ್ ಸಾಮರ್ಥ್ಯದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಇದರೊಂದಿಗೆ ಸಮಗ್ರ ಘನತ್ಯಾಜ್ಯ ನಿವ೯ಹಣೆ ಯೋಜನೆಯಲ್ಲಿ ಅನುಮೋದನೆಗೊಂಡ ಹುಬ್ಬಳ್ಳಿಯ ವಿಭಾಗದ 4 ಸ್ಟೇಷನರಿ ಕಂಪ್ಯಾಕ್ಟರ್ ಸ್ಟೇಷನ್​ಗಳೂ ಕೂಡ ಕಾಯಾ೯ರಂಭಗೊಂಡಂತಾಗಿದೆ.

ಇದನ್ನೂ ಓದಿ: ಕೋಟೆನಾಡು ಚಿತ್ರದುರ್ಗದಲ್ಲಿ ಕೊರೋನಾಗೆ ಮತ್ತೊಂದು ಬಲಿ: ಮೃತ ದೇಹದ ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ
ಅವಳಿ ನಗರಗಳಲ್ಲಿ ಈ ತ್ಯಾಜ್ಯ ನಿರ್ವಹಣೆ ಘಟಕದ ನಿರ್ಮಾಣ ಬಹಳ ವರ್ಷಗಳ ಪ್ರಯತ್ನದ ಫಲವಾಗಿದೆ. ಹಲವು ಅಡೆತಡೆ, ನಿರ್ಲಕ್ಷ್ಯತೆ ನಡುವೆ ಈಗ ಉದ್ಘಾಟನೆಯ ಭಾಗ್ಯ ಕಂಡಿದೆ.
Published by: Vijayasarthy SN
First published: July 15, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories