ಬಾಗಲಕೋಟೆ ಯುವ ಕಲಾವಿದನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ; ಸೂಕ್ಷ್ಮ ಕಲೆಗೆ ಒಲಿದ ಮನ್ನಣೆ

ಏನಾದರೂ ಸಾಧಿಸಬೇಕೆಂದು ಸತತ ಪ್ರಯತ್ನ ಮಾಡಿ, ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ 8ಜನ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರವನ್ನು ಸೂಕ್ಷ್ಮ ಕಲೆಯ ಮೂಲಕ ರಚಿಸಿದ್ದು, ನೋಡುಗರಿಗೆ ಇದು ಪ್ರಿಂಟ್ ತೆಗೆಸಿದ್ದಾರೆನೋ ಎನ್ನುವಂತೆ ಕಂಡು ಬರುತ್ತದೆ. ಆ ರೀತಿ ತಮ್ಮ ಕೈಚಳಕ ತೋರಿಸಿದ್ದಾರೆ ಬಾಗಲಕೋಟೆಯ ಕಲಾವಿದ ವಿಜಯ್.

news18-kannada
Updated:September 4, 2020, 7:15 AM IST
ಬಾಗಲಕೋಟೆ ಯುವ ಕಲಾವಿದನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ; ಸೂಕ್ಷ್ಮ ಕಲೆಗೆ ಒಲಿದ ಮನ್ನಣೆ
ಕಲಾವಿದನ ಸೂಕ್ಷ್ಮ ಕಲೆ ಕೈಚಳಕ.
  • Share this:
ಬಾಗಲಕೋಟೆ; ಸಾಧಿಸುವ ಛಲವೊಂದಿದ್ದರೇ ಏನು ಬೇಕಾದರೂ ಸಾಧಿಸಬಹುದು, ಸತತ ಪ್ರಯತ್ನ,ಕಠಿಣ ಪರಿಶ್ರಮ,ಶ್ರದ್ಧೆಯಿಂದ ಸಾಧನೆವೇನು ಕಷ್ಟವಲ್ಲ.ಕಲಾವಿದ ಕೂಡಾ ತನ್ನ ಕ್ಷೇತ್ರದಲ್ಲಿ ಸಾಧಿಸಿ,ಎಲ್ಲರ ಗಮನಸೆಳೆಬೇಕೆಂದುಕೊಂಡಿರುತ್ತಾರೆ. ಉನ್ನತವಾದ ಪ್ರಶಸ್ತಿ, ಗೌರವ ಸಿಕ್ಕರೆ, ಕಲಾವಿದರಿಗೆ ಸಿಗುವ  ಮತ್ತೊಂದು ಗೌರವವಿಲ್ಲ. ಕೊರೋನಾ ಲಾಕ್‌ಡೌನ್  ಸಂದರ್ಭದಲ್ಲಿ ಸಮಯ ಸದುಪಯೋಗಪಡಿಸಿಕೊಂಡು ಬಾಗಲಕೋಟೆಯಲ್ಲಿ ಕಲಾವಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ ಮುಡಿಗೇರಿಸಿಕೊಂಡಿದ್ದಾನೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಮದ ಯುವ ಕಲಾವಿದ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ದಾಖಲಿಸಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದಾನೆ. ಹಿರೇಬಾದವಾಡಗಿ ಗ್ರಾಮದ ವಿಜಯ್ ರಮೇಶ್ ಬೋಳಶೆಟ್ಟಿ ಎಂಬ ಯುವ ಕಲಾವಿದ ಸಾಧನೆಗೈದಿದ್ದು ಇದೀಗ ಪ್ರಶಂಸೆ ಮಹಾಪೂರವೇ ಹರಿದುಬರುತ್ತಿದೆ.

ಕಲೆಯನ್ನೇ ಉಸಿರಾಗಿಸಿಕೊಂಡಿರುವ ವಿಜಯ್ , 8ಜನ ಕನ್ನಡದ  ಜ್ಞಾನಪೀಠ ಪುರಸ್ಕೃತರ ಭಾವಚಿತ್ರವನ್ನು  ಶರ್ಟ್ ಬಟನ್ ಸೈಜ್ 8ಮಿಲಿ ಮೀಟರ್ ಪೇಪರ್ ತುಣುಕಿನಲ್ಲಿ ಪೋಸ್ಟರ್ ವರ್ಣದಿಂದ ಒಂದೇ ಕೂದಲಳತೆ ಬ್ರೇಸ್ ಸಹಾಯದಿಂದ ರಚಿಸಿ, ಗಮನಸೆಳೆದಿದ್ದಾರೆ. ಈ ಒಂದು ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿಸಿಕೊಂಡು ಸೈ ಎನಿಸಿಕೊಂಡಿದ್ದಾನೆ. ಇನ್ನು ವಿಶೇಷ ಎಂದರೆ ವಿಜಯ್ ಅವರು ತಲಾ ಒಂದು ಭಾವಚಿತ್ರ ರಚಿಸಲು  20ನಿಮಿಷ ತೆಗೆದುಕೊಂಡಿದ್ದಾರೆ.

ಇನ್ನು 8ಜನ ಸಾಹಿತಿಗಳ ಭಾವಚಿತ್ರವನ್ನು ಸೂಕ್ಷ್ಮ ಕಲೆಯ ಮೂಲಕ ರಚಿಸಿದ್ದು ಹೆಮ್ಮೆ ಪಡುವ ಸಂಗತಿ,ಇನ್ನು ವಿಜಯ್ ರಮೇಶ್ ಬೋಳಶೆಟ್ಟಿ   ಬಡತನದ ಮಧ್ಯೆ ಅರಳಿದ ಕಲಾ ಪ್ರತಿಭೆ. ಚಿಕ್ಕಂದಿನದಿಂದಲೇ ಕಲೆಯತ್ತ ವಾಲಿದ ಮನಸ್ಸು, ಅದರಲ್ಲೇ ಏನಾದರೂ ಸಾಧಿಸಬೇಕು ಎನ್ನುವ ತುಡಿತ ಹೊಂದಿರುವ ಯುವ ಕಲಾವಿದ. ಪ್ರಾಥಮಿಕ ಶಾಲಾ ಹಂತದಲ್ಲಿ ಚಿತ್ರಕಲೆ ಆಸಕ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿ ಕಲಾ ವಿಷಯವನ್ನೇ ಆಯ್ಕೆ ಮಾಡಿಕೊಂಡ ವಿಜಯ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿವಿಎ ಪದವಿ ಮುಗಿಸಿ, ನಂತರ  2017ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದಲ್ಲಿ ಸ್ನಾತಕೋತ್ತರ ಎಂವಿಎಯನ್ನು ಮುಗಿಸಿದರೊಂದಿಗೆ ಡಿಪ್ಲೋಮಾ ಜರ್ನಲಿಸಂ ಪದವಿ ಪಡೆದುಕೊಂಡಿದ್ದಾರೆ.

ಸದ್ಯ ಹುನಗುಂದ ಖಾಸಗಿ ಪಬ್ಲಿಕ್ ಸ್ಕೂಲ್ ನಲ್ಲಿ ಅರೆಕಾಲಿಕ ಚಿತ್ರಕಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರೊಟ್ಟಿಗೆ ವಿವಿಧ ಬಗೆಯ ಕಲಾಕೃತಿ ರಚನೆ, ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಗ್ಗೆ ಮಾಹಿತಿ ಹಂಚಿಕೊಂಡು ಪ್ರೋತ್ಸಾಹ ನೀಡುತ್ತಿದ್ದಾರೆ. ಇನ್ನು ಚಿತ್ರಕಲೆಯ ಪ್ರಕಾರಗಳಾದ ರೇಖಾಚಿತ್ರ, ಅಮೂರ್ತ ಕಲೆ, ವ್ಯಂಗ್ಯ ಚಿತ್ರ,ನಿಸರ್ಗ ಚಿತ್ರ,ವ್ಯಕ್ತಿ ಚಿತ್ರ, ಸ್ಪೀಡ್ ಪೆಂಟಿಂಗ್, ಕ್ಲೇ ಮಾಡ್ಲಿಂಗ್ ಪೇಪರ್ ಕ್ರಾಫ್ಟಿಂಗ್, ಹೀಗೆ ವಿವಿಧ ಕಲಾಪ್ರಕಾರಗಳಲ್ಲಿ ಛಾಪು ಮೂಡಿಸಿದ್ದಾರೆ.ಇನ್ನು ರಾಜ್ಯ ಮಟ್ಟದ ಗಣೇಶ್ ಪೇಂಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ‌ಹಾಗೂ ಟಾಪ್ ಟೆನ್ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.

ದೆಹಲಿ, ಹೈದರಾಬಾದ್,ಗೋವಾ,ಹೀಗೆ ರಾಜ್ಯ,ಹೊರ ರಾಜ್ಯ ಗಳಲ್ಲಿ ಏಕೆ ವ್ಯಕ್ತಿ,ಸಮೂಹ ಕಲಾ ಪ್ರದರ್ಶನ ಮಾಡಿದ್ದಾರೆ.ಈಚೆಗೆ ಗೋವಾ ರಾಜ್ಯದಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಪ್ರಾನ್ಸ್ ದೇಶದ ಮಹಿಳೆಯೊಬ್ಬರು ರೈತನ ಮಿತ್ರ ಎತ್ತು ಕಲಾಕೃತಿಯನ್ನು 18ಸಾವಿರಗೆ ಖರೀದಿಸಿದ್ದಾರೆ. ರಾಜ್ಯಮಟ್ಟದ ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ, ಹುನಗುಂದ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಮೋದಿ ವೈಫಲ್ಯವನ್ನು ಮುಚ್ಚಿಹಾಕಲು ಯಡಿಯೂರಪ್ಪ ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ; ಸಿದ್ದರಾಮಯ್ಯ ಕಿಡಿ

ಇದೀಗ ಏನಾದರೂ ಸಾಧಿಸಬೇಕೆಂದು ಸತತ ಪ್ರಯತ್ನ ಮಾಡಿ, ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ 8ಜನ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರವನ್ನು ಸೂಕ್ಷ್ಮ ಕಲೆಯ ಮೂಲಕ ರಚಿಸಿದ್ದು, ನೋಡುಗರಿಗೆ ಇದು ಪ್ರಿಂಟ್ ತೆಗೆಸಿದ್ದಾರೆನೋ ಎನ್ನುವಂತೆ ಕಂಡು ಬರುತ್ತದೆ. ಆ ರೀತಿ ತಮ್ಮ ಕೈಚಳಕ ತೋರಿಸಿದ್ದಾರೆ.

8ಜನ ಸೂಕ್ಷ್ಮ  ಭಾವಚಿತ್ರ (ಮೈಕ್ರೋ ಪ್ರೋಟೆಟ್ ಆರ್ಟ್) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ.ಜೂನ್ 23ರಂದು  ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2020  ಕಲಾಕೃತಿ ಆಯ್ಕೆ ಆಗಿರುವ ಬಗ್ಗೆ ಇಮೇಲ್ ಸಂದೇಶ ಕಳುಹಿಸಿದ್ದಾರೆ‌. ಆಗಸ್ಟ್ 9ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2020 ಮೆಡಲ್ , ಪ್ರಶಸ್ತಿ ಪತ್ರ ಪಡೆದುಕೊಂಡಿದ್ದು, ಈ ಗೌರವ ಸಿಕ್ಕಿದ್ದಕ್ಕೆ  ತುಂಬಾ ಸಂತೋಷವಾಗಿದೆ ಎಂದು ನ್ಯೂಸ್ 18ನೊಂದಿಗೆ ಮಾತನಾಡುತ್ತಾ ವಿಜಯ್ ರಮೇಶ್ ಬೋಳಶೆಟ್ಟಿ ಹಂಚಿಕೊಂಡಿದ್ದಾರೆ .26ನೇ ವಯಸ್ಸಿನಲ್ಲಿ ಇಂತಹದ್ದೊಂದು ಸಾಧನೆ ಮಾಡುವ ಮೂಲಕ ಹಿರೇಬಾದವಾಡಗಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಕ್ಕೆ ಗ್ರಾಮಸ್ಥರು, ಸ್ನೇಹಿತರಲ್ಲೂ ಎಲ್ಲಿಲ್ಲದ ಸಂತಸ ಮನೆಮಾಡಿದೆ.
Published by: MAshok Kumar
First published: September 4, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading