ಸಕ್ಕರೆನಾಡು ಮಂಡ್ಯದಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕೇಸ್​ಗಳು ; ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೂ ತಗುಲಿದ ಸೋಂಕು

ಸೋಂಕಿತ ಗರ್ಭಿಣಿ ‌ಮಹಿಳೆಗೆ ತಪಾಸಣೆ ಮಾಡಿದ ಕಾರಣಕ್ಕೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು‌ ಸೀಲ್​ಡೌನ್​​ ಮಾಡಿಲಾಗಿದೆ.

news18-kannada
Updated:July 3, 2020, 5:52 PM IST
ಸಕ್ಕರೆನಾಡು ಮಂಡ್ಯದಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕೇಸ್​ಗಳು ; ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೂ ತಗುಲಿದ ಸೋಂಕು
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ(ಜುಲೈ. 03): ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ತನ್ನ ಕದಂಬ ಬಾಹುವನ್ನು ಚಾಚುತ್ತಿದೆ. ದಿನೇ ದಿನೇ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ.ಅದರಲ್ಲೂ ಜಿಲ್ಲೆಯ ಗ್ರಾಮೀಣ ಭಾಗಗಳಿಗೂ ಹಬ್ಬಿರುವ ಕೊರೋನಾದಿಂದ ಗ್ರಾಮೀಣ ಜನರು ಕೆಂಗೆಟ್ಟಿದ್ದಾರೆ. ಇದುವರೆಗೂ ಬೇರೇ ಬೇರೆ ಜನರಿಗೆ  ಕೊರೋನಾ ಬಂದು ಏರಿಯಾಗಳು ಸೀಲ್​ಡೌನ್​​ ಆಗುತ್ತಿತ್ತು. ಆದರೆ, ಇದೀಗ ಆಸ್ಪತ್ರೆ ಸಿಬ್ಬಂದಿಗಳಿಗೆ ಕೊರೋನಾ ಬಂದಿದ್ದು ಜಿಲ್ಲೆಯ ಮೂರು ಆಸ್ಪತ್ರೆಗಳು  ಸೀಲ್​​ ಡೌನ್​​ ಆಗಿದ್ದು ಜನರು  ಇದೀಗ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಕೊರೋನಾ ಮಹಾ ಮಾರಿ ವಕ್ಕರಿಸಿದ್ದು,ಗ್ರಾಮೀಣ ಭಾಗದ ಜನರು ಆತಂಕಗೊಂಡಿದ್ದಾರೆ. ಮಂಡ್ಯ, ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ ಮಳವಳ್ಳಿ ಸೇರಿದಂತೆ ಇದುವರೆಗೂ ಕೊರೋನಾ ಮುಕ್ತವಾಗಿದ್ದ ಶ್ರೀರಂಗಪಟ್ಟಣ ತಾಲೂಕಿಗೂ ಇದೀಗ ಕೊರೋನಾ ವಕ್ಕರಿಸಿದೆ. ಇದರಿಂದಾಗಿ‌ ಸೊಂಕಿತರ ಪ್ರದೇಶಗಳು ಸೀಲ್​ಡೌನ್​​ ಆಗುತ್ತಿದ್ದು, ಜನರು ಭೀತಿಗೊಂಡಿದ್ದು, ಜೀವ ಭಯದಲ್ಲಿ ಬದುಕುವಂತಾಗಿದೆ.

ಜಿಲ್ಲೆಯ ಮೂರು ಸರ್ಕಾರಿ ಆಸ್ಪತ್ರೆ ಗಳು ಕೊರೋನಾ ಸೋಂಕಿತರಿಂದ ಸೀಲ್​ಡೌನ್ ಆಗಿವೆ. ಮಂಡ್ಯ ಜಿಲ್ಲೆ‌ ಮದ್ದೂರು ಪಟ್ಟಣದಲ್ಲಿ ರುವ ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಮತ್ತು‌ ತಾಲೂಕು‌ ಆರೋಗ್ಯಾಧಿಕಾರಿಯ ವಾಹನ ಚಾಲಕನಿಗೆ ಸೋಂಕು ಬಂದಿ ದ್ರಿಂದ ಮದ್ದೂರಿನ ಸಾರ್ವಜನಿಕ‌ ಆಸ್ಪತ್ರೆ ಸೀಲ್​ಡೌನ್​​ ಆಗಿದ್ದು, ಸ್ಯಾನಿಟೇಜ್ ಮಾಡಲಾ ಗಿದೆ.

ಇದನ್ನೂ ಓದಿ : ಧಾರವಾಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಅನಗತ್ಯ ಭಯ ಬೇಡ ; ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಇದರ ಜೊತೆಗೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ತಾಲೂಕು ಆಸ್ಪತ್ರೆಯ ಕಚೇರಿ ಸಿಬ್ಬಂದಿ ಮತ್ತು ನಾನ್ ಕ್ಲೀನಿಕಲ್ ಸಿಬ್ಬಂದಿಗೆ ಕೊರೋನಾ ಬಂದಿದ್ದು ಆಸ್ಪತ್ರೆಯನ್ನು ಕೂಡ ಸ್ಯಾನಿಟೇಜ್ ಮಾಡಿ ಸೀಲ್​ಡೌನ್​​ ಮಾಡಲಾಗಿದೆ. ಇದರ ಜೊತೆಗೆ ಸೋಂಕಿತ ಗರ್ಭಿಣಿ ‌ಮಹಿಳೆಗೆ ತಪಾಸಣೆ ಮಾಡಿದ ಕಾರಣಕ್ಕೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು‌ ಸೀಲ್​ಡೌನ್​​ ಮಾಡಿಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಮಹಾ ಮಾರಿಯ ಆರ್ಭಟಕ್ಕೆ ಜಿಲ್ಲೆಯ ಜನರು ನಲುಗಿ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾದಿಂದ ಜಿಲ್ಲೆಯ 3 ಆಸ್ಪತ್ರೆಗಳು ಸೀಲ್​ಡೌನ್​​ ಆಗಿದ್ದು ಸಣ್ಣ ಪುಟ್ಟದಿಂದ ಹಿಡಿದು ದೊಡ್ಡ ಖಾಯಿಲೆಗೆ ಸರ್ಕಾರಿ ಆಸ್ಪತ್ರೆಗಳು ತೆರಳುತ್ತಿದ್ದ ಬಡ ಜನರು ಇದೀಗ ಆಸ್ಪತ್ರೆಯತ್ತ ತೆರಳಲು ಭಯಪಡುತ್ತಿದ್ದಾರೆ. ಮತ್ತೊಂ ದು ಕಡೆ  ಆಸ್ಪತ್ರೆಗೆ ಬರಲು ವೈದ್ಯರು ಮತ್ತು ಸಿಬ್ಬಂದಿಗಳೇ ಹಿಂದೇಟು ಹಾಕುತ್ತಿದ್ದಾರೆ.
First published: July 3, 2020, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading