ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯರ ಬೇಜವಾಬ್ದಾರಿ; ಚಿಕಿತ್ಸೆ ಸಿಗದೆ ಆಂಬ್ಯುಲೆನ್ಸ್​ನಲ್ಲೇ ಕಾದ ರೋಗಿ

ಮಾಧ್ಯಮಗಳ ಮೂಲಕ ವಿಷಯ ತಿಳಿದು  ತಾಲೂಕು ವೈದ್ಯಾಧಿಕಾರಿ ಡಾ, ಬಸವರಾಜ ಹುಬ್ಬಳ್ಳಿ  ಸ್ಥಳಕ್ಕಾಗಮಿಸಿದ್ದರು, ಆಗ ತಕ್ಷಣವೇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರೋಗಿಯನ್ನು ಅಂಬುಲೆನ್ಸ್ ನಿಂದ ವಾರ್ಡ್​ಗೆ ಶಿಪ್ಟ್ ಮಾಡಿಸಿ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಆಂಬ್ಯುಲೆನ್ಸ್​ನಲ್ಲೇ ಕಾಯುತ್ತಿರುವ ರೋಗಿ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಆಂಬ್ಯುಲೆನ್ಸ್​ನಲ್ಲೇ ಕಾಯುತ್ತಿರುವ ರೋಗಿ.

  • Share this:
ಬಾಗಲಕೋಟೆ (ಜನವರಿ 12):  ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ, ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡದೆ ಬೇಜವಾಬ್ದಾರಿ ತೋರುವ ವರದಿಗಳು ಆಗಾಗ ಆಗುತ್ತಲೇ ಇರುತ್ತವೆ. ಇಂತಹದೊಂದು ಘಟನೆಗೆ ಬಾಗಲಕೋಟೆಯಲ್ಲಿ ಚಿಕಿತ್ಸೆಗಾಗಿ ರೋಗಿ, ಹಾಗೂ ಕುಟುಂಬಸ್ಥರು ಅಂಬ್ಯುಲೆನ್ಸ್ ನಲ್ಲೆ ಕಾಯ್ದಿರುವ ಘಟನೆ ನಡೆದಿದೆ. ಬಾಗಲಕೋಟೆ ನಗರದಲ್ಲಿರುವ 50 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರೇವಣಸಿದ್ದಪ್ಪ ನಾಯ್ಕೊಡಿ ಎಂಬುವರನ್ನು ಕುಟುಂಬ‌ಸ್ದರು ಕರೆದುಕೊಂಡು ಬಂದಿದ್ದಾರೆ. ಆದರೆ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡದೇ ಬೇಜವಾಬ್ದಾರಿ ತೋರಿದ್ದಾರೆ. ಇನ್ನು ರೇವಣಸಿದ್ದಪ್ಪ ನಾಯ್ಕೊಡಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡೆಸಲು ಕುಟುಂಬಸ್ಥರಿಗೆ ಆರ್ಥಿಕ ಶಕ್ತಿಯೂ,ಇಲ್ಲ ಕಿತ್ತು ತಿನ್ನುವ ಬಡತನ ಬೇರೆ, ಆದರೆ, ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ನೋಡಲಿಲ್ಲ... ಏನೆಂದು ಕೇಳಲಿಲ್ಲ. ಆಂಬುಲೆನ್ಸ್ ನಿಂದ ಆಸ್ಪತ್ರೆಗೆ ಶಿಪ್ಟ್ ಮಾಡಲಿಲ್ಲ.

ಬದಲಿಗೆ ಇಲ್ಲಿ ವೈದ್ಯರು, ಸೌಲಭ್ಯ ಇಲ್ಲ. ಬೀಳಗಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಹೇಳಿ ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಬಡತನದಿಂದಾಗಿ ಖಾಸಗಿ ಆಸ್ಪತ್ರೆಗೆ ಹೋಗಲಾಗದ ಕುಟುಂಬಸ್ಥರು, ಇದ್ದರೂ ಇಲ್ಲೆ ಸತ್ತರೂ ಇಲ್ಲೆ ನಾವು ಬೇರೆ ಕಡೆಗೆ ಹೋಗಲ್ಲ ಎಂದು ಪಟ್ಟು ಹಿಡಿದು ಅಂಬ್ಯುಲೆನ್ಸ್ ನಲ್ಲೇ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೂ ಕುಳಿತು ಚಿಕಿತ್ಸೆಗಾಗಿ ಕಣ್ಣೀರು ಹಾಕಿದ್ದಾರೆ. ರೇವಣಸಿದ್ದಪ್ಪನ ಪತ್ನಿ ಬೋರಮ್ಮ ಚಿಕಿತ್ಸೆ ಸಿಗದೇ ತಮಗಾದ ನೋವು ಮಾಧ್ಯಮಗಳ ಮುಂದೆ ತೋಡಿಕೊಂಡರು.

ಮಾಧ್ಯಮಗಳ ಮೂಲಕ ವಿಷಯ ತಿಳಿದು  ತಾಲೂಕು ವೈದ್ಯಾಧಿಕಾರಿ ಡಾ, ಬಸವರಾಜ ಹುಬ್ಬಳ್ಳಿ  ಸ್ಥಳಕ್ಕಾಗಮಿಸಿದ್ದರು, ಆಗ ತಕ್ಷಣವೇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರೋಗಿಯನ್ನು ಅಂಬುಲೆನ್ಸ್ ನಿಂದ ವಾರ್ಡ್​ಗೆ ಶಿಪ್ಟ್ ಮಾಡಿಸಿ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ರೋಗಿಯನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಸ್ವಲ್ಪ ವಿಳಂಬ ಮಾಡಿದ್ದಾರೆ. ಇದೀಗ ರೋಗಿಯನ್ನು ದಾಖಲಿಸಿಕೊಂಡಿದ್ದೇವೆ. ರೋಗಿಯ ಕಂಡಿಷನ್ ನೋಡುತ್ತೇವೆ. ರೋಗಿಗೆ ಮಿದುಳಿಗೆ ಪಾರ್ಶ್ವವಾಯುಪೀಡಿತನಾಗಿದ್ದುರ ರೋಗಿ ಕುಡಿತದ ಚಟ ಬಿಟ್ಟಿಲ್ಲ. ಚಿಕಿತ್ಸೆ ಆರಂಭವಾಗಿದೆ.

ಇದನ್ನೂ ಓದಿ: ಭರವಸೆಯಂತೆ ಕಾಂಗ್ರೆಸ್​ನಿಂದ ಬಂದವರನ್ನು ಸಚಿವರನ್ನಾಗಿ ಮಾಡಿದ್ದೇವೆ; ಸಚಿವ ಈಶ್ವರಪ್ಪ ಹೇಳಿಕೆ

ರೋಗಿಗೆ ಇಲ್ಲಿಯೇ ಸಾಧ್ಯವಾದರೆ  ಚಿಕಿತ್ಸೆ ಮುಂದುವರೆಸುತ್ತೇವೆ. ಇಲ್ಲವಾದಲ್ಲಿ ಬೇರೆ ಕಡೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸುತ್ತೇವೆ  ಎಂದು ತಾಲೂಕು ವೈದ್ಯಾಧಿಕಾರಿ ಡಾ ಬಸವರಾಜ ಹುಬ್ಬಳ್ಳಿ ಹೇಳಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ, ಚಿಕಿತ್ಸೆ ಸಿಗದೇ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಬಾಗಲಕೋಟೆ ಹಳೆ ನಗರದಲ್ಲಿರುವ 50ಹಾಸಿಗೆ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಸ್ಪತ್ರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೂಕ್ತ ಸೌಲಭ್ಯ ಇಲ್ಲವೆಂದು ವೈದ್ಯರು ರೋಗಿಯೊಬ್ಬ ರನ್ನು ದಾಖಲಿಸಿಕೊಳ್ಳದೇ ಅಮಾನವೀಯವಾಗಿ ನಡೆದುಕೊಂಡ ವೈದ್ಯರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಒಟ್ನಲ್ಲಿ, ಬಡವರಿಗೆ  ಸಂಜೀವಿನಿಯಾಗಬೇಕಾಗಿದ್ದ  ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ವೈದ್ಯರ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಆಗರವಾಗುತ್ತಿವೆ. ಇನ್ಮೇಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಅವ್ಯವಸ್ಥೆ ತಪ್ಪಿಸಬೇಕಿದೆ..
Published by:MAshok Kumar
First published: