HOME » NEWS » District » INCREASED GROUND WATER LEVEL IN GADAG BETAGARI TWIN CITY MAK

ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾದ ಅಂತರ ಜಲ ಮಟ್ಟ; ಮನೆ-ಮಳಿಗೆಗಳಿಗಲ್ಲಿ ಜಿನುಗುಡುತ್ತಿರುವ ನೀರು..!

ಗದಗ ನಗರದ ಭೀಷ್ಮ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಅದರೊಂದಿಗೆ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ ಗದಗ- ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರಜಲ ಹೆಚ್ಚಳವಾಗಿದೆ. ತಗ್ಗು ಪ್ರದೇಶ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣದಲ್ಲಿ ನೀರು ಜಿನಗುಡುತ್ತಿದ್ದು, ವ್ಯಾಪಾರಸ್ಥರು ಹಾಗೂ ಬಡ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

news18-kannada
Updated:September 4, 2020, 7:17 AM IST
ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾದ ಅಂತರ ಜಲ ಮಟ್ಟ; ಮನೆ-ಮಳಿಗೆಗಳಿಗಲ್ಲಿ ಜಿನುಗುಡುತ್ತಿರುವ ನೀರು..!
ಮನೆಯಲ್ಲಿನ ನೀರನ್ನು ಮೋಟರ್‌ ಮೂಲಕ ಹೊರಹಾಕಲಾಗುತ್ತಿರುವುದು.
  • Share this:
ಗದಗ : ನಗರದ ಜನರು ಒಂದು ಕಾಲದಲ್ಲಿ ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ಇತ್ತು. ಆದರೆ, ಈವಾಗ ಅಂತರ್ಜಲ ಹೆಚ್ಚಾಗಿರೋದರಿಂದ ಮನೆ ಅಂಗಡಿ ಮುಗ್ಗಟ್ಟುಗಳಲ್ಲಿ ನೀರು ಬರುತ್ತಿದೆ. ಹೀಗಾಗಿ  ಜನರು ಬೆಚ್ಚಿ ಬಿದ್ದಿದ್ದಾರೆ. ಮನೆ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ನೀರು ಜಿನಗೂಡುತ್ತಿರೋದರಿಂದ ಜನರ ನೆಮ್ಮದಿ ಹಾಳಾಗಿದೆ. ಏನಾದರೂ ಮಾಡಿ ಅಂತಾ ಗದಗ ಬೆಟಗೇರಿ ಅವಳಿ ನಗರದ ಜನ್ರು ಒತ್ತಾಯ ಮಾಡ್ತಾಯಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ 15 ರಿಂದ 20 ದಿನಕ್ಕೆ ಒಂದು ಸಾರಿ ನೀರು ಬಂದ್ರೆ ಈ ಭಾಗದ ಜನ್ರ ಪುಣ್ಯ ಎನ್ನುವಂತಾಗಿತ್ತು. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ತುಂಗಭದ್ರಾ ನದಿ ನೀರನ್ನು ಅವಳಿ ನಗರಕ್ಕೆ ಬಿಡಲಾಗುತ್ತಿದ್ದು, ನೀರಿನ ಬವಣೆ ನೀಗಿದೆ. ಆದ್ರೆ ಅಷ್ಟೊಂದು ನೀರಿನ ಸಮಸ್ಯೆಗಳನ್ನು ಎದುರಿಸಿದ ಜನರಿಗೆ ಈವಾಗ ಅದೇ ನೀರು ಕಂಟಕವಾಗಿ ಪರಿಣಮಿಸಿದೆ.

ಗದಗ-ಬೆಟಗೇರಿ ಅವಳಿ ನಗರದ ಮುಂಡರಗಿ ನಾಕಾ, ವೀರನಾರಾಯಣ ದೇವಸ್ಥಾನದ ಪ್ರದೇಶ ಹಾಗೂ ಸರಾಪಗಟ್ಟಿ ಸೇರಿದಂತೆ ಬೆಟಗೇರಿ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ಜಿನಗುಡುತ್ತಿವೆ. ಹೀಗಾಗಿ ಮನೆಯಲ್ಲಿ ಹಾಗೂ ವಾಣಿಜ್ಯ ಸಂಕೀರ್ಣಗಳ ನೀರು ಹೊರಹಾಕಲು ನೀರು ಎತ್ತುವ ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಕಳೆದ ಎರಡು ವಾರದಿಂದ ಹೆಚ್ಚಿನ ಪ್ರಮಾಣದ ನೀರು ಬರ್ತಾಯಿದ್ದು, ರಾತ್ರಿ ಹಗಲು ಎನ್ನುದೆ ಜಿನಗುಡುವ ನೀರನ್ನು ಹೊರಹಾಕುತ್ತಿದ್ದಾರೆ. ಅವಳಿ ನಗರದ ಬೋರವೆಲ್ ಹಾಗೂ ಬಾವಿಗಳಿಗೆ ಹೆಚ್ಚಿನ ನೀರು ಬರ್ತಾಯಿದೆ. ಅಂತರಜಲ ಹೆಚ್ಚಾಗಿರೋದರಿಂದ ಜನ್ರು ರೋಸಿ ಹೋಗಿದ್ದಾರೆ.

ಗದಗ ನಗರದ ಭೀಷ್ಮ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಅದರೊಂದಿಗೆ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ ಗದಗ- ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರಜಲ ಹೆಚ್ಚಳವಾಗಿದೆ. ತಗ್ಗು ಪ್ರದೇಶ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣದಲ್ಲಿ ನೀರು ಜಿನಗುಡುತ್ತಿದ್ದು, ವ್ಯಾಪಾರಸ್ಥರು ಹಾಗೂ ಬಡ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಮೋದಿ ವೈಫಲ್ಯವನ್ನು ಮುಚ್ಚಿಹಾಕಲು ಯಡಿಯೂರಪ್ಪ ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ; ಸಿದ್ದರಾಮಯ್ಯ ಕಿಡಿ

ಇದಕ್ಕೆ ಗದಗ-ಬೆಟಗೇರಿ ನಗರಸಭೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲಾ. ಹೀಗಾಗಿ ಗಣಿ ಮಾತ್ತು ಭೂ ವಿಜ್ಞಾನ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಿದ್ದಾರೆ ಗದಗ- ಬೆಟಗೇರಿ ನಗರಸಭೆ ಆಯುಕ್ತರಾದ ಮನ್ಸೂರ್ ಅಲಿ.
Youtube Video

ಒಂದು ಕಾಲದಲ್ಲಿ ನೀರಿನ ಬವಣೆ ಅನುಭವಿಸಿ ಜನರಿಗೆ ಅದೇ ನೀರು ಕಂಟಕವಾಗಿದ್ದು, ಮನೆಗಳು ಶಿಥಿಲಗೊಳ್ಳುತ್ತಿವೆ. ಭಯದಲ್ಲಿ ಜೀವನ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ಗದಗ ಜಿಲ್ಲೆಯವರಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಸಿ ಸಿ ಪಾಟೀಲ್ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಬೇಕು ಅಂತಾ ಗದಗ- ಬೆಟಗೇರಿ ಜನರ ಆಗ್ರಹವಾಗಿದೆ.
Published by: MAshok Kumar
First published: September 4, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories