ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್ ಆಯೋಜನೆ ; ಸಚಿವ ಜಗದೀಶ್ ಶೆಟ್ಟರ್

ರಾಜ್ಯ ಸರ್ಕಾರ ಬರುವ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲಿದೆ

news18-kannada
Updated:June 30, 2020, 9:34 PM IST
ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್ ಆಯೋಜನೆ ; ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ(ಜೂ.30): ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಐಡಿಬಿ ಹಾಗೂ ಕೆಎಸ್.ಎಸ್.ಐ.ಡಿ.ಸಿ ಸೇರಿದಂತೆ ಹಲವು ಕೈಗಾರಿಕಾ ಪ್ರದೇಶಗಳ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿವೆ. ಇವುಗಳಲ್ಲಿ ಬಹುಪಾಲು ವ್ಯಾಜ್ಯಗಳನ್ನು ಸುಲಭವಾಗಿ ಇತ್ಯರ್ಥಗೊಳಿಸಬಹುದು. ಆದ್ದರಿಂದ ಪ್ರತಿ ಜಿಲ್ಲಾ ಹಂತದಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲು ಯೋಚಿಸಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯ ಗಾಮನಗಟ್ಟಿ ಕೈಗಾರಿಕಾ ವಸಹಾತು ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೀಕ್ಷಣೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದಾದ್ಯಂತ ಹಲವು ಕೈಗಾರಿಕಾ ವಾಜ್ಯಗಳು ಬಹು ವರ್ಷಗಳಿಂದ ಬಗೆ ಹರಿಯದೆ ಉಳಿದೆವೆ. ಇವನ್ನು ದಾವೆದಾರ ಸಮಕ್ಷದಲ್ಲಿ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಲಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಬರುವ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಕೈಗಾರಿಕಾ ಅದಾಲತ್ ಆಯೋಜಿಸಲಿದೆ ಎಂದರು.

ಗಾಮನಗಟ್ಟಿ ವಾಸಹಾತು ವಸತಿ ಸಮುಚ್ಚಯಗಳ ಹಂಚಿಕೆ

ಗಾಮನಗಟ್ಟಿ ವಸಹಾತು ಪ್ರದೇಶದಲ್ಲಿ ಕೆಐಡಿಬಿ ವತಿಯಿಂದ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ಭೇಟಿ ನೀಡಿದ ಅವರು. ಕೆಐಡಿಬಿ ವತಿಯಿಂದ 108  ಸಿಂಗಲ್ ಬಿ ಹೆಚ್​ಕೆ  ಹಾಗೂ 72 ಡಬಲ್ ಬಿಹೆಚ್​​ಕೆ ವಸತಿಗಳನ್ನು ನಿರ್ಮಿಸಲಾಗಿದೆ.  ಶೀಘ್ರವಾಗಿ ವಸತಿ ಸಮುಚ್ಚಯಗಳ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸಿಂಗಲ್ ಬಿ ಹೆಚ್​ಕೆ 11 ಲಕ್ಷ ಹಾಗೂ ಡಬಲ್ ಬಿ ಹೆಚ್​ಕೆ 14 ಲಕ್ಷ ರೂಪಾಯಿಗಳ ದರ ನಿಗದಿ ಮಾಡಲಾಗಿದ್ದು, ಕೈಗಾರಿಕಾ ವಸಹಾತುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು. ಕೈಗಾರಿಕೋದ್ಯಮಿಗಳು ಸದ್ಯ ನಿಗದಿಪಡಿಸಿರುವ ದರ ಅಧಿಕವಾಗಿದೆ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಮುಂದಿನ ಕೆಐಡಿಬಿ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 ನೂಲ್ವಿ ಕ್ರಾಸ್ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೀಕ್ಷಣೆ ನಡೆಸಿದ ಸಚಿವರು ನೂಲ್ವಿ ಕ್ರಾಸ್ ಬಳಿ ಮೇಲು ಸೇತುವೆ ನಿರ್ಮಿಸುವಂತೆ ನೂಲ್ವಿ ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಿ, ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂಲಕ ಪ್ರಸ್ತವಾನೆಯನ್ನು ಸಲ್ಲಿಸಲಾಗುವುದು. ನೂಲ್ವಿ ಕ್ರಾಸ್ ರಸ್ತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣದ ನೀಲನಕ್ಷೆಯನ್ನು ಸಿದ್ದಪಡಿಸಲಾಗುವುದು ಎಂದರು.ಇದನ್ನೂ ಓದಿ :  ಸುಂದರ ಸಂಸಾರ ರೂಪಿಸಲು ಹೋದ ಕುಟುಂಬ ಬಾಲ್ಯ ವಿವಾಹ ಕುಣಿಕೆಯಲ್ಲಿ ; ಅಧಿಕಾರಿಗಳ ಸಮ್ಮತಿಗೆ ಮದುವೆ ನಿಲ್ಲಿಸಿದ ಕುಟುಂಬ

ಹುಬ್ಬಳ್ಳಿ ನಗರದ ವರ್ತುಲ ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 15 ಕಿ.ಮಿ. ವರ್ತುಲ ರಸ್ತೆಯಲ್ಲಿ 12.5 ಕಿ.ಮೀ. ರಸ್ತೆಯನ್ನು ಈಗಾಗಲೇ ನಿರ್ಮಿಸಿದೆ. ಗಬ್ಬೂರು ಬಳಿಯ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಇದ್ದು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು.

 

 

ವರ್ತುಲ ರಸ್ತೆ ನಿರ್ಮಾಣದಿಂದ ಕಾರವಾರ, ಗದಗ ಹಾಗೂ ವಿಜಯಪುರ ರಸ್ತೆಗಳಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಲಭಿಸಲಿದೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ನಗರದ ನಡುವೆ 6 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading