Republic Day: ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ವಿಶ್ವಾಸವಿಟ್ಟ ದೇಶ ಭಾರತ: ಸಚಿವ ಸಿ.ಸಿ. ಪಾಟೀಲ್

ದೇಶದ ಸಂವಿಧಾನವು ಭಾರತೀಯ ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳು ಹಾಗೂ 11 ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಇವುಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ, ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಸಿಸಿ ಪಾಟೀಲ್ ತಿಳಿಸಿದ್ದಾರೆ.

ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ. ಪಾಟೀಲ್.

ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ. ಪಾಟೀಲ್.

  • Share this:
ಗದಗ (ಜನವರಿ 26); ಪ್ರಜಾಪ್ರಭುತ್ವ ತತ್ವಗಳಲ್ಲಿ ಮೊದಲಿನಿಂದಲು ನಂಬಿಕೆ ವಿಶ್ವಾಸ ಇಟ್ಟುಕೊಂಡ ದೇಶ ನಮ್ಮದು. ಸಶಕ್ತ ಪ್ರಜಾಪ್ರಭುತ್ವವುಳ್ಳ ರಾಷ್ಟ್ರವನ್ನು ಕಟ್ಟಲು ಜಗತ್ತಿನಲ್ಲಿಯೇ ಬಲಾಡ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಶಕ್ತಿಯನ್ನು ನಮ್ಮ ಸಂವಿಧಾನವು ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್​ ತಿಳಿಸಿದ್ದಾರೆ. ಗದಗ-ಬೆಟಗೇರಿ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 72ನೇ ಗಣರಾಜ್ಯೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

"ದೇಶದ ಸಂವಿಧಾನವು ಭಾರತೀಯ ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳು ಹಾಗೂ 11 ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಇವುಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ, ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವ ಉತ್ತಮ ಕಾರ್ಯನಿರ್ವಹಣೆಗಾಗಿ ಎಲ್ಲ ಪ್ರಜೆಗಳು ರಾಷ್ಟ್ರ ಭಕ್ತಿ, ಐಕ್ಯತೆ, ಸಮಾನತೆಯ ಭಾವವನ್ನು ಬೆಳೆಸಿಕೊಳ್ಳುವುದು ಅವಶ್ಯಕ. ನಮ್ಮ ದೇಶದ ಜನಗಳ ಧರ್ಮ, ಭಾಷೆ, ಸಂಸ್ಕøತಿ, ಪಂಗಡ, ಸಂಪ್ರದಾಯ ಮತ್ತು ಪರಂಪರೆಗಳಿಗೆ ಧಕ್ಕೆ ಬಾರದಂತೆ ಸಮಸ್ತರನ್ನು ಐಕ್ಯತೆ ಮತ್ತು ಸಹಿಷ್ಣುತೆಯಲ್ಲಿ ಬೆಸೆಯುವಂತೆ ಸಂವಿಧಾನದ ಕರಡನ್ನು ಸಿದ್ದಪಡಿಸಿದ ಕೀರ್ತಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಹಾಗೂ ಸಂಗಡಿಗರಿಗೆ ಸಲ್ಲುತ್ತದೆ" ತಿಳಿಸಿದರು.

"ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳ 37 ಗ್ರಾಮ ಪಂಚಾಯತಿಗಳಿಗೆ ಅನುಮತಿ ನೀಡಿದ್ದು ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ 23 ಕೋಟಿ ರೂ. ಅನುದಾನ ನೀಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ವಸತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 3800 ಭೌತಿಕ ಗುರಿಯಲ್ಲಿ 1745 ಫಲಾನುಭವಿಗಳ ಮನೆಗಳು ಪೂರ್ಣಗೊಂಡಿದೆ. ಕೋವಿಡ್-19 ಮಹಾಮಾರಿಗೆ ಜನೇವರಿ 16 ರಿಂದ ಪ್ರಥಮ ಹಂತದಲ್ಲಿ ಲಸಿಕೆ ವಿತರಣೆ ಆರಂಭವಾಗಿದ್ದು ಲಸಿಕೆ ಪಡೆಯುವದರಿಂದ ಯಾವುದೇ ರೀತಿ ಅಡ್ಡ ಪರಿಣಾಮವಾಗದೇ ಲಸಿಕೆ ಯಶಸ್ವಿಯಾಗಿದೆ.

ಇದನ್ನೂ ಓದಿ: Farmers Protest: ರೈತರು ಭಯೋತ್ಪಾಕರೇ, ಹೊಟ್ಟೆಗೆ ಅನ್ನ ತಿನ್ನೋ ಜನ ಆಡೋ ಮಾತುಗಳೇ ಇವು?; ಕೋಡಿಹಳ್ಳಿ ಚಂದ್ರಶೇಖರ್​ ಕಿಡಿ

ಜಿಲ್ಲೆಗೆ 5500 ಡೋಸ್ ಲಸಿಕೆ ಜಿಲ್ಲೆಗೆ ಹಂಚಿಕೆಯಾಗಿದ್ದು ನಿಗದಿ ಪಡಿಸಿದ ಗುರಿಯಲ್ಲಿ ಶೇ.70ರಷ್ಟು ಸಾಧನೆಯಾಗಿದೆ. ಡಿಸೆಂಬರ ಅಂತ್ಯದವರೆಗೆ ಭಾಗ್ಯ ಲಕ್ಷ್ಮಿ ಯೋಜನೆಯಡಿ 73831 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು, 70970 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ ವಿತರಿಸಲಾಗಿದೆ. ಪಿ.ಎಮ್.ಕಿಸಾನ್ ಸಮ್ಮಾನ ಯೋಜನೆಯಡಿ ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ 10000ರೂಗಳನ್ನು ಜಮೆ ಮಾಡಲಾಗುತ್ತಿದ್ದು ಜಿಲ್ಲೆಯ 132231 ರೈತರ ಖಾತೆಗಳಿಗೆ ಅಂದಾಜು 79.34 ಕೋಟಿ ರೂ. ಪಾವತಿಯಾಗಿದೆ.

ಪ್ರಸಕ್ತ ಸಾಲಿನ ಅತಿವೃಷ್ಠಿಯಿಂದ ಬೆಳೆ ಹಾನಿಯಾದ 180595 ರೈತರುಗಳ ಪೈಕಿ 66700 ರೈತರುಗಳಿಗೆ 57.10ಕೋಟಿ ರೂ. ಪರಿಹಾರ ಒದಗಿಸಲಾಗಿದ್ದು ಸಧ್ಯದಲ್ಲಿಯೇ ಇನ್ನುಳಿದ ರೈತರಿಗೆ ಪರಿಹಾರ ನೀಡಲಾಗುವುದು. ಗದಗ-ಯಲವಿಗಿ ನಡುವಿನ 66 ಕಿ.ಮಿ, ದೂರದ ನೂತನ ರೈಲು ಮಾರ್ಗದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಮಂಜೂರಾತಿ ದೊರೆತಿದ್ದು ರಾಜ್ಯ ಸರ್ಕಾರದಿಂದ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ" ಎಂದು ಮಾಹಿತಿ ನೀಡಿದರು.
Published by:MAshok Kumar
First published: