HOME » NEWS » District » INSPIRED BY SUDHAMOORTHY MYSORE CAB DRIVER INSURED THE ROAD MAK

ಸುಧಾಮೂರ್ತಿಯವರಿಂದ ಸ್ಪೂರ್ತಿ; ತನ್ನ ಮನೆ ಮುಂದಿನ ರಸ್ತೆಗೆ ವಿಮೆ ಮಾಡಿಸಿದ ಮೈಸೂರಿನ ಕ್ಯಾಬ್‌ ಚಾಲಕ

ಇನ್ಫೋಸಿಸ್‌ ಡಾ. ಸುಧಾಮೂರ್ತಿ ಅವರಿಂದ ಸ್ಫೂರ್ತಿ ಪಡೆದಿರುವ ಕ್ಯಾಬ್ ಚಾಲಕ ವಾಸು ತನ್ನ ಮನೆ ಮಂದಿನ ರಸ್ತೆಗೆ ವಿಮೆ ಮಾಡಿಸಿದ್ದಾರೆ. 3.23 ಲಕ್ಷಕ್ಕೆ ವಿಮೆ ಮಾಡಿಸಿದ್ದು, ವರ್ಷಕ್ಕೆ 889 ರೂ. ಕಟ್ಟುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

news18-kannada
Updated:July 2, 2020, 7:29 PM IST
ಸುಧಾಮೂರ್ತಿಯವರಿಂದ ಸ್ಪೂರ್ತಿ; ತನ್ನ ಮನೆ ಮುಂದಿನ ರಸ್ತೆಗೆ ವಿಮೆ ಮಾಡಿಸಿದ ಮೈಸೂರಿನ ಕ್ಯಾಬ್‌ ಚಾಲಕ
ವಿಮೆ ಮಾಡಲಾಗಿರುವ ರಸ್ತೆ.
  • Share this:
ಮೈಸೂರು (ಜುಲೈ 02); ಮನುಷ್ಯನ ಜೀವಕ್ಕೆ, ಜನ ಓಡಾಡೋ ಗಾಡಿಗೆ ಇನ್ಸ್ಶೂರೆನ್ಸ್ ಮಾಡೋದನ್ನ ನೋಡಿದ್ದೀವಿ. ಅಷ್ಟೆ ಏಕೆ ಪ್ರಾಣಿಗಳು ಹಾಗೂ ತಮ್ಮಿಷ್ಟದ ವಸ್ತುಗಳಿಗೂ ಇನ್ಸ್ಶೂರೆನ್ಸ್ ಮಾಡಲು ಅವಕಾಶ ಇದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮನೆಯ ಎದುರಿನ ರಸ್ತೆಗೂ ವಿಮೆ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ರಸ್ತೆಗೂ ವಿಮೆ ಮಾಡಿಸಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಈತನ ಹೆಸರು ವಾಸು. ಮೈಸೂರಿನ ಬೋಗಾದಿ ಎರಡನೇ ಹಂತದ ನಿವಾಸಿ, ಹೊಟ್ಟೆ ಪಾಡಿಗಾಗಿ ಕ್ಯಾಬ್ ಚಾಲನೆ ಈತನ ವೃತ್ತಿ. ಕ್ಯಾಬ್ ಚಾಲಕರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ದುಡಿಯುವುದೇ ದೊಡ್ಡ ವಿಚಾರವಾಗಿರುವ ಈ ದಿನಗಳಲ್ಲಿ, ಇನ್ಫೋಸಿಸ್‌ ಡಾ. ಸುಧಾಮೂರ್ತಿ ಅವರಿಂದ ಸ್ಫೂರ್ತಿ ಪಡೆದಿರುವ ಕ್ಯಾಬ್ ಚಾಲಕ ವಾಸು ತನ್ನ ಮನೆ ಮಂದಿನ ರಸ್ತೆಗೆ ವಿಮೆ ಮಾಡಿಸಿದ್ದಾರೆ. 3.23 ಲಕ್ಷಕ್ಕೆ ವಿಮೆ ಮಾಡಿಸಿದ್ದು, ವರ್ಷಕ್ಕೆ 889 ರೂ. ಕಟ್ಟುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಆಧುನಿಕತೆಯಲ್ಲಿ' ಹೊಸ ಹೊಸ ರೋಗ, ಹೊಸ ಹೊಸ ನಿಯಮ ಎಲ್ಲವು ಜನರನ್ನ ಸಾಕಷ್ಟು ತಲೆಕೆಡಿಸಿದೆ. ಈ ಮಧ್ಯೆ ಜನಪ್ರತಿನಿಧಿಗಳು ಸಹ ಮನೆಯಿಂದ ಹೊರಗೆ ಬರೋದಕ್ಕೆ ಆತಂಕ ವ್ಯಕ್ತಪಡಿಸಿದ್ದು, ತಮ್ಮ ಕ್ಷೇತ್ರದಲ್ಲಿ ಏನಾಗ್ತಿದೆ ಎಂಬುದು ಸಹ ಗೊತ್ತಾಗ್ತಿಲ್ಲ. ಈ ನಡುವೆ  ವ್ಯಕ್ತಿಯೊಬ್ಬರು ಸರ್ಕಾರಕ್ಕೆ ತಾವೇ ಸಹಾಯ ಮಾಡುವ ಹೆಜ್ಜೆ ಇಟ್ಟಿದ್ದು ತಮ್ಮ ಮನೆಯ 96 ಮೀ ನಷ್ಟು ರಸ್ತೆಗೆ ಇನ್ಶುರೆನ್ಸ್ ಮಾಡಿಸಿ ಹೊಸ ಭಾಷ್ಯ ಬರೆದಿದ್ದಾರೆ.

ಇದನ್ನೂ ಓದಿ : ಪುಸ್ತಕ ನೀಡುವ ನೆಪದಲ್ಲಿ ಡೊನೇಷನ್ ವಸೂಲಿ ದಂಧೆ; ಕೊಡಗಿನಲ್ಲಿ ಖಾಸಗಿ ಶಾಲೆಗಳ ದರ್ಪಕ್ಕೆ ಬೆಚ್ಚಿದ ಪೋಷಕರು
Youtube Video

"ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವೂ ಸಹ ಸರ್ಕಾರಕ್ಕೆ ಹಾಗೂ ಸಮಾಜ್ಕಕೆ ನಮ್ಮ ಕೈಲಾದ ಏನಾದರೂ ಸಹಾಯ ಮಾಡಬೇಕು. ರಸ್ತೆಯ ವಿಮೆಗಾಗಿ ನಾನೇ ಹಣ ತುಂಬುತ್ತಿದ್ದೇನೆ. ಆದರೆ, ರಸ್ತೆಯ 10ಮನೆಯವರು 100ರೂ ಕೊಟ್ರೆ ಯಾರಿಗೂ ಹೊರೆಯಾಗುವುದಿಲ್ಲ. ಅಲ್ಲದೆ, ಎಲ್ಲರ ಮನೆ ಎದುರಿನ ರಸ್ತೆಯೂ ಸುಸ್ಥಿತಿಯಲ್ಲಿರುತ್ತದೆ" ಎಂಬುದು ವಾಸು ಅವರ ಅಭಿಮತ.
First published: July 2, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories