ಗದಗ: ತಾಲಿಬಾನಿಗಳಿಗೆ ವಿರೋಧವಾಗಿ ನಡೆದುಕೊಂಡವರನ್ನಂತೂ ಭೀಕರವಾಗಿ ಕೊಲ್ಲಲಾಗ್ತಿದೆ. ಇದೆಲ್ಲದರ ಮಧ್ಯೆ ಭಾರತದ ಸೈನಿಕರು ಏರ್ ಲಿಫ್ಟ್ ಮೂಲಕ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಆದರೆ ನಮ್ಮ ಭಾರತದ ಕೆಲ ಯೋಧರು ಆ ನರಕ ಲೋಕದಿಂದ ತಪ್ಪಿಸಿಕೊಂಡು ಬಂದಿದ್ದೇ ನಿಜಕ್ಕೂ ಒಂದು ಪವಾಡ. 200 ಭಾರತೀಯ ಯೋಧರನ್ನ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದೆಯಂತೆ. ಇವರ ಮಧ್ಯೆ ಕರ್ನಾಟಕದ ಯೋಧರು ಸಹ ತವರಿಗೆ ಸುರಕ್ಷಿತವಾಗಿ ಮರಳಿ ಬಂದಿದ್ದು ಯೋಧರ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ರವಿ ನೀಲಗಾರ ಸಹ ಅಫ್ಘನ್ ದೇಶದಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಹನ್ನೆರಡು ವರ್ಷಗಳ ಹಿಂದೆಯೇ ITBP (ಇಂಡೋ ಟೆಬೆಟಿಯನ್ ಬಾರ್ಡರ್ ಪೊಲೀಸ್) ಪಡೆಗೆ ಆಯ್ಕೆಯಾಗಿರೋ ರವಿ, ಎರಡು ವರ್ಷಗಳಿಂದ ಅಫ್ಘನ್ ಗಡಿಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ರು. ಆದ್ರೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದೇ ತಡ ಭಾರತೀಯ ಸೈನ್ಯವನ್ನ ಭಾರತ ಸರ್ಕಾರ ತವರಿಗೆ ಕರೆಸಿಕೊಂಡಿದೆ. ಹೀಗೆ ಯೋಧ ರವಿ ನೀಲಗಾರ ಸಹ ತವರಿಗೆ ಬಂದಿದ್ದು, ತಮ್ಮ ಕುಟುಂಬದ ಜೀವವೊಂದು ಜೀವನ್ಮರಣದ ಹೋರಾಟ ನಡೆಸಿ ಬದುಕಿ ಬಂದಿರೋ ಕಥೆಯನ್ನು ಅವರ ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಾ ಹಂಚಿಕೊಂಡಿದ್ದಾರೆ.
ಇನ್ನು ಕಾಬೂಲ್ಗೆ ತಾಲಿಬಾನಿಗಳ ಎಂಟ್ರಿಯಾಗುತ್ತಲೇ ಭಾರತೀಯ ಸೇನೆ ಸ್ವದೇಶಕ್ಕೆ ಮರಳಲು ನಿರ್ಧರಿಸಿತ್ತು. ಆದರೂ ಸಹ ಅದೆಲ್ಲೆಂದಿಲೋ ರಕ್ಕಸರು 200 ಸೈನಿಕರ ಮೇಲೆ ಅಟ್ಯಾಕ್ ಮಾಡಿದರು. ಈ ವೇಳೆ ಗದಗ ಸೈನಿಕ ರವಿ ನೀಲಗಾರ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.ಯೋಧರ ಹತ್ತಿರವಿದ್ದ ಎಲ್ಲ ಲಗೇಜ್ ಗಳನ್ನೂ ತಾಲಿಬಾನಿಗಳು ಕಸಿದುಕೊಂಡಿದ್ದಾರೆ. ಅಲ್ಲದೇ ಯೋಧ ರವಿ ತನ್ನ ಮನೆಗೆಂದು ಖರೀದಿಸಿದ್ದ ಹೊಸ ಟಿವಿಯನ್ನೂ ಸಹ ತಾಲಿಬಾನಿ ಉಗ್ರರು ಕಸಿದುಕೊಂಡು ವಿಕೃತಿ ಮೆರೆದಿದ್ದಾರೆ. ಹೀಗಾಗಿ ಜೀವ ಉಳಿದ್ರೆ ಸಾಕು ಅಂತ ಕೈಯಲ್ಲಿದ್ದ ಎಲ್ಲವನ್ನೂ ತಾಲಿಬಾನಿಗಳಿಗೆ ಒಪ್ಪಿಸಿ ಯೋಧ ಫ್ಲೈಟ್ ಹತ್ತಿದರು. ಈ ಭಯಾನಕ ಹಾಗೂ ಭೀಕರ ಘಟನೆಯನ್ನ ಯೋಧ ರವಿ ತಮ್ಮ ಕುಟುಂಬ ಸದಸ್ಯರ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮ ಊರಿನ ಮಗ ಸೇಫ್ ಆಗಿ ವಾಪಾಸ್ ಬಂದಿರೋದಕ್ಕೆ ನಮಗೆ ಜೀವ ಮರಳಿ ಬಂದಂತಾಗಿದೆ ಎನ್ನುತ್ತಿದ್ದಾರೆ ಯೋಧನ ಸಂಬಂಧಿಕರು.
ಇದನ್ನೂ ಓದಿ: RCB- ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ವಿಶ್ವದ ಅತಿಕಿರಿಯ ಬೌಲರ್ ಈಗ ಆರ್ಸಿಬಿ ತಂಡಕ್ಕೆ
ಅಬ್ಬಬ್ಬಾ.. ನಮ್ಮ ಭಾರತದ ಸೈನಿಕರಿಗೆ ಎಂಥ ಕಠಿಣಾತಿ ಕಠಿಣ ಪರಿಸ್ಥಿತಿ ಅಲ್ವಾ. ಕೈಯಲ್ಲಿ ಬಂದೂಕಿದ್ರೂ ಎದುರಾಳಿಗಳಿಗೆ ಹೊಡೆಯೋ ಹಾಗಿಲ್ಲ. ತಮ್ಮದೇ ಪ್ರಾಣಕ್ಕೆ ಕುತ್ತು ಬಂದ್ರೂ ರಕ್ಷಿಸಿಕೊಳ್ಳುವ ಹಾಗಿಲ್ಲ. ಅದೆಷ್ಟೇ ಕಿಚ್ಚಿದ್ರೂ ಕಿತ್ತು ತಿನ್ನುವ ರಣಹದ್ದುಗಳಿಗೆ ಶಾಂತಿ ಮಂತ್ರ ಹೇಳಿ ಬಂದಿದ್ದಾರೆ. ಅಕಸ್ಮಾತ್ ಸೈನಿಕರಿಗೆ ಎದುರಾಳಿ ಹೊಡೆಯೋ ಪರಮಾಧಿಕಾರ ಏನಾದ್ರೂ ಇದ್ದಿದ್ರೆ ನಮ್ಮ ಸೈನಿಕರು ತಾಲಿಬಾನಿಗಳ ಹುಟ್ಟಡಗಿಸಿ ಬರುತ್ತಿದ್ದರೇನೋ. ಅದೇನೇ ಇರಲಿ, ನಮ್ಮ ಪಾಲಿನ ಯೋಧರು ಸುರಕ್ಷಿತವಾಗಿ ಇಂದು ನಮ್ಮ ಬಳಿ ಬಂದು ಸೇರಿದ್ದಾರೆ. ಇದಕ್ಕಿಂತ ನೆಮ್ಮದಿ ಮತ್ತೊಂದಿಲ್ಲ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ