HOME » NEWS » District » INSTRUCTION OF SURVEY OF MAHADAI PROJECT AND ESTIMATED PAPER SAYS MINISTER JAGADEESH SHETTAR RH

ಮಹದಾಯಿ ಯೋಜನೆಯ ಸರ್ವೇ, ಅಂದಾಜು ಪತ್ರಿಕೆ ತಯಾರಿಕೆಗೆ ಸೂಚನೆ; ಸಚಿವ ಜಗದೀಶ ಶೆಟ್ಟರ್

ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ ರೂ. ಯೋಜನಾ ವರದಿಯನ್ನು ಕರ್ನಾಟಕ ನೀರಾವರಿ ನಿಗಮವು ಸಿದ್ಧಪಡಿಸಿದೆ. ಈ ಕಾರ್ಯ ಸರ್ಕಾರ ಆದ್ಯತೆಯಡಿ ಕೈಗೆತ್ತಿಕೊಳ್ಳಲಿದೆ. ತುಪ್ಪರಿಹಳ್ಳ ನಿಯಂತ್ರಣಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಪೊಲ್ಲಾವರಂ ಯೋಜನೆಯಡಿ ನವಲಗುಂದ ತಾಲೂಕಿನ 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯಕ್ಕೆ 1 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ತಿಳಿಸಿದರು. 

news18-kannada
Updated:August 15, 2020, 5:01 PM IST
ಮಹದಾಯಿ ಯೋಜನೆಯ ಸರ್ವೇ, ಅಂದಾಜು ಪತ್ರಿಕೆ ತಯಾರಿಕೆಗೆ ಸೂಚನೆ; ಸಚಿವ ಜಗದೀಶ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್
  • Share this:
ಧಾರವಾಡ: ಮಹದಾಯಿ ಹಾಗೂ ಕಳಸಾ-ಬಂಡೂರಿ ಅಂತಿಮ ತೀರ್ಪು  ಪ್ರಕಟಿಸಿದ ಹಿನ್ನೆಲೆ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸರ್ವೇ ಕಾರ್ಯ, ಅಂದಾಜು ಪತ್ರಿಕೆ ತಯಾರಿಕೆಗೆ ಸೂಚಿಸಲಾಗಿದೆ. ಕಾಮಗಾರಿಗೆ ಖಾಸಗಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಾಗಿ 2020-21ರಲ್ಲಿ 463.40 ಕೋಟಿ ರೂ. ವಿನಿಯೋಗಿಸಲು ಅಂದಾಜಿಸಿದೆ. 885.80 ಕೋಟಿ ರೂ. ಕಳಸಾ ನಾಲಾ ತಿರುವಿಗೆ, 791.50 ಕೋಟಿ ರೂ. ಬಂಡೂರಿ ನಾಲಾ ತಿರುವಿಗೆ ಸದ್ಬಳಕೆಗೆ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ ರೂ. ಯೋಜನಾ ವರದಿಯನ್ನು ಕರ್ನಾಟಕ ನೀರಾವರಿ ನಿಗಮವು ಸಿದ್ಧಪಡಿಸಿದೆ. ಈ ಕಾರ್ಯ ಸರ್ಕಾರ ಆದ್ಯತೆಯಡಿ ಕೈಗೆತ್ತಿಕೊಳ್ಳಲಿದೆ. ತುಪ್ಪರಿಹಳ್ಳ ನಿಯಂತ್ರಣಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಪೊಲ್ಲಾವರಂ ಯೋಜನೆಯಡಿ ನವಲಗುಂದ ತಾಲೂಕಿನ 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯಕ್ಕೆ 1 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಭಾಷಣದಲ್ಲಿ ಅಂಬೇಡ್ಕರ್ ಹೆಸರು ಪ್ರಸ್ತಾಪಿಸದ ಶಶಿಕಲಾ ಜೊಲ್ಲೆ; ಡಿಎಸ್ಎಸ್ ಮುಖಂಡರ ಆಕ್ಷೇಪದ ಬಳಿಕ ಕ್ಷಮೆ ಕೋರಿದ ಸಚಿವೆ

ಏತ ನೀರಾವರಿ, ಕೆರೆ ತುಂಬುವ ಯೋಜನೆ ಇತರ ಕಾಮಗಾರಿಗಳಿಗೆ 400 ಕೋಟಿ ರೂ. ಶಕ್ಯತಾ ವರದಿ ಅನುಮೋದನೆಯಾಗಿದೆ. ಕರ್ನಾಟಕ ನೀರಾವರಿ ನಿಗಮವು ಡ್ರೋಣ್ ಕ್ಯಾಮರಾ ಹಾಗೂ ಡಿಜಿಟಲ್ ಜಿಪಿಎಸ್ ತಂತ್ರಜ್ಞಾನ ಬಳಸಿ ವಿಸ್ತೃತ ಯೋಜನಾ ವರದಿ ತಯಾರಿಸಲು 50 ಲಕ್ಷ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ. ಶೀಘ್ರದಲ್ಲಿಯೇ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದರು.
Published by: HR Ramesh
First published: August 15, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories