ಮಂಡ್ಯದಲ್ಲಿ ಹೆಚ್ಚಾದ ಅಪರಾಧ ಪ್ರಕರಣಗಳ ಸಂಖ್ಯೆ; 20 ದಿನದ ಅಂತರದಲ್ಲಿ12 ಜನರ ಬರ್ಬರ ಹತ್ಯೆ

ಚಿಕ್ಕೇಬಾಗಿಲು ಗ್ರಾಮದ ವೃದ್ದೆಯ ಕೊಲೆಯ ವಿಚಾರ  ಬೆಳಕವಾಡಿ ಪೊಲೀಸರ ವಿಚಾರಣೆಯಿಂದ ಬಯಲಿಗೆ ಬಂದಿದೆ. ಪ್ರಕರಣ  ಬಯಲಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆ ದೊಯ್ದು ಮಾಹಿತಿ ಪಡೆದು ಸಾಕ್ಷ್ಯ ಕಲೆ ಹಾಕಿದ್ದು ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

news18-kannada
Updated:September 22, 2020, 9:42 PM IST
ಮಂಡ್ಯದಲ್ಲಿ ಹೆಚ್ಚಾದ ಅಪರಾಧ ಪ್ರಕರಣಗಳ ಸಂಖ್ಯೆ; 20 ದಿನದ ಅಂತರದಲ್ಲಿ12 ಜನರ ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕ್ರೈಂ ಪ್ರಕರಣಗಳ ಸಂಖ್ಯೆ  ದಿನೇ ದಿನೇ ಹೆಚ್ಚಾಗ್ತಾನೆ ಇವೆ. ಕಳೆದ 20 ದಿನ ಗಳಲ್ಲಿ8 ಕ್ರೈಂ ನಡೆದಿದ್ದು 12ಜನರ ಬರ್ಬರ ಹತ್ಯೆಯಾ ಗಿದೆ. ಇದೀಗ ಹಣಕ್ಕಾಗಿ ವೃದ್ದೆಯನ್ನು ವ್ಯಕ್ತಿಯೋರ್ವ ಕೊಂದು ಶವ ಸುಟ್ಟು ಹಾಕಿ ರುವ ಮತ್ತೊಂದು ಅಪ ರಾಧ ಪ್ರಕರಣ ನಡೆದಿದ್ದು, ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಬೆಳಕವಾಡಿ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಹೌದು! ಸಕ್ಕರೆನಾಡು ಮಂಡ್ಯದಲ್ಲಿ ಅಪರಾಧ ಪ್ರಕರ ಣಗಳ ಸಂಖ್ಯೆ ದಿನೇ ದೀನೆ ಹೆಚ್ಚಾಗುತ್ತಿದ್ದು ಕಳೆದ 20 ದಿನಗಳಲ್ಲಿ 8ಅಪರಾಧ ಪ್ರಕರಣಗಳು ನಡೆದಿವೆ. 12 ಜನರ ಬರ್ಬರ ಹತ್ಯೆಯಾಗಿದ್ದು, ಅದರ ನಡುವೆ ಇದೀ ಗ ಮತ್ತೊಂದು ಬರ್ಬರ ಹತ್ಯೆ ನಡೆದಿದ್ದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಹಣಕ್ಕಾಗಿ ವೃದ್ದೆಯನ್ನು ಪರಿಚಯ ದ ವ್ಯಕ್ತಿಯೋರ್ವ ಕೊಂದು ಶವವನ್ನು ಸುಟ್ಟುಹಾಕಿದ್ದ ಪ್ರಕರಣವನ್ನು ಮಂಡ್ಯದ ಬೆಳಕವಾಡಿ ಭೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಳವಳ್ಳಿ ತಾಲೂಕಿನ  ಚಿಕ್ಕೇ ಬಾಗಿಲು ಗ್ರಾಮದ ವೃದ್ದೆ ಜಯಮ್ಮ(60) ಕೊಲೆಯಾದ ವೃದ್ದೆ ಯಾದ್ರೆ, ಅದೇ ಗ್ರಾಮದ ವ್ಯಕ್ತಿ ಸುರೇಶ್(40) ಕೊಲೆಗೈದ ಆ ರೋಪಿಯಾಗಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿ ಸುರೇಶ್ ಚಿಕ್ಕೇಬಾಗಿಲು ಗ್ರಾಮ ದವನೇ ಆಗಿದ್ದು ಕೊಲೆಯಾದ ಜಯಮ್ಮ ಮನೆ ಪಕ್ಕವೇ ವಾಸ ಮಾಡುತ್ತಿದ್ದ. ವೃದ್ದೆ ಜಯಮ್ಮ ಗ್ರಾಮದಲ್ಲಿ ಅಲ್ಪಸ್ವಲ್ಪ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಈಕೆಯ  ಎರಡನೇ ಮಗ ಕುಮಾರ್ ಗೆ ಹೆಣ್ಣು ತೋರಿಸುವುದಾಗಿ ಕಾರಿನಲ್ಲಿ ಸೆ-17 ರಂದು ಊರಿನಿಂದ ಕರೆದೊಯ್ದಿದ್ದ ಕೊಳ್ಳೆಗಾಲ ತಾಲೂಕಿನ ಧನಗೆರೆ ಬಳಿ ವೃದ್ದೆಯನ್ನು ಕಲ್ಲಿನಿಂದ ತಲೆಗೆ ಒಡೆದು ಸಾಯಿಸಿ ಕೊಲೆಗೈದು ಆಕೆ ಬಳಿ ಇದ್ದ ಹಣ ಒಡೆವೆ ಕಸಿದು ಶವನ್ನು ಅಲ್ಲೆ ಎಸೆದು ಬಂದಿದ್ದ.

ಇದನ್ನೂ ಓದಿ : ಚಿಕ್ಕಬಳ್ಳಾಪುರ ಗಾಂಜಾ ಗ್ಯಾಂಗ್ ಮೇಲೆ ಪೊಲೀಸರ ದಾಳಿ ಹಲವರ ಬಂಧನ

ಮಾರನೇ ದಿನ ಬಂದು ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಓಡಾಡಿ‌  ಕಡೆಗೆ  ಮೈಸೂರಿನ ವರುಣಾ ನಾಲೆ ಬಳಿ ಶವಕ್ಕೆ ಪೆಟ್ರೋಲ್ ಸುರಿದು ಸಂಪೂರ್ಣವಾಗಿ ಸುಟ್ಟು ಹಾಕಿದ್ದ. ಇತ್ತ ಗ್ರಾಮದಲ್ಲಿ ವೃದ್ದೆ ಕಾಣೆಯಾದ ಬಗ್ಗೆ ಕಿರಿಯ ಮಗ ಕುಮಾರ್ ಬೆಳಕವಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಪಡೆದು ತನಿಖೆ ನಡೆಸಿದಾಗ ಆರೋಪಿ ಸುರೇಶ್ ಕೂಡ ವೃದ್ದೆ ಕಾಣೆ ಯಾದ ದಿನವೇ ನಾಪತ್ತೆಯಾಗಿದ್ದ. ಈ ಜಾಡು ಹಿಡಿದು ಹೊರಟ ಪೊಲೀಸರಿಗೆ ಸೆ-20 ರಂದು ಜವಗನಹಳ್ಳಿ  ಕಾರಿನಲ್ಲಿ ಅನುಮಾನಸ್ಪದವಾಗಿ ಸುರೇಶ್ ಸಿಕ್ಕಿದ್ದ. ಈ ವೇಳೆ ವಿಚಾರಣೆ ಆರಂಭಿಸಿ ಪೊಲೀಸರಿಗೆ ಆರೋಪಿ ಸುರೇಶ್ ವೃದ್ದೆಯ ಕೊಲೆಯ ಪ್ರಕರಣ ಬಾಯ್ಬಿಟ್ಟಿದ್ದಾನೆ.

ಒಟ್ಟಾರೆ  ಚಿಕ್ಕೇಬಾಗಿಲು ಗ್ರಾಮದ ವೃದ್ದೆಯ ಕೊಲೆಯ ವಿಚಾರ  ಬೆಳಕವಾಡಿ ಪೊಲೀಸರ ವಿಚಾರಣೆಯಿಂದ ಬಯಲಿಗೆ ಬಂದಿದೆ. ಪ್ರಕರಣ  ಬಯಲಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆ ದೊಯ್ದು ಮಾಹಿತಿ ಪಡೆದು ಸಾಕ್ಷ್ಯ ಕಲೆ ಹಾಕಿದ್ದು ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಭೇಧಿಸಿದ ಬೆಳಕವಾಡಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಶಂಸಿದ್ದಾರೆ.
Published by: MAshok Kumar
First published: September 22, 2020, 9:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading