HOME » NEWS » District » INCREASING CORONA INFECTION ON THE PART OF THE VILLAGE INCESSANT HEADACHES FOR LOCAL VILLAGE PANCHAYATS DKK MAK

CoronaVirus: ಹಳ್ಳಿ ಭಾಗದಲ್ಲೇ ಹೆಚ್ಚುತ್ತಿದೆ ಸೋಂಕು; ಸ್ಥಳೀಯ ಗ್ರಾಮ ಪಂ‌ಚಾಯತಿಗಳಿಗೆ ನಿಲ್ಲದ ತಲೆನೋವು!

ಈಗಾಗಲೆ ಅವರ್ಸಾ ಗ್ರಾಮದಲ್ಲಿ 88 ಜನರ ವರದಿ ಬಾಕಿ ಇದೆ. ಹೀಗೆ ಗ್ರಾಮೀಣ ಭಾಗದಲ್ಲಿ ತಲಾ ಐವತ್ತಕ್ಕೂ ಹೆಚ್ಚು ಜನರ ವರದಿ ಬರಬೇಕಿದೆ ಈಗಾಗಲೆ ಅವರ್ಸಾ ಎನ್ನೋ ಗ್ರಾಮದಲ್ಲಿ ನಾಲ್ವತ್ತು ಸೋಂಕಿತರು ಮನೆಯಲ್ಲೆ ಹೋಂ ಐಸೋಲೇಷನ್ ಆಗಿದ್ದಾರೆ.

news18-kannada
Updated:May 4, 2021, 7:17 AM IST
CoronaVirus: ಹಳ್ಳಿ ಭಾಗದಲ್ಲೇ ಹೆಚ್ಚುತ್ತಿದೆ ಸೋಂಕು; ಸ್ಥಳೀಯ ಗ್ರಾಮ ಪಂ‌ಚಾಯತಿಗಳಿಗೆ ನಿಲ್ಲದ ತಲೆನೋವು!
ಕಾರವಾರ.
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈ ನಡುವೆ ಆತಂಕಕಾರಿ ವಿಚಾರ ಎಂದ್ರೆ ಕೊರೋನಾ ಸೋಂಕು ಹಳ್ಳಿಗೂ ದಾಂಗುಡಿ ಇಟ್ಟಿದ್ದು ಗ್ರಾಮೀಣ ಭಾಗದಲ್ಲೆ ಹೆಚ್ಚು ಹೆಚ್ಚು ಪ್ರಕರಣ ಬೆಳಕಿಗೆ ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮ ಸೇರಿ ಹತ್ತಾರು ಗ್ರಾಮ ಗಳಲ್ಲಿ ಎರಡೇ ದಿನದಲ್ಲಿ ನಾಲ್ವತಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ..ಸೋಂಕಿತರ ಸಂಖ್ಯೆ ಇನ್ನೂ ಕೂಡಾ ದ್ವಿಗುಣವಾಗುವ ಸಾದ್ಯತೆ ಇದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರ ಗಂಟಲು ದ್ರವ ಪರೀಕ್ಷಾ ವರದಿ ಇನ್ನು ಕೂಡಾ ಬಂದಿಲ್ಲ ಇವರಲ್ಲಿ ಎಷ್ಟು ಸೋಂಕಿತರು ಇದ್ದಾರೆಯೋ ಗೊತ್ತಿಲ್ಲ. ಹೀಗೆ ಗ್ರಾಮೀಣ ಭಾಗದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ.

ಈಗಾಗಲೆ ಅವರ್ಸಾ ಗ್ರಾಮದಲ್ಲಿ 88 ಜನರ ವರದಿ ಬಾಕಿ ಇದೆ. ಹೀಗೆ ಗ್ರಾಮೀಣ ಭಾಗದಲ್ಲಿ ತಲಾ ಐವತ್ತಕ್ಕೂ ಹೆಚ್ಚು ಜನರ ವರದಿ ಬರಬೇಕಿದೆ ಈಗಾಗಲೆ ಅವರ್ಸಾ ಎನ್ನೋ ಗ್ರಾಮದಲ್ಲಿ ನಾಲ್ವತ್ತು ಸೋಂಕಿತರು ಮನೆಯಲ್ಲೆ ಹೋಂ ಐಸೋಲೇಷನ್ ಆಗಿದ್ದಾರೆ. ಬೆಂಗಳೂರಿನಿಂದ ಬಂದವರು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ ಅಂತೆ ಕೂಡಲೆ ಅವರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಆಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನೂ ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಸೋಂಕಿನ ಪ್ರಮಾಣ ತಗ್ಗಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲಿ ಟಾಸ್ಕ್ ಪೋರ್ಸ್ ಸಮೀನಿತಿ ರಚನೆ ಮಾಡಿದೆ ಈ ಸಮಿತಿಯಲ್ಲಿ ಆಯಾ ಗ್ರಾ.ಪಂ ಅಧ್ಯಕ್ಷರು ಸದಸ್ಯರು ಮತ್ತು ಪಿಡಿಒ ಗಳು ಇರುತ್ತಾರೆ. ಹಾಗೂ ಸ್ಥಳೀಯ ಆಶಾ ಕಾರ್ಯಕರ್ತರನ್ನು ಕೂಡಾ ಒಳಗೊಂಡಿರುತ್ತದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದವರ ಮೇಲೆ ನಿಗಾ ಇಡಲಾಗುತ್ತದೆ ಮತ್ತು ಸೋಂಕಿನ ಗುಣಲಕ್ಷಣ ಇದ್ದರೂ ಆಸ್ಪತ್ರೆಗೆ ಹೋಗದೆ ಬೇಕಾಬಿಟ್ಟಿ ಊರೂರು ಸುತ್ತುವವರ ಮೇಲೆ ನಿಗಾ ಇಡಲಾಗುತ್ತದೆ ಅಂತೆ..ಹೀಗೆ ವೇಗದಲ್ಲಿ ಹರಡುತ್ತಿರುವ ಸೋಂಕು ತಡೆಯಲು ಜಿಲ್ಲಾಡಳಿತ ಸನ್ನದವಾಗಿದೆ.

ಇದನ್ನೂ ಓದಿ: Covid Death: ಚಾಮರಾಜನಗರದಲ್ಲಿ ನಡೆದ ಕೋವಿಡ್ ಸಾವುಗಳು ಸರಕಾರಿ ಪ್ರಾಯೋಜಿತ ಕೊಲೆ : ಪಾಪ್ಯುಲರ್ ಫ್ರಂಟ್ ಆರೋಪ

ಮೊದಲ ಅಲೆಯಲ್ಲಿ ಮಹಾರಾಷ್ಟ್ರ ಭಯ, ಎರಡನೇ ಅಲೆಯಲ್ಲಿ ಬೆಂಗಳೂರು ಭಯ:

ಮೊದಲ ಅಲೆಯಲ್ಲಿ ಮಹಾರಾಷ್ಟ್ರ ವಲಸೆ ಬಂದವರೆ ಕೊರೋನಾ ಸೋಂಕನ್ನ ಹಳ್ಳಿ ಭಾಗದಲ್ಲಿ ಬೇರು ಬಿಡುವಂತೆ ಮಾಡಿದ್ರು, ಆದ್ರೆ ಮೊದಲ ಅಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸೋಂಕು ಹಳ್ಳಿ ಭಾಗವನ್ನ ಪಸರಿಸಿರಲಿಲ್ಲ ಆದ್ರೆ ಈಗ ಎರಡನೇ ಅಲೆಯಲ್ಲಿ ಕೊರೋನಾ ಹಳ್ಳಿ ಭಾಗದ ಜನರಿಗೆ ಆತಂಕ ಹುಟ್ಟಿಸುತ್ತಿದೆ ಪ್ರತಿ ಹಳ್ಳಿಯಲ್ಲೂ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಒಂದೊಂದು ದಿನ ನೂರರ ಗಡಿ ಸೋಂಕಿತರ ಸಂಖ್ಯೆ ದಾಟುತ್ತಿದೆ.
ಹೀಗೆ ಜನರಲ್ಲಿ ಭಯ ಮರುಗಟ್ಟಿದೆ...ಬೆಂಗಳೂರಿನಿಂದ ಬಂದವರು ರೋಗದ ಗುಣಲಕ್ಷಣ ಇದ್ರೂ ಕೂಡಾ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ‌ಬರುತ್ತಿದೆ. ಬೆಂಗಳೂರಿನಿಂದ ಬಂದವರ ಟ್ರೇಸ್ ಮಾಡೋದೆ ಸ್ಥಳೀಯ ಆಡಳಿತಕ್ಕೆ ತಲೆ‌ನೋವಾಗಿದೆ. ಹೀಗೆ ಹತ್ತು ಹಲವು ದಾರಿಯಲ್ಲಿ ಕೊರೋನಾ ಭಯ ಹಳ್ಳಿ ಜನರಲ್ಲಿ ಆವರಿಸಿದೆ.
Published by: MAshok Kumar
First published: May 4, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories