Umesh Katti -ನಾನು ಹಾಗೂ ಶಾಸಕ ತಿಪ್ಪಾರೆಡ್ಡಿ ಇಬ್ಬರು ಸಚಿವರಾಗುವ ಕಾಲ ಬಹಳ ದೂರವಿಲ್ಲ ; ಶಾಸಕ ಉಮೇಶ್ ಕತ್ತಿ

ಮುಖ್ಯಮಂತ್ರಿ ಪರಮಾವಧಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಅಧಿಕಾರ ಇದೆ ಅವರೆ ಮಾಡುತ್ತಾರೆ. ಶಾಸಕ ತಿಪ್ಪಾರೆಡ್ಡಿ ಹಿರಿಯರು ನಾನು ಅವರು ಇಬ್ಬರು ಮಂತ್ರಿ ಆಗುವ ಕಾಲ ಬಹಳ ದೂರವಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

news18-kannada
Updated:July 29, 2020, 1:28 PM IST
Umesh Katti -ನಾನು ಹಾಗೂ ಶಾಸಕ ತಿಪ್ಪಾರೆಡ್ಡಿ ಇಬ್ಬರು ಸಚಿವರಾಗುವ ಕಾಲ ಬಹಳ ದೂರವಿಲ್ಲ ; ಶಾಸಕ ಉಮೇಶ್ ಕತ್ತಿ
ಶಾಸಕ ಉಮೇಶ್​ ಕತ್ತಿ
  • Share this:
ಚಿಕ್ಕೋಡಿ(ಜುಲೈ.29): ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬಿಜೆಪಿ ಪಕ್ಷದಲ್ಲಿ ಅತ್ಯಂತ ಹಿರಿಯ ಶಾಸಕ ಅದರಲ್ಲೂ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೆ ಆತ ಗತ್ತು ಹೊಂದಿರುವ ರಾಜಕಾರಣಿ. ಒಂದಾನೊಂದು ಕಾಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರಲ್ಲಿ ಗುರುತಿಸಿಕೊಂಡ ಹಿರಿಯ ರಾಜಕಾರಣಿ ಇವರು ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿ ಇದ್ದೆ ಇರುತ್ತಾರೆ.

ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಸಚಿವರಾಗಿ ಅಧಿಕಾರ ಅನುಭವಿಸಿದ ಏಕೈಕ ಶಾಸಕ. ಆದರೆ, 2019 ರ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದ ಪ್ರಭಲ ಆಕಾಂಕ್ಷೆಯಾಗಿದ್ದರು ಬೆಳಗಾಗುವಷ್ಟರಲ್ಲಿ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತಾರೆ ಎಂದು ಕೊಂಡಿದ್ದ ಕತ್ತಿ ಕೊನೆಯ ಘಳಿಗೆಯಲ್ಲಿ ಸಚಿವ ಸ್ಥಾನ ಮಾತ್ರ ಕೈ ತಪ್ಪಿತ್ತು. ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆಯಾದ ಉಮೇಶ್ ಕತ್ತಿಗೆ ಕೋಕ ಕೊಟ್ಟು ಸೋತಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದು, ಅಲ್ಲದೆ ಉಪ ಮುಖ್ಯಮಂತ್ರಿ ಪಟ್ಟವನ್ನು ಹೈಕಮಾಂಡ್ ಕೊಟ್ಟು ರಾಜ್ಯ ರಾಜಕೀಯದಲ್ಲೆ ಅಚ್ಚರಿ ಮೂಡಿಸಿತ್ತು.

ಅಂದು ಸಚಿವ ಸ್ಥಾನ ಕೈ ತಪ್ಪಿದಾಗಿನಿಂದಲು ಸಿಎಂ ಯಡಿಯೂರಪ್ಪ ಜೊತೆಗೆ ಮುನಿಸಿಕೊಂಡ ಉಮೇಶ್ ಕತ್ತಿ ನಾನು ಅತ್ಯಂತ ಹಿರಿಯ ಶಾಸಕ ನನಗೆ ಸಚಿವ ಸ್ಥಾನ ಬೇಕೆ ಬೇಕು ಎಂದು ಹೇಳುತ್ತಲೆ ಬಂದಿದ್ದಾರೆ. ಎರಡು ಬಾರಿ ಸಚಿವ ಸಂಪುಟ ವಿಸ್ತರಣೆ ಆದರೆ ಉಮೇಶ್ ಕತ್ತಿಗೆ ಮಾತ್ರ ಸಚಿವರಾಗುವ ಭಾಗ್ಯ ಕೂಡಿ ಬಂದಿಲ್ಲ ಸದ್ಯ ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿದ್ದು ಮತ್ತೆ ಉಮೇಶ್ ಕತ್ತಿ ರೇಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷೆಗಳಾಗಿದ್ದ ಶಾಸಕರಿಗೆ ಸಮಾಧಾನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿಗಮ ಮಂಡಳಿಗಳನ್ನ ನೀಡಿದ್ದರು. ಹಲವರು ನಯವಾಗೆ ನಿರಾಕರಿಸಿದರೆ ಶಾಸಕ ತಿಪ್ಪಾರೆಡ್ಡಿ ಮಾತ್ರ ನನಗೆ ಅವಮಾನ ಮಾಡಲಾಗಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬಹಿರಂಗವಾಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈಗ ಉಮೇಶ್ ಕತ್ತಿ ಸಹ ನನಗೆ ಮಂತ್ರಿ ಸ್ಥಾನ ಬೇಕು ಎಂದಿದ್ದಾರೆ.

ಮುಖ್ಯಮಂತ್ರಿ ಪರಮಾವಧಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಅಧಿಕಾರ ಇದೆ ಅವರೆ ಮಾಡುತ್ತಾರೆ. ಶಾಸಕ ತಿಪ್ಪಾರೆಡ್ಡಿ ಹಿರಿಯರು ನಾನು ಅವರು ಇಬ್ಬರು ಮಂತ್ರಿ ಆಗುವ ಕಾಲ ಬಹಳ ದೂರವಿಲ್ಲ. ನಾವು ಇಬ್ಬರು ಸಹ ಮಂತ್ರಿ ಆಗುತ್ತೇವೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಬಹಳ ದಿನಗಳ ಬಳಿಕ ಯಡಿಯೂರಪ್ಪ ಹೊಗಳಿದ ಕತ್ತಿ

ಇನ್ನು ಯಡಿಯೂರಪ್ಪ ಜೊತೆ ಮುಣಿಸಿಕೊಂಡಿದ್ದ ಶಾಸಕ ಉಮೇಶ್ ಕತ್ತಿ ಬಹಳ ದಿನಗಳ ಬಳಿಕ ಸಿಎಂ ಯಡಿಯೂರಪ್ಪ ಅವರನ್ನ ಹೋಗಳಿದ್ದಾರೆ. ಕೊರೋನಾ ಹಗರಣದ ವಿಚಾರದಲ್ಲಿ ಮಾತನಾಡಿದ ಕತ್ತಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಪ್ರವಾಹ ಬಂದಾಗ ರಾಜ್ಯವನ್ನ ಒಬ್ಬರೆ ಸುತ್ತಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ.ಇದನ್ನೂ ಓದಿ :  ನೀರಾವರಿ ನಿಗಮದ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ : ಮಹದಾಯಿ ಮಾದರಿ ಹೋರಾಟದ ಎಚ್ಚರಿಕೆ

ಕೊರೋನಾ ಸಂದರ್ಭದಲ್ಲೂ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಆರೋಪ ಮಾಡುವದನ್ನ ಬಿಟ್ಟು ಸಹಕಾರ ಕೊಡಬೇಕು. ಕೊರೋನಾ ಹಾಗೂ ಪ್ರವಾಹದಲ್ಲಿ ಒಳ್ಳೆ ಕೆಲಸ ಮಾಡಿದ ಯಡಿಯೂರಪ್ಪ ಒಬ್ಬ ಶ್ರಮ ಜೀವಿ ಎಲ್ಲರೂ ಅವರಿಗೆ ಸಹಕಾರ ಕೊಡಬೇಕು ಎಂದಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಡಿಸಿಎಂ ಲಕ್ಷ್ಮಣ ಸವದಿಗೆ ಸಂಪುಟದಿಂದ ಕೈಬಿಟ್ಟು, ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ ಇವೆಲ್ಲಕ್ಕೂ ಸ್ವಲ್ಪ ದಿನದಲ್ಲೆ ಉತ್ತರ ಸಿಗಲಿದೆ.
Published by: G Hareeshkumar
First published: July 29, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading