ಆನೇಕಲ್; ಮಳೆ ನೀರಿನ ಜೊತೆ ಕೆರೆಗೆ ಕೈಗಾರಿಕೆಗಳ ಕಲುಷಿತ ನೀರು, ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಕೈಗಾರಿಕೆಗಳ ಕಲುಷಿತ ನೀರು ಅಂತರ್ಜಲವನ್ನು ಸಹ ಕಲುಷಿತಗೊಳಿಸಿದೆ‌. ಕೊಳವೆ ಬಾವಿ ನೀರನ್ನು ಕುಡಿಯುವುದಿರಲಿ ಸ್ನಾನ ಮಾಡಿದರು ಚರ್ಮ ರೋಗಗಳು ಜನರನ್ನು ಬಾದಿಸುತ್ತಿವೆ. ಹಾಗಾಗಿ ಸರ್ಕಾರ ಕೆಮಿಕಲ್ ಕೈಗಾರಿಕೆಗಳ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ದೇವಪ್ಪ ಒತ್ತಾಯಿಸಿದ್ದಾರೆ.

news18-kannada
Updated:October 16, 2020, 3:33 PM IST
ಆನೇಕಲ್; ಮಳೆ ನೀರಿನ ಜೊತೆ ಕೆರೆಗೆ ಕೈಗಾರಿಕೆಗಳ ಕಲುಷಿತ ನೀರು, ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಕೆರೆಗೆ ಸೇರ್ಪಡೆಯಾಗುತ್ತಿರುವ ಕೈಗಾರಿಕೆಯ ನೀರು.
  • Share this:
ಆನೇಕಲ್: ಒಂದು ಕಾಲದಲ್ಲಿ ರೈತನ‌ ಜೀವನಾಡಿಗಳಂತಿದ್ದ ಕೆರೆಗಳು ಇಂದು ಕೈಗಾರಿಕೆಗಳ ತ್ಯಾಜ್ಯ ಸುರಿಯುವ ಕೇಂದ್ರಗಳಾಗುತ್ತಿವೆ. ಅದರಲ್ಲೂ ಕೈಗಾರಿಕೆಗಳ ಆಸುಪಾಸಿನಲ್ಲಿರುವ ಕೆರೆಗಳಂತು ವಿಷಮಯವಾಗಿ ರೂಪುಗೊಳ್ಳುತ್ತಿದ್ದು, ಅಂತರ್ಜಲ ಸೇರಿದಂತೆ ಜನ ಜಾನುವಾರುಗಳಿಗೆ ಮಾರಕವಾಗುತ್ತಿವೆ. ಹೌದು ಕೈಗಾರಿಕೆಗಳ ಹಾನಿಕಾರಕ ಕಲುಷಿತ ನೀರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕೋನಸಂದ್ರ ಕೆರೆಗೆ ಸೇರುತ್ತಿದೆ. ಈ ಕೆರೆಗೆ ಹೊಂದಿಕೊಂಡಂತೆ ಜಿಗಣಿ ಕೈಗಾರಿಕಾ ಪ್ರದೇಶವಿದೆ. ಇಲ್ಲಿ ಒಂದು ಗಂಟೆ ಮಳೆ ಸುರಿದರೆ ಒಂದು ವಾರಗಳ ಕಾಲ ಕೆರೆಗೆ ನೀರು ಹರಿದು ಬರುತ್ತದೆ. ಅದು ಶುದ್ಧ ಮಳೆ ನೀರಲ್ಲ. ಕೈಗಾರಿಕೆಗಳ ಕಾರ್ಕೋಟಕ ವಿಷ. ಇದರಿಂದ ಇಡೀ ಕೆರೆ ಮಲಿನಗೊಂಡು ವಿಷ ಕಾರುತ್ತಿದೆ.

ಹಾನಿಕಾರಕ ನೀರನ್ನು ಕೆರೆಗೆ ಹರಿ ಬಿಡುವ ಕಾರ್ಖಾನೆಗಳ ಮೇಲೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮುನಿರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಜಿಗಣಿ ಕೈಗಾರಿಕಾ ಪ್ರದೇಶದ ಹೈಕಲ್ ಮತ್ತು ಕುಮಾರ್ ಆರ್ಗ್ಯಾನಿಕ್ ಕಂಪನಿ ಸೇರಿದಂತೆ ಹಲವು ಕೆಮಿಕಲ್ ಕಂಪನಿಗಳು ಕೆಮಿಕಲ್ ಮಿಶ್ರಿತ ರಾಸಾಯನಿಕ ನೀರನ್ನು ಮಳೆ ನೀರಿನ ಜೊತೆಗೆ ಕೆರೆಗೆ ಹರಿಸುತ್ತಾರೆ. ಇದರಿಂದ ಜಲಚರಗಳು ಸಾವನ್ನಪ್ಪಿವೆ. ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧ ಬಲ್ವಿಂದರ್ ಸಿಂಗ್

ಕೈಗಾರಿಕೆಗಳ ಕಲುಷಿತ ನೀರು ಅಂತರ್ಜಲವನ್ನು ಸಹ ಕಲುಷಿತಗೊಳಿಸಿದೆ‌. ಕೊಳವೆ ಬಾವಿ ನೀರನ್ನು ಕುಡಿಯುವುದಿರಲಿ ಸ್ನಾನ ಮಾಡಿದರು ಚರ್ಮ ರೋಗಗಳು ಜನರನ್ನು ಬಾದಿಸುತ್ತಿವೆ. ಹಾಗಾಗಿ ಸರ್ಕಾರ ಕೆಮಿಕಲ್ ಕೈಗಾರಿಕೆಗಳ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ದೇವಪ್ಪ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ಸುತ್ತಮುತ್ತಲಿನ ಅದೆಷ್ಟೋ ಕೆರೆಗಳು‌ ಕಾಣೆಯಾಗಿವೆ. ಮುಂದಿನ ಪೀಳಿಗೆ ಉಳಿಸಬೇಕಾದ್ದದ್ದು, ಸಾರ್ವಜನಿಕರು ಮತ್ತು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮವಹಿಸಬೇಕಿದೆ.
Published by: MAshok Kumar
First published: October 16, 2020, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading