• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Crime News: ನಾಗಮಂಗಲ ಪೊಲೀಸರಿಂದ ಅಂತರರಾಜ್ಯ ಕುಖ್ಯಾತ ಕಳ್ಳರ ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ!

Crime News: ನಾಗಮಂಗಲ ಪೊಲೀಸರಿಂದ ಅಂತರರಾಜ್ಯ ಕುಖ್ಯಾತ ಕಳ್ಳರ ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ!

ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು.

ಮೂವರು ಆರೋಪಿಗಳನ್ನೂ ಬಂಧಿಸಿದ ಬಳಿಕ ಅವರ ಬಳಿ ಇದ್ದ ಸುಮಾರು 15 ಲಕ್ಷ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣಗಳು, ಒಂದು ಬಜಾಜ್ ಪಲ್ಸರ್ ಬೈಕ್, ಎನ್.ಎಸ್.200, ಒಂದು ಕೆಟಿಎಂ ಡ್ಯೂಕ್ ಬೈಕ್ ಹಾಗೂ ಒಂದು ಬಟನ್ ಚಾಕನ್ನು ಜಪ್ತಿ ಮಾಡಲಾಗಿದೆ.

  • Share this:

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಪೊಲೀಸರು ಕಾರ್ಯಚರಣೆ ನಡೆಸಿ, ಅಂತರ್ ರಾಜ್ಯ ಕುಖ್ಯಾತ ಸರಗಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಂಧಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಎಪ್ರಿಲ್ 24 ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತುಪ್ಪದಮಡು ಗ್ರಾಮದ ಮಂಜೇಶ್ ಎಂಬುವವರ ಪತ್ನಿ ತಮ್ಮ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಇಬ್ಬರು ಕಳ್ಳರು ಸ್ಕೂಟರ್ ಗೆ ಅಡ್ಡ ಬಂದು, ಚಾಕು ತೋರಿಸಿ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರವನ್ನು ಕದ್ದು ಪರಾರಿಯಾ  ಗಿದ್ದರು. ಬಳಿಕ ಮಂಜೇಶ್ ಪತ್ನಿ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.


ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣ ನಡೆದ ಸ್ಥಳದ ಅಕ್ಕಪಕ್ಕದಲ್ಲಿ‌ನ ಸಿಸಿ ಕ್ಯಾಮರಾಗಳಲ್ಲಿ ಕಳ್ಳರ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಸುಳಿವು ದೊರಕಿ ರಲಿಲ್ಲ. ಬಳಿಕ ನಾಗಮಂಗಲದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದಕವಾಗಿ ಓಡಾಡೋದನ್ನ ಗಮನಿಸಿದ ಪೊಲೀಸರು ಅದರಲ್ಲಿ ಒಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌.


ವಿಚಾರಣೆ ಸಂದರ್ಭ ಪೊಲೀಸರ ಮುಂದೆ ಸ್ಪೋಟಕ ಮಾಹಿತಿ:


ವಿಚಾರಣೆ ಬಳಿಕ ವಶಕ್ಕೆ ಪಡೆದಿದ್ದ ಆರೋಪಿ ಯುವಕ ಪ್ರಕರಣಗಳ ಕುರಿತು ಸ್ಪೋಟಕ ಮಾಹಿತಿಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಇಪ್ಪತ್ತಾರಕ್ಕೂ ಹೆಚ್ಚು ದರೋಡೆ ನಡೆಸಿರುವುದಾಗಿ ತಿಳಿಸಿದ್ದಾನೆ. ಹಿಗಾಗಿ ಇದರ ಜಾಡು ಹಿಡಿದು ಹೊರಟ ನಾಗಮಂಗಲದ ಡಿವೈಎಸ್‌ಪಿ ನವೀನ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕುಮಾರ್, ಲಿಖಿತ್  ಹಾಗೂ , ನಿಖಿಲ್ ಎಂಬ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ಸುಮಾರು ಎಂಟು ಪ್ರಕರಣಗಳಲ್ಲಿ ಚಿನ್ನಾಭರಣ ಕೊಡಲು ಪ್ರತಿರೋಧ ತೋರಿದವರಿಗೆ ಚಾಕುವಿನಿಂದ ಚುಚ್ಚಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾರೆ.


ಇದನ್ನೂ ಓದಿ: PM Cares: ಪಿಎಂ ಕೇರ್ಸ್​ ಹಣದಲ್ಲಿ ನೀಡಲಾದ 150 ವೆಂಟಿಲೇಟರ್​​ಗಳ ಪೈಕಿ 113 ನಿಶ್ಪ್ರಯೋಜಕ; ಬಾಂಬೆ ಹೈಕೋರ್ಟ್ ಕಿಡಿ!


ಬಂಧಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ:


ಮೂವರು ಆರೋಪಿಗಳನ್ನೂ ಬಂಧಿಸಿದ ಬಳಿಕ ಅವರ ಬಳಿ ಇದ್ದ ಸುಮಾರು 15 ಲಕ್ಷ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣಗಳು, ಒಂದು ಬಜಾಜ್ ಪಲ್ಸರ್ ಬೈಕ್, ಎನ್.ಎಸ್.200, ಒಂದು ಕೆಟಿಎಂ ಡ್ಯೂಕ್ ಬೈಕ್, ಹಾಗೂ ಒಂದು ಬಟನ್ ಚಾಕನ್ನು ಜಪ್ತಿ ಮಾಡಲಾಗಿದೆ.


ಹಲವು ಕೊಲೆ ಕೇಸುಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ:


ಮೂವರು ಆರೋಪಿಗಳಲ್ಲಿ ಕುಮಾರ್ ಎಂಬಾತ ಬಿಡದಿಯ ಬಳಿ ನಡೆದ ಕೊಲೆ ಕೇನಸಿನಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ನೀಡಿದ್ದಾನೆ. ಹಾಗೂ ಇವನ ಜೊತೆ ನಿಖಿಲ್ ಮತ್ತು ಲಿಖಿತ್ ಇಬ್ಬರು ಕೂಡ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಸದ್ಯ ಪೊಲೀಸರು ಈ ಬಗ್ಗೆ ವಿಚಾರಣೆ ಆರಂಭಿಸಿದ್ದು, ಬಂಧಿತರಿಂದ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುವುದಾಗಿ ತಿಳಿಸಿದ್ದಾರೆ. ಇನ್ನು ಈ ಪ್ರಕರಣವನ್ನ ಬೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಪ್ರಶಂಸಾನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು